ಕೊರೊನಾದಿಂದ ತತ್ತರಿಸಿದ ನಡುವೆ ತಾಲಿಬಾನ್ ಆಡಳಿತದ ಸಂಕಷ್ಟದಲ್ಲಿರುವ ಅಫ್ಘನ್ನಲ್ಲಿ ಏಕಾಎಕಿ ದಡಾರ ರೋಗ ಕಾಣಿಸಿಕೊಂಡಿದ್ದು ಮಾರಕ ರೋಗಕ್ಕೆ 74 ಮಕ್ಕಳು ಮೃತಪಟ್ಟಿರುವುದಾಗಿ ವರದಿಯಾಗಿದೆ. ಇಲ್ಲಿನ ಉತ್ತರ ಪ್ರಾಂತ್ಯದ ಬಡಾಕ್ಷನ್ನಲ್ಲಿ ದಡಾರ ಹರಡುತ್ತಿದೆ ಎಂದು ವರದಿಯಾಗಿದೆ. ಕೆಲ ವರ್ಷಗಳ ಹಿಂದೆ ದಡಾರ ರೋಗವು ಸಂಪೂರ್ಣ ಮರೆಯಾಗಿದೆ ಎನ್ನಲಾಗಿತ್ತು. ಅಪರೂಪ ಎಂಬುವಂತೆ ಪ್ರಕರಣ ಪತ್ತೆಯಾಗಿ ಸಾವು ಸಂಭವಿಸುತ್ತಿತ್ತು. ಆದರೆ ಇದೀಗ ಈ ಮಾರಕ ರೋಗಕ್ಕೆ 74 ಮಕ್ಕಳು ಬಲಿಯಾಗಿದ್ದು, ಅಫ್ಘನ್ನಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ. ಈ ಬಹುತೇಕ ಸಾವಿಗೆ ಕಾರಣ ಸರಿಯಾದ ಚಿಕಿತ್ಸೆ ಮತ್ತು ದಡಾರ ಲಸಿಕೆ ಅಲಭ್ಯ ಎನ್ನಲಾಗ್ತಿದೆ.
©2021 Tulunada Surya | Developed by CuriousLabs