Thursday, April 18, 2024
spot_img
More

    Latest Posts

    ಕೊರೊನಾ ಸಂಕಷ್ಟ: ಕೋವಿಡ್ ಪ್ಯಾಕೇಜ್ ಗೆ ಆಗ್ರಹಿಸಿ ತುಳುನಾಡ ದೈವಾರಾಧಕರ ಮನವಿ

    ತುಳುನಾಡ ದೈವಾರಾಧಕರ ಒಕ್ಕೂಟ (ರಿ ) ಉಡುಪಿ ಜಿಲ್ಲೆಯ ಸರ್ವ ಸದಸ್ಯರುಗಳು ಸೇರಿ ಕೋಟ ಶ್ರೀನಿವಾಸ ಪೂಜಾರಿ ಧಾರ್ಮಿಕ ದತ್ತಿ ಇಲಾಖೆ ಸಚಿವರಿಗೆ ಭೇಟಿ ಮಾಡಿ ಮನವಿ ಕೊಡಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಗೌರವ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ದೈವ ಚಾಕ್ರಿ ವರ್ಗದವರ ಸಮಸ್ಯೆಗಳನ್ನು ಹೇಳಿದರು.

    ಈಗಾಗಲೇ ಸರ್ಕಾರದ ಮೂರು ಬಾರಿಯ ಕೋವಿಡ್ ಪ್ಯಾಕೇಜಿನಲ್ಲಿ ಸರ್ಕಾರ ನಮ್ಮ ಕರಾವಳಿಯ ದೈವಾರಾಧನೆ ಕ್ಷೇತ್ರದಲ್ಲಿ ದುಡಿಯುವವರಿಗೆ ಈ ಲಾಕ್ ಡೌನ್ ತುತ್ತು ಸಂದರ್ಭದಲ್ಲಿ ಯಾವುದೇ ಪರಿಹಾರ ಒದಗಿಸಿಲ್ಲ. ಎರಡು ವರ್ಷದಿಂದ ಸರಿಯಾಗಿ ಯಾವುದೇ ಪೂಜೆ ಪುರಸ್ಕಾರ ವಾರ್ಷಿಕ ನೇಮೋತ್ಸವಗಳು ನಡೆಯಲಿಲ್ಲ.ಈ ಒಂದು ಸಂದರ್ಭದಲ್ಲಿ ಸರ್ಕಾರ ಸಂಪೂರ್ಣ ನಿಷೇಧಿಸಿದೆ. ಸುಮಾರು ಉಡುಪಿ ಮಂಗಳೂರಿನಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ದೈವ ಚಾಕ್ರಿ ವರ್ಗದವರಿದ್ದಾರೆ.

    ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಇವರಿಗೆ ಜೀವನ ನಡೆಸಲು ತುಂಬಾ ಸಂಕಷ್ಟಗಳು ಎದುರಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಇವರಿಗೆ ಯಾವುದೇ ಸಂಪಾದನೆ ಇಲ್ಲ ದೈವಾರಾಧನೆ ಮೂಲ ಕುಲಕಸುಬಾಗಿ ಅವಲಂಬಿಸಿದ್ದಾರೆ ಇದರಿಂದ ಬರುವ ಸಂಭಾವನೆಯಲ್ಲಿ ಕುಟುಂಬವನ್ನು ನೀಗಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ೨೦೦ ಜನರ ಸೀಮಿತ ಅವಧಿಗೆ ಸರ್ಕಾರ ದ ಕಟ್ಟುನಿಟ್ಟಾದ ನಿಯಮ ಅನುಸಾರವಾಗಿ ದೈವಾರಾಧನೆಗೆ ಅನುಮತಿ ನೀಡಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇವೆ ಎಂದು ಒಕ್ಕೂಟದ ಸರ್ವ ಸದಸ್ಯರು ಧಾರ್ಮಿಕ ದತ್ತಿ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ವಿನಂತಿ ಮಾಡಿಕೊಂಡರು.

    ಮನವಿಯನ್ನು ಪಡೆದುಕೊಂಡ ಸಚಿವರು ಮುಖ್ಯಮಂತ್ರಿಗಳಿಗೆ ನಿಮ್ಮ ಬೇಡಿಕೆಗಳ ಮನವಿಯನ್ನು ಕಳುಹಿಸಿಕೊಡುತ್ತೇನೆ ಇದರ ಬಗ್ಗೆ ಮಾತನಾಡುತ್ತೇನೆ ಎಂದು ಸರ್ವ ಸದಸ್ಯರಿಗೆ ಸ್ಪಂದಿಸಿದರು. ಈ ಒಂದು ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಸುಪ್ರಸಾದ್ ಶೆಟ್ಟಿ, ಅಧ್ಯಕ್ಷರಾದ ರವಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾದ, ವಿನೋದ್ ಶೆಟ್ಟಿ, ಬ್ರಹ್ಮಾವರ ಘಟಕದ ಅಧ್ಯಕ್ಷರಾದ ಶ್ರೀಧರ್ ಪೂಜಾರಿ ಉಪಾಧ್ಯಕ್ಷರಾದ ಸುಧಾಕರ್ ಮಡಿವಾಳ ಅನಿಶ್ ಕೋಟ್ಯಾನ್, ನರಸಿಂಹ ಪರವ ಜೊತೆಗೆ ಕಾರ್ಯದರ್ಶಿಯಾದ ರವೀಶ್ ಕಾಮತ್ ದಯೆಶಾ ಕೋಟ್ಯಾನ್ ರಕ್ಷಿತ್ ಕೋಟ್ಯಾನ್ ಹಾಗೂ ಗೌರವ ಹಿತೈಷಿಗಳಾದ ನವೀನ್ ಹೆಬ್ರಿ ಘಟಕದ ಅಧ್ಯಕ್ಷರಾದ ಸುಕುಮಾರ್ ಪೂಜಾರಿ ಹಾಗೂ ವಿಠ್ಠಲ್ ಪೂಜಾರಿ, ಸಂತೋಷ್ ಪೂಜಾರಿ, ನಂದಿ ಪೂಜಾರಿ ರಂಗ ಪಾಣಾರ ಸಂತೋಷ್ ಪಾಣಾರ ಸರ್ವ ಸದಸ್ಯರು ಉಪಸ್ಥಿತರಿದ್ದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss