Friday, March 29, 2024
spot_img
More

    Latest Posts

    ಬೆಳ್ತಂಗಡಿ: ಅರಣ್ಯದಂಚಿನಲ್ಲಿರುವ ಬಾಂಜಾರು ಮಲೆಯಲ್ಲಿ ಇಂದು ಕೋವಿಡ್ ಲಸಿಕೆ

    ಬೆಳ್ತಂಗಡಿ: ಅರಣ್ಯದಂಚಿನಲ್ಲಿರುವ ತಾಲೂಕಿನ ಬಾಂಜಾರು ಮಲೆ ಗ್ರಾಮಕ್ಕೆ ಕಡೆಗೂ ಕೋವಿಡ್ ಲಸಿಕೆ ಲಭಿಸಿದ್ದು, ಮಂಗಳವಾರ ಆರೋಗ್ಯ ಇಲಾಖೆ ಸಿಬಂದಿಗಳು ಲಸಿಕೆ ವಿತರಿಸಿದರು. ಕಳೆದ ಎರಡು ವರ್ಷಗಳಿಂದ ಈ ಗ್ರಾಮಕ್ಕೆ ಕೋವಿಡ್ ಬಾಧಿಸಿರಲಿಲ್ಲ, ಆದರೂ ಇಲ್ಲಿನ ಮಂದಿ ಅಗತ್ಯ ವಸ್ತುಗಳಿಗೆ ಕಕ್ಕಿಂಜೆ ಪೇಟೆ ಬರುತ್ತಿರುವುದರಿಂದ ಮುನ್ನೆಚ್ಚರಿಕೆಯಾಗಿ ಕೋವಿಡ್ ಲಸಿಕೆ ಪಡೆಯುವಂತೆ ಶಾಸಕರು ಹಾಗೂ ಆರೋಗ್ಯ ಇಲಾಖೆ ಮನವರಿಕೆ ಮಾಡಿತ್ತು.

    ಅದರಂತೆ ಬಾಂಜಾರು ಮಲೆ ಸಮುದಾಯ ಭವನದಲ್ಲಿ ಮಂಗಳವಾರ ಬೆಳಗ್ಗೆ ವ್ಯಾಕ್ಸಿನ್‌ಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ೪೫ ಮೇಲ್ಪಟ್ಟು ಗ್ರಾಮದಲ್ಲಿ ೫೯ ಮಂದಿ ಇದ್ದು ೩೬ ಮಂದಿ ವ್ಯಾಕ್ಸಿನ್ ಪಡೆದರು.

    ನೆರಿಯ ಪ್ರಾ.ಆ.ಕೇಂದ್ರ ವೈದ್ಯಾಧಿಕಾರಿ ಡಾ.ವಾಣಿಶ್ರೀ, ಸಂಚಾರಿ ಗಿರಿಜನ ಆರೋಗ್ಯ ಘಟಕ ವೈದ್ಯಾಧಿಕಾರಿ ಡಾ. ಸುನೀಲ್ ಕುಮಾರ್, ಕಿರಿಯ ಆರೋಗ್ಯ ಸಹಾಯಕಿ ಸರೋಜ ಕೆ., ಆಶಾಕಾರ್ಯಕರ್ತೆಯರಾದ ಮರಿಯಮ್ಮ, ಮಮತಾ, ಗ್ರಾಮ ಸಹಾಯಕ ವಿ.ಹರೀಶ್. ಲಸಿಕೆ ನೀಡುವಲ್ಲಿ ಸಹಕರಿಸಿದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss