Monday, November 29, 2021

ಮಂಗಳೂರು: ನಾಗಬನ ಧ್ವಂಸ ಪ್ರಕರಣ; 8 ಆರೋಪಿಗಳ ಬಂಧನ

ಮಂಗಳೂರು: ನಗರದ ಕೂಳೂರು ಹಾಗೂ ಕೋಡಿಕಲ್ ನಲ್ಲಿ ನಾಗಬನಕ್ಕೆ ನುಗ್ಗಿ ನಾಗದೇವರ ಬಿಂಬದ ಕಲ್ಲಿಗೆ ಹಾನಿ ಮಾಡಿದ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ‌. ಸಫ್ವಾನ್, ಪ್ರವೀಣ್...
More

    Latest Posts

    ಸದ್ಯಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಕೊಡುವ ಚಿಂತನೆ ಇಲ್ಲ – ಬಿ.ಸಿ ನಾಗೇಶ್

    ತುಮಕೂರು: ರಾಜ್ಯದ ಎರಡು ಮೂರು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ.ಧಾರವಾಡದ ಎಸ್ ಡಿ ಎಂ ಕಾಲೇಜು,ಬೆಂಗಳೂರಿನ ಒಂದು ಶಾಲೆ,ಮೈಸೂರಿನಲ್ಲಿ ಪಿಯು ಕಾಲೇಜಿನ 5 ಮಕ್ಕಳಿಗೆ ಪಾಸಿಟಿವ್ ಬಂದಿದೆ....

    ವಿದೇಶಿ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯ : ಸಿಎಂ ಬಸವರಾಜ ಬೊಮ್ಮಾಯಿ

    ತುಮಕೂರು : ರಾಜ್ಯದಲ್ಲಿ ಹೊಸ ಒಮಿಕ್ರಾನ್ ವೈರಸ್ (Omicron Variant ) ಆತಂಕದ ಹಿನ್ನೆಲೆಯಲ್ಲಿ ವಿದೇಶದಿಂದ ಬರುವ ಎಲ್ಲಾ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಕಡ್ಡಾಯ (Corona Test mandatory) ಮಾಡಲಾಗಿದೆ...

    ಉಡುಪಿ ಹೊಟೇಲಿನಲ್ಲಿ ಮಸಾಲೆ ದೋಸೆ ಸಪ್ಲೈ ಮಾಡುತ್ತಿರುವ ಯಕ್ಷಗಾನ ವೇಷಧಾರಿಗಳು -ಯಕ್ಷಗಾನ ಪ್ರಿಯರಿಂದ ಆಕ್ರೋಶ

    ಉಡುಪಿ: ಯಕ್ಷಗಾನ‌ ಕಲೆ ಎಲ್ಲೆಡೆ ಮನೆಮಾತು.ಹೀಗಾಗಿ ಪ್ರತೀ ಘಟನೆ ,ಪ್ರಸಂಗ,ಹಾಸ್ಯ,ವಿಡಂಬನೆ ,ರಾಜಕೀಯ ಕಾಲೆಳೆಯುವಿಕೆಗೂ ಪಾತ್ರಧಾರಿಗಳು ಯಕ್ಷಗಾನ ಕಲೆಯನ್ನು ಬಳಸುವುದುಂಟು.ಆದರೆ ಇಲ್ಲಿ ಇಬ್ಬರು ಯಕ್ಷಗಾನ ವೇಷಧಾರಿಗಳು, ಹೊಟೇಲಿನಲ್ಲಿ ಮಸಾಲೆ ದೋಸೆ ಸಪ್ಲೈ...

    ಸುರತ್ಕಲ್: ದುಷ್ಕರ್ಮಿಯಿಂದ ATMಗೆ ಹಾನಿ

    ಸುರತ್ಕಲ್: ಸುರತ್ಕಲ್ ಸಮೀಪದ ಎಂಆರ್ ಪಿಎಲ್ ರಸ್ತೆಯ ಕಟ್ಲ ತಿರುವು ಬಳಿಯ ಎಸ್ ಬಿ ಐ ಬ್ಯಾಂಕಿನ ATM ನ್ನು ವ್ಯಕ್ತಿ ಯೋರ್ವ ಹಾನಿ ಮಾಡಿದ ಘಟನೆ ನಡೆದಿದೆ.ಕಳೆದ ಸೆ.9...

    10 ವರ್ಷ ಪ್ರಿಯತಮೆಯನ್ನು ಕೋಣೆಯಲ್ಲಿ ಬಚ್ಚಿಟ್ಟು ಕೊನೆಗೂ ವಿವಾಹವಾದ ಜೋಡಿ!

    ಪಾಲಕ್ಕಾಡ್‌: ಯಾರಿಗೂ ತಿಳಿಯದಂತೆ ಪ್ರೇಯಸಿಯನ್ನು 10 ವರ್ಷಗಳ ಕಾಲ ತನ್ನ ಮನೆಯ ಒಂಟಿ ಕೋಣೆಯಲ್ಲಿ ಬಚ್ಚಿಟ್ಟು ಸುದ್ದಿಯಾಗಿದ್ದ ವ್ಯಕ್ತಿ, ಕೊನೆಗೂ ಆಕೆಯನ್ನು ವಿವಾಹವಾಗಿದ್ದಾನೆ.

    ರೆಹಮಾನ್‌ ಎಂಬಾತ ತನ್ನ ಪ್ರೇಯಸಿ ಸಾಜಿತಾ ಎಂಬಾಕೆಯನ್ನು ಹತ್ತು ವರ್ಷಗಳ ಕಾಲ ಬಚ್ಚಿಟ್ಟಿದ್ದ ಎಂದು ಸುದ್ದಿಯಾಗಿದ್ದು. ಬುಧವಾರ ಇಬ್ಬರು ಪಾಲಕ್ಕಾಡ್‌‌ ನೇನ್ಮರದಲ್ಲಿ ರಿಜಿಸ್ಟರ್‌‌ ವಿವಾಹವಾಗಿದ್ದಾರೆ.ಸಜಿತಾ ಸರಳವಾದ ಹತ್ತಿ ಸಲ್ವಾರ್‌ ಧರಿಸಿದ್ದು, ರೆಹಮಾನ್‌ ಸಾಂಪ್ರದಾಯಿಕ ಧೋತಿ ಹಾಗೂ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದು, ಇಬ್ಬರು ಜೊತೆಯಾಗಿ ವಿವಾಹ ದಾಖಲೆಗಳಿಗೆ ಸಹಿಹಾಕಿದ್ದಾರೆ. ವಿವಾಹದ ಬಳಿಕ ಎಲ್ಲರಿಗೂ ಸಿಹಿ ಹಂಚಿ ತಮ್ಮನ್ನು ಬೆಂಬಲಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.ಬಳಿಕ ಮಾತನಾಡಿದ ರೆಹಮಾನ್‌‌, ನಾವಿಬ್ಬರು ಸಂತೋಷ ಹಾಗೂ ಶಾಂತಿಯುತ ಜೀವನ ನಡೆಸಬೇಕು ಎಂದು ಇಚ್ಛಿಸಿದ್ದೇವೆ ಎಂದು ಹೇಳಿದ್ದಾರೆ.ಸಾಜಿತಾ ಕುಟುಂಬ ವಿವಾಹಕ್ಕೆ ಸಾಕ್ಷಿಯಾಗಿತ್ತು. ಆದರೆ, ರೆಹಮಾನ್‌ ಕುಟುಂಬಕ್ಕೆ ವಿವಾಹ ಇಷ್ಟವಿಲ್ಲದ ಕಾರಣ ಅವರು ಅಂತರ ಕಾಯ್ದುಕೊಂಡಿದ್ದರು. ವಿವಾದಲ್ಲಿ ನೇನ್ಮಾರಾ ಶಾಸಕ ಕೆ. ಬಾಬು ಕೂಡಾ ಪಾಲ್ಗೊಂಡಿದ್ದು, ಜೋಡಿಗೆ ಶುಭ ಹಾರೈಸಿದ್ದು, ಸ್ವಂತ ಮನೆ ಕಟ್ಟಿಕೊಳ್ಳುವ ಅವರ ಆಸೆಯನ್ನು ನೆರವೇರಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ.

    ಘಟನೆಯ ಹಿನ್ನೆಲೆ:2010ರ ಫೆಬ್ರವರಿ 2ರಂದು ಕೇರಳದ ಪಲಕ್ಕಾಡ್ ಜಿಲ್ಲೆಯ ಅರಿಯೂರು ಸಮೀಪದ ಕರೈಕ್ಕಟ್ಟುಪರಂಬು ಗ್ರಾಮದಲ್ಲಿ 19 ವರ್ಷದ ಸಾಜಿತಾ ನಾಪತ್ತೆಯಾಗಿದ್ದಳು. ಮಗಳಿಗಾಗಿ ಪೋಷಕರು ಎಷ್ಟೇ ಹುಡುಕಾಡಿದರೂ ಕೂಡಾ ಮಗಳು ಪತ್ತೆಯಾಗಿರಲಿಲ್ಲ. ಕೊನೆಗೆ ಪೋಷಕರು ಪೊಲೀಸ್‌ ಠಾಣೆಯಲ್ಲಿ ಸಾಜಿತಾ ನಾಪತ್ತೆ ಕೇಸ್‌‌ ದಾಖಲಿಸಿದ್ದರು.ಆದರೆ, ಸಾಜಿತಾ ಅದೇ ಗ್ರಾಮದ ಯುವಕ ಆಕೆಯ ಪ್ರಿಯಕರ ರೆಹಮಾನ್‌ ಮನೆಯಲ್ಲಿ ಇದ್ದಳು. ಅಂದು ನಾಪತ್ತೆಯಾಗಿದ್ದ ಸಾಜಿತಾಳನ್ನು ರೆಹಮಾಣ್‌ ತನ್ನ ಮನೆಯಲ್ಲಿಯ ಕೋಣೆಯೊಂದರಲ್ಲಿ ಅಡಗಿಸಿಟ್ಟಿದ್ದ. ಆದರೆ, ಈ ಬಗ್ಗೆ ಯಾರಿಗೂ ತಿಳಿದೇ ಇರಲಿಲ್ಲ. ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ ಬಳಿಕ ಆತ ಕಿಟಕಿಯ ಮೂಲಕ ಆಕೆಯನ್ನು ಸ್ನಾನಗೃಹಕ್ಕೆ, ಶೌಚಗೃಹಕ್ಕೆ ಕರೆದೊಯ್ಯುತ್ತಿದ್ದ. ತಾನು ಕೋಣೆಯಲ್ಲಿ ಊಟ ಮಾಡುತ್ತೇನೆ ಎಂದು ತಟ್ಟೆಗೆ ಊಟ ಹಾಕಿಕೊಂಡು ಹೋಗುತ್ತಿದ್ದವನು ತನ್ನ ಪ್ರೇಯಸಿಗೆ ಊಟ ನೀಡುತ್ತಿದ್ದ. ಅಲ್ಲದೇ, ರೆಹಮಾನ್‌ ತನ್ನ ಕೋಣೆಗೆ ಯಾರಿಗೂ ಪ್ರವೇಶ ನೀಡುತ್ತಿರಲಿಲ್ಲ. ಮನೆಯವರು ಪ್ರಶ್ನಿಸುವುದನ್ನು ತಪ್ಪಿಸಲು ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಈ ಕಾರಣದಿಂದ ಮನೆಯವರು ಆತನ ಬಳಿ ಸುಳಿಯುತ್ತಿರಲಿಲ್ಲ. ಕೆಲಸಕ್ಕೆ ಹೋದರೂ ಕೂಡಾ ಬೇಗ ಮನೆಗೆ ಬಂದು ಸೇರಿಕೊಳ್ಳುತ್ತಿದ್ದ.ರೆಹಮಾನ್‌ ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ. ಈ ಬಗ್ಗೆ ಆತಂಕಗೊಂಡಿದ್ದ ಪೋಷಕರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಇತ್ತೀಚೆಗೆ ರೆಹಮಾನ್‌ ತನ್ನ ಸಹೋದರನ ಕಣ್ಣಿಗೆ ಬಿದ್ದಿದ್ದ. ಈ ವಿಚಾರ ಪೊಲೀಸರಿಗೆ ತಿಳಿಯುತ್ತಿದ್ದಂತೆ ಪೊಲೀಸರು ರೆಹಮಾನ್‌‌ನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ ವೇಳೆ ನಿಜ ವಿಚಾರ ಬಯಲಾಗಿದೆ. 

    Latest Posts

    ಸದ್ಯಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಕೊಡುವ ಚಿಂತನೆ ಇಲ್ಲ – ಬಿ.ಸಿ ನಾಗೇಶ್

    ತುಮಕೂರು: ರಾಜ್ಯದ ಎರಡು ಮೂರು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ.ಧಾರವಾಡದ ಎಸ್ ಡಿ ಎಂ ಕಾಲೇಜು,ಬೆಂಗಳೂರಿನ ಒಂದು ಶಾಲೆ,ಮೈಸೂರಿನಲ್ಲಿ ಪಿಯು ಕಾಲೇಜಿನ 5 ಮಕ್ಕಳಿಗೆ ಪಾಸಿಟಿವ್ ಬಂದಿದೆ....

    ವಿದೇಶಿ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯ : ಸಿಎಂ ಬಸವರಾಜ ಬೊಮ್ಮಾಯಿ

    ತುಮಕೂರು : ರಾಜ್ಯದಲ್ಲಿ ಹೊಸ ಒಮಿಕ್ರಾನ್ ವೈರಸ್ (Omicron Variant ) ಆತಂಕದ ಹಿನ್ನೆಲೆಯಲ್ಲಿ ವಿದೇಶದಿಂದ ಬರುವ ಎಲ್ಲಾ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಕಡ್ಡಾಯ (Corona Test mandatory) ಮಾಡಲಾಗಿದೆ...

    ಉಡುಪಿ ಹೊಟೇಲಿನಲ್ಲಿ ಮಸಾಲೆ ದೋಸೆ ಸಪ್ಲೈ ಮಾಡುತ್ತಿರುವ ಯಕ್ಷಗಾನ ವೇಷಧಾರಿಗಳು -ಯಕ್ಷಗಾನ ಪ್ರಿಯರಿಂದ ಆಕ್ರೋಶ

    ಉಡುಪಿ: ಯಕ್ಷಗಾನ‌ ಕಲೆ ಎಲ್ಲೆಡೆ ಮನೆಮಾತು.ಹೀಗಾಗಿ ಪ್ರತೀ ಘಟನೆ ,ಪ್ರಸಂಗ,ಹಾಸ್ಯ,ವಿಡಂಬನೆ ,ರಾಜಕೀಯ ಕಾಲೆಳೆಯುವಿಕೆಗೂ ಪಾತ್ರಧಾರಿಗಳು ಯಕ್ಷಗಾನ ಕಲೆಯನ್ನು ಬಳಸುವುದುಂಟು.ಆದರೆ ಇಲ್ಲಿ ಇಬ್ಬರು ಯಕ್ಷಗಾನ ವೇಷಧಾರಿಗಳು, ಹೊಟೇಲಿನಲ್ಲಿ ಮಸಾಲೆ ದೋಸೆ ಸಪ್ಲೈ...

