Monday, November 29, 2021

ಮಂಗಳೂರು: ‘ಡಿ. 8ರವರೆಗೆ ಕೊರೊನಾ ಮಾರ್ಗಸೂಚಿ ವಿಸ್ತರಣೆ’

ಕೋವಿಡ್-19 ಕಣ್ಣಾವಲು, ನಿಯಂತ್ರಣ ಮತ್ತು ಜಾಗೃತಿಗೆ ಸಂಬಂಧಿಸಿದ ಮಾರ್ಗಸೂಚಿಗಳು ಹಾಗೂ ಈ ಮಾರ್ಗಸೂಚಿಗಳಿಗೆ ಸಂಬಂಧಿಸಿ ಹೊರಡಿಸಿರುವ ಸರ್ಕಾರದ ವಿಸ್ತರಣೆ ಆದೇಶಗಳನ್ನು ಡಿಸೆಂಬರ್ 8ರ ಬೆಳಗ್ಗೆ 6 ಗಂಟೆವರೆಗೆ ಮುಂದುವರಿಸಿ ಆದೇಶ...
More

  Latest Posts

  ಆಸ್ಪತ್ರೆ ಸಿಬ್ಬಂದಿ ಎಡವಟ್ಟು : 15 ತಿಂಗಳು ಶವಗಾರದಲ್ಲೇ ಕೊಳೆತ ಕೋವಿಡ್ ಸೋಂಕಿತರ ಮೃತ ದೇಹಗಳು!

  ಬೆಂಗಳೂರು: ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ ಇಬ್ಬರ ಶವಗಳು ಸುಮಾರು 15 ತಿಂಗಳು ಶವಾಗಾರದಲ್ಲೇ ಕೊಳೆತ ವಿಚಾರ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ನಗರದ...

  ಮುಲ್ಕಿ: ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ಪರಾರಿ!

  ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ನಿನ್ನೆ ಸಂಜೆ ಪರಾರಿಯಾಗಿದ್ದಾನೆ. ದಾವಣಗೆರೆ ನಿವಾಸಿಯಾದ ವಿಚಾರಣಾಧೀನ ಕೈದಿಯನ್ನು ಕಳ್ಳತನದ ಆರೋಪದ ಮೇಲೆ ಮುಲ್ಕಿ ಪೊಲೀಸರು...

  ಸಾರ್ವಜನಿಕ ಬಸ್ಸು ತಂಗುದಾಣವನ್ನು ಅಡುಗೆ ಮನೆ ಮಾಡಿದ ಕೂಲಿ ಕಾರ್ಮಿಕರು……! ಕಣ್ಣು ಮುಚ್ಚಿ ಕುಳಿತ ಆಡಳಿತ ಅಧಿಕಾರಿಗಳು

  ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂಗಲ್ಪಾಡಿ ದೇವಸ್ಥಾನದ ಎದುರುಗಡೆ ಇರುವ ಬಸ್ ತಂಗುದಾಣದಲ್ಲಿ ಕೆಲ ದಿನಗಳಿಂದ ಯಾವುದೊ ಕೂಲಿ ಕಾರ್ಮಿಕರು ಮನೆಯಂತೆ ಸಾರ್ವಜನಿಕ ಬಸ್ಸು ತಂಗುದಾಣದಲ್ಲಿ ಅಡುಗೆ ಮಾಡಿ ವಾಸಿಸುತ್ತಿದ್ದಾರೆ.

  ಬೆಂಗಳೂರಿನ ಕೆ.ಆರ್‌. ಮಾರ್ಕೆಟ್‌ನಲ್ಲಿ ಅಗ್ನಿ ಅವಗಢ; ಅಗ್ನಿಶಾಮಕ ದಳ ಆಗಮನ

  ಬೆಂಗಳೂರು: ನಗರದ ಕೆ.ಆರ್.‌ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮಾರುಕಟ್ಟೆಯ ಕೊರಿಯರ್‌ ಗೋಡೌನ್‌ನಿಂದ ದಟ್ಟ ಹೊಗೆ ಹರಡಿದೆ. ಕೆ.ಆರ್‌. ಮಾರುಕಟ್ಟೆಯ ಗೋಡೌನ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ....

  ಮರುಭೂಮಿಯನ್ನು ಹಸಿರುಮಯವಾಗಿಸಲು ಕ್ರೌಡ್ ಫಂಡಿಂಗ್ ಅಭಿಯಾನ ಶುರು ಮಾಡಿದ 15ರ ಪೋರ..!

  ವ್ಯಕ್ತಿಯ ಜೀವ ಸಾವು ಬದುಕಿನ ನಡುವೆ ಇದ್ದ ವೇಳೆ, ಕಷ್ಟದಲ್ಲಿದ್ದವರ ಬದುಕಿಗಾಗಿ, ಇತ್ತೀಚೆಗೆ ಆರೋಗ್ಯ ಸಂಬಂಧಿತ ಅಂದರೆ ಕೊರೋನಾ ಕಾರಣ ಜೀವಗಳ ಉಳಿವಿಗಾಗಿ ಕ್ರೌಡ್‍ಫಂಡಿಂಗ್ ಅಭಿಯಾನ ಶುರುಮಾಡುತ್ತಾರೆ. ಇದರಿಂದ ಬಂದ ಮೊತ್ತವನ್ನು ಅವಶ್ಯಕತೆ ಇರುವವರಿಗೆ ತಲುಪಿಸಲಾಗುತ್ತದೆ. ಆದರೆ ಇಲ್ಲೊಬ್ಬ 15 ವರ್ಷದ ಹುಡುಗ ಅಮೃತವಾಹಿನಿಯಾದ ಗಿಡ-ಮರಗಳ ಬೆಳವಣಿಗೆಗೆ ಕ್ರೌಡ್ ಫಂಡಿಂಗ್ ಅಭಿಯಾನ ಶುರುಮಾಡಿದ್ದಾರೆ. ಅದರಲ್ಲೂ ಶುಷ್ಕ ಪ್ರದೇಶದಲ್ಲಿ ನೀರಿನ ಅಭಾವ ನೀಗಿಸಿ ಅಲ್ಲಿನ ಜನರಿಗೆ ಕೊಂಚ ಮಟ್ಟಿಗೆ ಅನುಕೂಲ ಮಾಡಿಕೊಡುವ ಆಲೋಚನೆ ಈ ಬಾಲಕನದ್ದು.

  11ನೇ ತರಗತಿಯ ವಿದ್ಯಾರ್ಥಿ ರಾಜಸ್ಥಾನದ ಸಿಕಾರ್ ಜಿಲ್ಲೆಯ (Rajasthan’s Sikar District) ಗುರುಗ್ರಾಮದಲ್ಲಿನ ಶುಷ್ಕ ಪ್ರದೇಶಗಳಲ್ಲಿ ಗಿಡಗಳನ್ನು ನೆಡಲು ಕ್ರೌಡ್‍ಫಂಡಿಂಗ್ ಅಭಿಯಾನ ಆರಂಭಿಸಿದನು. ಈತನ ವಯಸ್ಸು ಕೇವಲ ಹದಿನೈದು ವರ್ಷ. ಈ ಚಿಕ್ಕ ವಯಸ್ಸಿನಲ್ಲಿ ಮರ-ಗಿಡ, ಪರಿಸರದ ಬಗ್ಗೆ ಕಾಳಜಿ ವಹಿಸುತ್ತಿರುವ ಹುಡುಗನೇ ಆದಿ ದೈವ್. ಗುರುಗ್ರಾಮದ ಮೌಲ್ಸರಿಯಲ್ಲಿರುವ ಶ್ರೀ ರಾಮ್ ಶಾಲೆಯ ವಿದ್ಯಾರ್ಥಿ, ಈತ ಕೆಲವು ವಿಧಾನಗಳು ಹಾಗೂ ಹಿರಿಯರ ಸಲಹೆ ಸೂಚನೆ ಮೇರೆಗೆ ಶುಷ್ಕ ಪ್ರದೇಶಗಳಲ್ಲಿ ನೀರಿನ ಕೊರತೆಯನ್ನು ನೀಗಿಸುವ ಸಲುವಾಗಿ ಪ್ರಾಜೆಕ್ಟ್ ಉರ್ವಾರ ಎಂಬ ಹೆಸರಿನಲ್ಲಿ ಈ ಮಹತ್ಕಾರ್ಯ ಆರಂಭಿಸಿದ್ದಾನೆ.

  “ಎರಡು ವರ್ಷಗಳ ಹಿಂದೆ ನಾನು ನೀರಿನ ಕೊರತೆ ಮತ್ತು ಶುಷ್ಕ ಪ್ರದೇಶಗಳಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ವ್ಯಾಪಕ ಸಂಶೋಧನೆ ಮಾಡಿದ್ದೇನೆ. ನಾನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಪರಿಸರವಾದಿ ಸುಂದರಂ ವರ್ಮಾ ಜಿ ಅವರೊಂದಿಗೆ ಸಂವಾದ ನಡೆಸಿದ್ದು, ಅವರು ಈಗಾಗಲೇ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ‘ಒಂದು-ಲೀಟರ್ ನೀರಿನ ತಂತ್ರ’ದೊಂದಿಗೆ ವೈವಿಧ್ಯಮಯ ಸಸ್ಯವರ್ಗ ಬೆಳೆಸುವ ಬಗ್ಗೆ ನನಗೆ ಕಲಿಸಿದರು “ಎಂದು ಆದಿ ಹೇಳಿದರು. ಪಾನಿ (PAANI) ಎಂಬ ಫೌಂಡೇಶನ್ ಆಯೋಜಿಸಿದಂತಹ ಕಾರ್ಯಾಗಾರಗಳಿಗೆ ಹಾಜರಾಗುವುದರಿಂದ ರಾಜಸ್ಥಾನದಂತಹ ರಾಜ್ಯಗಳಲ್ಲಿ ನೀರಿನ ಅಭಾವಕ್ಕೆ ಅರಣ್ಯನಾಶವೇ ಮೂಲ ಕಾರಣ ಎಂದು ಅರ್ಥವಾಯಿತು ಎಂದು ಅವರು ಹೇಳಿದರು.

  ಒಂದು-ಲೀಟರ್ ನೀರಿನ ತಂತ್ರವನ್ನು ವಿವರಿಸಿದ ಆದಿ, ಈ ಪ್ರಕ್ರಿಯೆಯು ಆರಂಭಕ್ಕೆ ಐದು ದಿನಗಳ ಮೊದಲು ಮತ್ತು ಮಳೆಗಾಲದ ಮುಕ್ತಾಯದ ನಂತರ 30 ಸೆಂಟಿಮೀಟರ್ ಆಳವಾದ ಮಣ್ಣಿನ ಉಳುಮೆ ಅಗತ್ಯವಿದೆ ಎಂದು ಹೇಳಿದರು. ಈ ಪ್ರಕ್ರಿಯೆಯ ಮೂಲಕ, ಕಳೆಗಳನ್ನು ತೆಗೆದುಹಾಕುವುದು ಮತ್ತು ಮಣ್ಣಿನ ಮೇಲ್ಮೈಯಲ್ಲಿ ಕ್ಯಾಪಿಲರಿ ಕ್ರಿಯೆ ನಿಯಂತ್ರಿಸುವ ಮೂಲಕ ಮಣ್ಣಿನ ತೇವಾಂಶ ಹೀರಿಕೊಳ್ಳಬಹುದು.

  “ನಮ್ಮ ಯೋಜನೆಯು ವಿಶೇಷವಾಗಿ ಹಳ್ಳಿ ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುತ್ತದೆ. ಏಕೆಂದರೆ ಅವರು ತಮ್ಮ ಬಿಡುವಿನ ಸಮಯದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಯಬಹುದು ಮತ್ತು ಅವುಗಳನ್ನು ಮಾರಾಟ ಮಾಡಿ ತಮ್ಮ ಜೀವನ ನಿರ್ವಹಿಸಬಹುದು” ಎಂದು ಅವರು ಹೇಳಿದರು ಮತ್ತು ಉಪ ಉತ್ಪನ್ನವಾಗಿ ಪಡೆದ ಮೇವನ್ನು ಪ್ರಾಣಿಗಳಿಗೆ ಆಹಾರಕ್ಕಾಗಿ ಬಳಸಬಹುದು ಮತ್ತು ಮರಗಳಿಂದ ಹೊರತೆಗೆಯಲಾದ ಕಚ್ಚಾ ವಸ್ತುಗಳನ್ನು ಕುಶಲಕರ್ಮಿಗಳು ಮತ್ತು ಇತರ ಸಣ್ಣ-ಪ್ರಮಾಣದ ಕೈಗಾರಿಕೆಗಳು ಬಳಸಬಹುದು ಎಂದು ಆಗುವ ಪ್ರಯೋಜನಗಳನ್ನು ವಿವರಿಸಿದರು.

  ಇತ್ತೀಚಿನ ದಿನಗಳಲ್ಲಿ ಕ್ರೌಡ್​ ಫಂಡಿಂಗ್​ ಅನ್ನು ಅರ್ಥಪೂರ್ಣವಾಗಿ ಮತ್ತು ಸುಲಲಿತವಾಗಿ ಯುವ ಸಮುದಾಯ ಬಳಸಿಕೊಳ್ಳುತ್ತಿದೆ. ಇದಕ್ಕೆ ಅನುಗುಣವಾಗಿ 15 ವರ್ಷದ ಹುಡುಗ ಆರಂಭಿಸಿರುವ ಕ್ರೌಡ್​ ಫಂಡಿಂಗ್​ (Crowd Funding) ಕಾರ್ಯಕ್ಕೆ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ. ಶಾಲೆಯಲ್ಲಿ ಓದುವ ಬಾಲಕನಿಗೆ ಪರಿಸರದ ಮೇಲಿರುವ ಕಾಳಜಿಯನ್ನು ಜನ ಶ್ಲಾಘಿಸುತ್ತಿದ್ದಾರೆ. ಹವಾಮಾನ ವೈಪರೀತ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಇಂದಿನ ಸಂದರ್ಭದಲ್ಲಿ ಗ್ರೇಟಾ ಥನ್ಬರ್ಗ್​ (Greta Thunberg) ಮತ್ತು ಆದಿ ದೈವ್​ ಮಾಡುತ್ತಿರುವ ಕೆಲಸಕ್ಕೆ ಎಲ್ಲರೂ ಸಹಕಾರ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಪರಿಸರದ ಸಂರಕ್ಷಣೆಗೆ ದೊಡ್ಡ ದಾರಿ ಸೃಷ್ಟಿಯಾದಂತಾಗುತ್ತದೆ.

  Latest Posts

  ಆಸ್ಪತ್ರೆ ಸಿಬ್ಬಂದಿ ಎಡವಟ್ಟು : 15 ತಿಂಗಳು ಶವಗಾರದಲ್ಲೇ ಕೊಳೆತ ಕೋವಿಡ್ ಸೋಂಕಿತರ ಮೃತ ದೇಹಗಳು!

  ಬೆಂಗಳೂರು: ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ ಇಬ್ಬರ ಶವಗಳು ಸುಮಾರು 15 ತಿಂಗಳು ಶವಾಗಾರದಲ್ಲೇ ಕೊಳೆತ ವಿಚಾರ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ನಗರದ...

  ಮುಲ್ಕಿ: ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ಪರಾರಿ!

  ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ನಿನ್ನೆ ಸಂಜೆ ಪರಾರಿಯಾಗಿದ್ದಾನೆ. ದಾವಣಗೆರೆ ನಿವಾಸಿಯಾದ ವಿಚಾರಣಾಧೀನ ಕೈದಿಯನ್ನು ಕಳ್ಳತನದ ಆರೋಪದ ಮೇಲೆ ಮುಲ್ಕಿ ಪೊಲೀಸರು...

  ಸಾರ್ವಜನಿಕ ಬಸ್ಸು ತಂಗುದಾಣವನ್ನು ಅಡುಗೆ ಮನೆ ಮಾಡಿದ ಕೂಲಿ ಕಾರ್ಮಿಕರು……! ಕಣ್ಣು ಮುಚ್ಚಿ ಕುಳಿತ ಆಡಳಿತ ಅಧಿಕಾರಿಗಳು

  ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂಗಲ್ಪಾಡಿ ದೇವಸ್ಥಾನದ ಎದುರುಗಡೆ ಇರುವ ಬಸ್ ತಂಗುದಾಣದಲ್ಲಿ ಕೆಲ ದಿನಗಳಿಂದ ಯಾವುದೊ ಕೂಲಿ ಕಾರ್ಮಿಕರು ಮನೆಯಂತೆ ಸಾರ್ವಜನಿಕ ಬಸ್ಸು ತಂಗುದಾಣದಲ್ಲಿ ಅಡುಗೆ ಮಾಡಿ ವಾಸಿಸುತ್ತಿದ್ದಾರೆ.

  ಬೆಂಗಳೂರಿನ ಕೆ.ಆರ್‌. ಮಾರ್ಕೆಟ್‌ನಲ್ಲಿ ಅಗ್ನಿ ಅವಗಢ; ಅಗ್ನಿಶಾಮಕ ದಳ ಆಗಮನ

  ಬೆಂಗಳೂರು: ನಗರದ ಕೆ.ಆರ್.‌ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮಾರುಕಟ್ಟೆಯ ಕೊರಿಯರ್‌ ಗೋಡೌನ್‌ನಿಂದ ದಟ್ಟ ಹೊಗೆ ಹರಡಿದೆ. ಕೆ.ಆರ್‌. ಮಾರುಕಟ್ಟೆಯ ಗೋಡೌನ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ....

  Don't Miss

  ರಷ್ಯಾದಲ್ಲಿ ಕಲ್ಲಿದ್ದಲು ಗಣಿ ದುರಂತ: 52 ಮಂದಿ ದಾರುಣ ಸಾವು

  ಮಾಸ್ಕೊ: ರಷ್ಯಾದ ಕೆಮೆರೊವೊ ಎಂಬಲ್ಲಿ ಸಂಭವಿಸಿದ ಕಲ್ಲಿದ್ದಲು ಗಣಿ ದುರಂತದಲ್ಲಿ 52 ಗಣಿಕಾರ್ಮಿಕರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈ ಐದು ವರ್ಷಗಳಲ್ಲಿ ನಡೆದ ಅತಿ ದೊಡ್ಡ ಗಣಿ...

  SSLC ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಶೇ. 20 ರಷ್ಟು ಪಠ್ಯ ಕಡಿತಕ್ಕೆ ಮುಂದಾದ ಶಿಕ್ಷಣ ಇಲಾಖೆ

  ಬೆಂಗಳೂರು (ನ. 26): ಎಸ್‌ಎಸ್‌ಎಲ್‌ಸಿ (SSLC Students ) ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್! ಶೇ. 20 ರಷ್ಟು ಪಠ್ಯ ಕಡಿತಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ.  ಕೊರೋನಾದಿಂದ ಪ್ರಸಕ್ತ...

  BIG BREAKING: ದಕ್ಷಿಣ ಕನ್ನಡ ಸರಕಾರಿ ವೈದ್ಯನ ರಾಸಲೀಲೆ; ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಗಳ ಜೊತೆ ರಂಗಿನಾಟ!

  ಮಂಗಳೂರು: ಗುತ್ತಿಗೆ ಆಧಾರದಲ್ಲಿರುವ ಯುವತಿಯರ ಜೊತೆ ಸರಸ ಸಲ್ಲಾಪವಾಡುತ್ತಿದ್ದ ಮಂಗಳೂರಿನ ಪ್ರತಿಷ್ಠಿತ ವೆನ್ಲಾಕ್ ಆಸ್ಪತ್ರೆಯಲ್ಲಿ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಆಗಿರುವ ಡಾ.ರತ್ನಾಕರ್ ಅವರ ಕಾಮಪುರಾಣ ಬಯಲಾಗಿದೆ. ಈ ದೃಶ್ಯಗಳು ಸಾಮಾಜಿಕ...

  ಮಂಗಳೂರು: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ; ಆರೋಪಿಗಳು 4 ದಿನ ಪೊಲೀಸ್ ಕಸ್ಟಡಿಗೆ

  ಮಂಗಳೂರು: ವಾಮಂಜೂರು ಉಳಾಯಿಬೆಟ್ಟು ಪರಾರಿಯ ಟೈಲ್ಸ್ ಫ್ಯಾಕ್ಟರಿಯಲ್ಲಿ 8 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ...

  ಮಂಗಳೂರು: ಇಂದಿನಿಂದ ‘ಬೃಹತ್ ಕೋವಿಡ್ ವಾಕ್ಸಿನ್ ಮೇಳ’ ಆರಂಭ

  ಮಂಗಳೂರು: ನಗರದಲ್ಲಿ ಕೊವೀಡ್ ರೋಗ ನಿರೋಧಕ ಲಸಿಕೆ ಪ್ರಗತಿ ಹೆಚ್ಚಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆಯಲ್ಲಿ ಬೃಹತ್ ಕೋವಿಡ್ ಲಸಿಕಾ ಶಿಬಿರ ಆರಂಭವಾಗಲಿದೆ.