    ಸುರತ್ಕಲ್: ದುಷ್ಕರ್ಮಿಯಿಂದ ATMಗೆ ಹಾನಿ

    ಸುರತ್ಕಲ್: ಸುರತ್ಕಲ್ ಸಮೀಪದ ಎಂಆರ್ ಪಿಎಲ್ ರಸ್ತೆಯ ಕಟ್ಲ ತಿರುವು ಬಳಿಯ ಎಸ್ ಬಿ ಐ ಬ್ಯಾಂಕಿನ ATM ನ್ನು ವ್ಯಕ್ತಿ ಯೋರ್ವ ಹಾನಿ ಮಾಡಿದ ಘಟನೆ ನಡೆದಿದೆ.ಕಳೆದ ಸೆ.9...

    Don't Miss

    ಬಂಟ್ವಾಳ: ಕಾಲು ಜಾರಿ ಕೆರೆಗೆ ಬಿದ್ದು ಯುವತಿ ಸಾವು

    ಬಂಟ್ವಾಳ: ಯುವತಿಯೋರ್ವಳು ಅಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಕಾರಾಜೆ ಎಂಬಲ್ಲಿ ನಡೆದಿದೆ. ಸಜೀಪ ಮೂಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರಾಜೆ ನಿವಾಸಿ...

    ಪಾಣೆಮಂಗಳೂರು ನೇತ್ರಾವತಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ!

    ಬಂಟ್ವಾಳ: ಟೈಲರ್ ವೃತ್ತಿಗೆಂದು ತೆರಳಿ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವನ ಮೃತದೇಹ ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಪೊಡಿಕ್ಕಳ ಬೆಂಜನಪದವು ನಿವಾಸಿ ನಾರಾಯಣ ಮೂಲ್ಯ (62) ಮೃತಪಟ್ಟ ವ್ಯಕ್ತಿ....

    ಕಾಪು: ರೈಲು ಢಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿ ಸಾವು

    ಕಾಪು: ರೈಲು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನ.26ರ ಶುಕ್ರವಾರ ಮುಂಜಾನೆ ನಡೆದಿದೆ. ಮೃತರನ್ನು ಮಲ್ಲಾರು ಪಕೀರಣಕಟ್ಟೆ ಎಂ.ಜೆ.ಎಂ ಮಸೀದಿ ಬಳಿಯ ನಿವಾಸಿ ಅಬ್ದುಲ್ ರಜಾಕ್ (48)...

    ಮಂಗಳೂರು: ದೋಣಿಯಿಂದ ಬಿದ್ದು ಮೀನುಗಾರ ಸಾವು

    ಮಂಗಳೂರು: ಇಲ್ಲಿನ ಹಳೆ ಬಂದರು ದಕ್ಕೆಯಿಂದ ಮೀನುಗಾರಿಕೆಗೆಂದು ಬೋಟ್‌ನಲ್ಲಿ ಹೊರಟಿದ್ದ ಮೀನುಗಾರರ ಪೈಕಿ ಮನೋಜ್ ಎಂಬವರು ಸಮುದ್ರಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಇವರ ವಿಳಾಸ ಹಾಗೂ ಇತರೆ ವಿವರಗಳು ಲಭ್ಯವಾಗಿಲ್ಲ....

    ಬೆಳ್ತಂಗಡಿ: ಪಿಯುಸಿ ವಿದ್ಯಾರ್ಥಿನಿ ನಾಪತ್ತೆ- ದೂರು ದಾಖಲು !

    ಬೆಳ್ತಂಗಡಿ: ಕಸಬಾ ಗ್ರಾಮದ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದಲ್ಲಿದ್ದ ವಿದ್ಯಾರ್ಥಿ ನಿಯೋರ್ವರು ನ.24 ರಂದು ನಾಪತ್ತೆಯಾಗಿದ್ದಾರೆ. ಬೆಳ್ತಂಗಡಿಯ ಜೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ...