Monday, November 29, 2021

ಮಂಗಳೂರು: ‘ಡಿ. 8ರವರೆಗೆ ಕೊರೊನಾ ಮಾರ್ಗಸೂಚಿ ವಿಸ್ತರಣೆ’

ಕೋವಿಡ್-19 ಕಣ್ಣಾವಲು, ನಿಯಂತ್ರಣ ಮತ್ತು ಜಾಗೃತಿಗೆ ಸಂಬಂಧಿಸಿದ ಮಾರ್ಗಸೂಚಿಗಳು ಹಾಗೂ ಈ ಮಾರ್ಗಸೂಚಿಗಳಿಗೆ ಸಂಬಂಧಿಸಿ ಹೊರಡಿಸಿರುವ ಸರ್ಕಾರದ ವಿಸ್ತರಣೆ ಆದೇಶಗಳನ್ನು ಡಿಸೆಂಬರ್ 8ರ ಬೆಳಗ್ಗೆ 6 ಗಂಟೆವರೆಗೆ ಮುಂದುವರಿಸಿ ಆದೇಶ...
More

  Latest Posts

  ಆಸ್ಪತ್ರೆ ಸಿಬ್ಬಂದಿ ಎಡವಟ್ಟು : 15 ತಿಂಗಳು ಶವಗಾರದಲ್ಲೇ ಕೊಳೆತ ಕೋವಿಡ್ ಸೋಂಕಿತರ ಮೃತ ದೇಹಗಳು!

  ಬೆಂಗಳೂರು: ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ ಇಬ್ಬರ ಶವಗಳು ಸುಮಾರು 15 ತಿಂಗಳು ಶವಾಗಾರದಲ್ಲೇ ಕೊಳೆತ ವಿಚಾರ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ನಗರದ...

  ಮುಲ್ಕಿ: ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ಪರಾರಿ!

  ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ನಿನ್ನೆ ಸಂಜೆ ಪರಾರಿಯಾಗಿದ್ದಾನೆ. ದಾವಣಗೆರೆ ನಿವಾಸಿಯಾದ ವಿಚಾರಣಾಧೀನ ಕೈದಿಯನ್ನು ಕಳ್ಳತನದ ಆರೋಪದ ಮೇಲೆ ಮುಲ್ಕಿ ಪೊಲೀಸರು...

  ಸಾರ್ವಜನಿಕ ಬಸ್ಸು ತಂಗುದಾಣವನ್ನು ಅಡುಗೆ ಮನೆ ಮಾಡಿದ ಕೂಲಿ ಕಾರ್ಮಿಕರು……! ಕಣ್ಣು ಮುಚ್ಚಿ ಕುಳಿತ ಆಡಳಿತ ಅಧಿಕಾರಿಗಳು

  ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂಗಲ್ಪಾಡಿ ದೇವಸ್ಥಾನದ ಎದುರುಗಡೆ ಇರುವ ಬಸ್ ತಂಗುದಾಣದಲ್ಲಿ ಕೆಲ ದಿನಗಳಿಂದ ಯಾವುದೊ ಕೂಲಿ ಕಾರ್ಮಿಕರು ಮನೆಯಂತೆ ಸಾರ್ವಜನಿಕ ಬಸ್ಸು ತಂಗುದಾಣದಲ್ಲಿ ಅಡುಗೆ ಮಾಡಿ ವಾಸಿಸುತ್ತಿದ್ದಾರೆ.

  ಬೆಂಗಳೂರಿನ ಕೆ.ಆರ್‌. ಮಾರ್ಕೆಟ್‌ನಲ್ಲಿ ಅಗ್ನಿ ಅವಗಢ; ಅಗ್ನಿಶಾಮಕ ದಳ ಆಗಮನ

  ಬೆಂಗಳೂರು: ನಗರದ ಕೆ.ಆರ್.‌ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮಾರುಕಟ್ಟೆಯ ಕೊರಿಯರ್‌ ಗೋಡೌನ್‌ನಿಂದ ದಟ್ಟ ಹೊಗೆ ಹರಡಿದೆ. ಕೆ.ಆರ್‌. ಮಾರುಕಟ್ಟೆಯ ಗೋಡೌನ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ....

  ಸಮುದ್ರಾಹಾರ ಮಾರುತ್ತಿದ್ದ ವುಹಾನ್ ಮಹಿಳೆ ಕೊರೋನಾ ಮೊದಲ ಸೋಂಕಿತೆ! – ಅಧ್ಯಯನ

  ಚೀನಾ: ಕೊರೊನಾ ಮಹಾಮಾರಿ ಇಡೀ ಜಗತ್ತು ಎಂದು ಕಂಡು ಕೇಳರಿಯದ ಅನುಭವಗಳನ್ನು ನೀಡಿದೆ. 2019ರಲ್ಲಿ ಚೀನಾದ ವುಹಾನ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಕೊರೊನಾ ಪ್ರಕರಣ ಎರಡು ವರ್ಷವಾದರೂ ಇನ್ನೂ ಪ್ರಪಂಚದ ಹಲವು ದೇಶಗಳಿಗೆ ಬಾಧಿಸುತ್ತಲೇ ಇದೆ.

  ಕೊರೊನಾ ವೈರಸ್‌ನ ಮೂಲ ಕಂಡು ಹಿಡಿಯಲು ಈಗಾಗಲೇ ಬಿಲಿಯನ್‌ಗಟ್ಟಲೆ ಹಣ ಹೂಡಿಕೆಯಾಗಿದ್ದು ಈ ನಿಟ್ಟಿನಲ್ಲಿ ವಿಜ್ಞಾನಿಗಳು ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಕೊರೋನಾ ಸೋಂಕಿಗೆ ಒಳಪಟ್ಟ ಮೊದಲ ವ್ಯಕ್ತಿ ವುಹಾನ್‌ ಮಾರುಕಟ್ಟೆಯಲ್ಲಿ ಸಮುದ್ರದ ಆಹಾರ ಮಾರಾಟ ಮಾಡುತಿದ್ದ ಮಹಿಳೆ ಎಂದು ತಿಳಿದು ಬಂದಿದೆ. ಇತ್ತಿಚೆಗೆ ನಡೆದ ಹೊಸ ಅಧ್ಯಯನದದಲ್ಲಿ ಈ ವಿಷಯ ಬಹಿರಂಗವಾಗಿದ್ದು  WHO ನಡೆಸಿದ ತನಿಖೆಯಲ್ಲಿ ಲೋಪದೋಷಗಳಿವೆ ಎಂದು ಅಧ್ಯಯನ ಹೇಳಿದೆ.

  ಮಧ್ಯ ಚೀನಾದ ಹುವಾನ್ ಲೈವ್ ಅನಿಮಲ್ ಮಾರ್ಕೆಟ್‌ನಲ್ಲಿ ಮೊದಲ ಕೊರೊನಾ ರೋಗಿಯು ಕೆಲಸ ಮಾಡಿದ್ದರು ಎಂದು ಅಧ್ಯಯನವು ಹೇಳುತ್ತದೆ ಎಂದು ನ್ಯೂಯಾರ್ಕ್ ಟೈಮ್ಸ್ ಗುರುವಾರ ವರದಿ ಮಾಡಿದೆ. ವುಹಾನ್ ನಗರದಲ್ಲಿ 2019 ರಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಮೊದಲು ಬಾರಿಗೆ ಕಾಣಿಸಿಕೊಂಡಿತ್ತು. ಕೋವಿಡ್ -19 ರಿಂದ ಸೋಂಕಿತಗೊಂಡ ಮೊದಲ ವ್ಯಕ್ತಿ ಎಂದು ವ್ಯಾಪಕವಾಗಿ ಭಾವಿಸಲಾದ ಅಕೌಂಟೆಂಟ್, ಅವರ ಮೊದಲ ರೋಗಲಕ್ಷಣಗಳು ಡಿಸೆಂಬರ್ 16 ರಂದು ಕಾಣಿಸಿಕೊಂಡವು ಎಂದು ವರದಿಯಾಗಿತ್ತು. ಆದರೆ ಇದಕ್ಕೂ ಮುಂಚೆ ಕೊರೊನಾ ಕಾಣಿಸಿಕೊಂಡಿದೆ, ಎಂದು ಅರಿಜೋನಾ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ಮತ್ತು ವಿಕಾಸಾತ್ಮಕ ಜೀವಶಾಸ್ತ್ರದ ಮುಖ್ಯಸ್ಥ ಮೈಕೆಲ್ ವೊರೊಬೆ ಗುರುವಾರ ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಹೇಳಿದ್ದಾರೆ.

  ಡಿಸೆಂಬರ್ 11 (2020) ರಂದೇ ಅನಾರೋಗ್ಯವು ಪ್ರಾರಂಭವಾಯಿತು!

  “ಹುವಾನಾನ್ ಮಾರ್ಕೆಟ್‌ನಲ್ಲಿನ ಕಾರ್ಮಿಕರಲ್ಲಿ ಅನೇಕ ಸೋಂಕಿತರು ಕಾಣಿಸಿಕೊಂಡ ನಂತರವೇ ಅವನಲ್ಲಿ ( ಅಕೌಂಟೆಂಟ್) ರೋಗಲಕ್ಷಣವು ಕಾಣಿಸಿಕೊಂಡಿದೆ. ಮಾರುಕಟ್ಟೆಯಲ್ಲಿ  ಸಮುದ್ರಾಹಾರ ಮಾರಾಟ ಮಾಡುತ್ತಿದ್ದ ಮಹಿಳೆಯಲ್ಲಿ ಮೊದಲ ಬಾರಿಗೆ ಸೋಂಕು ಪತ್ತೆಯಾಗಿದ್ದು, ಅವರಿಗೆ ಡಿಸೆಂಬರ್ 11 (2020) ರಂದೇ ಅನಾರೋಗ್ಯವು ಪ್ರಾರಂಭವಾಯಿತು” ಎಂದು ಅಧ್ಯಯನವು ಹೇಳಿದೆ.

  ಅರಿಜೋನಾ ವಿಶ್ವವಿದ್ಯಾನಿಲಯದಲ್ಲಿ ವೈರಸ್‌ಗಳ ವಿಕಸನವನ್ನು ಪತ್ತೆಹಚ್ಚುವಲ್ಲಿ  ಪರಿಣಿತರಾದ ವೊರೊಬೆ, ವೈದ್ಯಕೀಯ ನಿಯತಕಾಲಿಕಗಳಲ್ಲಿ ಈಗಾಗಲೇ ಸಾರ್ವಜನಿಕಗೊಳಿಸಿರುವ ಅಧ್ಯಯನ ಮತ್ತು ಚೀನಾದ ಸುದ್ದಿವಾಹಿನಿಯಲ್ಲಿನ ವೀಡಿಯೊ ಸಂದರ್ಶನಗಳ ಮೂಲಕ ಟೈಮ್‌ಲೈನ್ ವ್ಯತ್ಯಾಸಗಳನ್ನು ಪರೀಶೀಲಿಸಿದಾಗ ಮೊದಲೇ ಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವ ಬ್ಗಗೆ ತಿಳಿದುಬಂದಿದೆ ಎಂದು ಹೇಳಿದ್ದಾರೆ. 

  ಆಸ್ಪತ್ರೆಗೆ ಆರಂಭಿಕವಾಗಿ ದಾಖಲಾದ ರೋಗಿಗಳ ವಿಶ್ಲೇಷಣೆಯಿಂದ ಮಾಹಿತಿ

  ಹುವಾನ್ ಸೀಫುಡ್ ಸಗಟು ಮಾರುಕಟ್ಟೆಗೆ ಸೋಂಕಿತರ ಸಂಬಂಧಗಳು ಮತ್ತು ಮಾರುಕಟ್ಟೆಯಿಂದ ಆರಂಭಿಕ ಆಸ್ಪತ್ರೆಗೆ ದಾಖಲಾದ ರೋಗಿಗಳ  ಹೊಸ ವಿಶ್ಲೇಷಣೆಯು ಸಾಂಕ್ರಾಮಿಕ ರೋಗವು ಅಲ್ಲಿಂದಲೇ ಪ್ರಾರಂಭವಾಯಿತು ಎಂದು ಬಲವಾಗಿ ಸೂಚಿಸುತ್ತದೆ ಎಂದು ವೊರೊಬೆ ವಾದಿಸುತ್ತಾರೆ.

  “11 ಮಿಲಿಯನ್ ಜನರಿರುವ ನಗರದಲ್ಲಿ, ಆರಂಭಿಕ ಪ್ರಕರಣಗಳಲ್ಲಿ ಅರ್ಧದಷ್ಟು ಪ್ರಕರಣಗಳನ್ನು ಪುಟ್‌ಬಾಲ್ ಮೈದಾನಷ್ಟಿರುವ ಪ್ರದೇಶಕ್ಕೆ ಲಿಂಕ್ ಮಾಡಲಾಗಿದೆ” ಎಂದು ವೊರೊಬೆ ಹೇಳಿದ್ದಾರೆ. “ಮಾರುಕಟ್ಟೆಯಲ್ಲಿ ಕೊರೊನಾ  ಪ್ರಾರಂಭವಾಗಿರದಿದ್ದರೆ ಆ ಮಾದರಿಯನ್ನು ವಿವರಿಸಲು ತುಂಬಾ ಕಷ್ಟವಾಗುತ್ತದೆ. “ವಿಶ್ವ ಆರೋಗ್ಯ ಸಂಸ್ಥೆ (World Health Organisation) ಆಯ್ಕೆ ಮಾಡಿದ ಸಾಂಕ್ರಾಮಿಕ ತನಿಖಾಧಿಕಾರಿಗಳಲ್ಲಿ ಒಬ್ಬರನ್ನು ಒಳಗೊಂಡಂತೆ ಹಲವಾರು ತಜ್ಞರು ವೊರೊಬೆಯ ಪತ್ತೇದಾರಿ ಕೆಲಸವು ಉತ್ತಮವಾಗಿದೆ ಮತ್ತು ಕೋವಿಡ್‌ನ ಮೊದಲ ತಿಳಿದಿರುವ ಪ್ರಕರಣವು ಸಮುದ್ರಾಹಾರ ಮಾರಾಟಗಾರರಾಗಿದ್ದಾರೆ ಎಂದು ಹೇಳಿದ್ದಾರೆ.

  Latest Posts

  ಆಸ್ಪತ್ರೆ ಸಿಬ್ಬಂದಿ ಎಡವಟ್ಟು : 15 ತಿಂಗಳು ಶವಗಾರದಲ್ಲೇ ಕೊಳೆತ ಕೋವಿಡ್ ಸೋಂಕಿತರ ಮೃತ ದೇಹಗಳು!

  ಬೆಂಗಳೂರು: ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ ಇಬ್ಬರ ಶವಗಳು ಸುಮಾರು 15 ತಿಂಗಳು ಶವಾಗಾರದಲ್ಲೇ ಕೊಳೆತ ವಿಚಾರ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ನಗರದ...

  ಮುಲ್ಕಿ: ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ಪರಾರಿ!

  ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ನಿನ್ನೆ ಸಂಜೆ ಪರಾರಿಯಾಗಿದ್ದಾನೆ. ದಾವಣಗೆರೆ ನಿವಾಸಿಯಾದ ವಿಚಾರಣಾಧೀನ ಕೈದಿಯನ್ನು ಕಳ್ಳತನದ ಆರೋಪದ ಮೇಲೆ ಮುಲ್ಕಿ ಪೊಲೀಸರು...

  ಸಾರ್ವಜನಿಕ ಬಸ್ಸು ತಂಗುದಾಣವನ್ನು ಅಡುಗೆ ಮನೆ ಮಾಡಿದ ಕೂಲಿ ಕಾರ್ಮಿಕರು……! ಕಣ್ಣು ಮುಚ್ಚಿ ಕುಳಿತ ಆಡಳಿತ ಅಧಿಕಾರಿಗಳು

  ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂಗಲ್ಪಾಡಿ ದೇವಸ್ಥಾನದ ಎದುರುಗಡೆ ಇರುವ ಬಸ್ ತಂಗುದಾಣದಲ್ಲಿ ಕೆಲ ದಿನಗಳಿಂದ ಯಾವುದೊ ಕೂಲಿ ಕಾರ್ಮಿಕರು ಮನೆಯಂತೆ ಸಾರ್ವಜನಿಕ ಬಸ್ಸು ತಂಗುದಾಣದಲ್ಲಿ ಅಡುಗೆ ಮಾಡಿ ವಾಸಿಸುತ್ತಿದ್ದಾರೆ.

  ಬೆಂಗಳೂರಿನ ಕೆ.ಆರ್‌. ಮಾರ್ಕೆಟ್‌ನಲ್ಲಿ ಅಗ್ನಿ ಅವಗಢ; ಅಗ್ನಿಶಾಮಕ ದಳ ಆಗಮನ

  ಬೆಂಗಳೂರು: ನಗರದ ಕೆ.ಆರ್.‌ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮಾರುಕಟ್ಟೆಯ ಕೊರಿಯರ್‌ ಗೋಡೌನ್‌ನಿಂದ ದಟ್ಟ ಹೊಗೆ ಹರಡಿದೆ. ಕೆ.ಆರ್‌. ಮಾರುಕಟ್ಟೆಯ ಗೋಡೌನ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ....

  Don't Miss

  ರಷ್ಯಾದಲ್ಲಿ ಕಲ್ಲಿದ್ದಲು ಗಣಿ ದುರಂತ: 52 ಮಂದಿ ದಾರುಣ ಸಾವು

  ಮಾಸ್ಕೊ: ರಷ್ಯಾದ ಕೆಮೆರೊವೊ ಎಂಬಲ್ಲಿ ಸಂಭವಿಸಿದ ಕಲ್ಲಿದ್ದಲು ಗಣಿ ದುರಂತದಲ್ಲಿ 52 ಗಣಿಕಾರ್ಮಿಕರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈ ಐದು ವರ್ಷಗಳಲ್ಲಿ ನಡೆದ ಅತಿ ದೊಡ್ಡ ಗಣಿ...

  SSLC ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಶೇ. 20 ರಷ್ಟು ಪಠ್ಯ ಕಡಿತಕ್ಕೆ ಮುಂದಾದ ಶಿಕ್ಷಣ ಇಲಾಖೆ

  ಬೆಂಗಳೂರು (ನ. 26): ಎಸ್‌ಎಸ್‌ಎಲ್‌ಸಿ (SSLC Students ) ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್! ಶೇ. 20 ರಷ್ಟು ಪಠ್ಯ ಕಡಿತಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ.  ಕೊರೋನಾದಿಂದ ಪ್ರಸಕ್ತ...

  BIG BREAKING: ದಕ್ಷಿಣ ಕನ್ನಡ ಸರಕಾರಿ ವೈದ್ಯನ ರಾಸಲೀಲೆ; ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಗಳ ಜೊತೆ ರಂಗಿನಾಟ!

  ಮಂಗಳೂರು: ಗುತ್ತಿಗೆ ಆಧಾರದಲ್ಲಿರುವ ಯುವತಿಯರ ಜೊತೆ ಸರಸ ಸಲ್ಲಾಪವಾಡುತ್ತಿದ್ದ ಮಂಗಳೂರಿನ ಪ್ರತಿಷ್ಠಿತ ವೆನ್ಲಾಕ್ ಆಸ್ಪತ್ರೆಯಲ್ಲಿ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಆಗಿರುವ ಡಾ.ರತ್ನಾಕರ್ ಅವರ ಕಾಮಪುರಾಣ ಬಯಲಾಗಿದೆ. ಈ ದೃಶ್ಯಗಳು ಸಾಮಾಜಿಕ...

  ಮಂಗಳೂರು: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ; ಆರೋಪಿಗಳು 4 ದಿನ ಪೊಲೀಸ್ ಕಸ್ಟಡಿಗೆ

  ಮಂಗಳೂರು: ವಾಮಂಜೂರು ಉಳಾಯಿಬೆಟ್ಟು ಪರಾರಿಯ ಟೈಲ್ಸ್ ಫ್ಯಾಕ್ಟರಿಯಲ್ಲಿ 8 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ...

  ಮಂಗಳೂರು: ಇಂದಿನಿಂದ ‘ಬೃಹತ್ ಕೋವಿಡ್ ವಾಕ್ಸಿನ್ ಮೇಳ’ ಆರಂಭ

  ಮಂಗಳೂರು: ನಗರದಲ್ಲಿ ಕೊವೀಡ್ ರೋಗ ನಿರೋಧಕ ಲಸಿಕೆ ಪ್ರಗತಿ ಹೆಚ್ಚಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆಯಲ್ಲಿ ಬೃಹತ್ ಕೋವಿಡ್ ಲಸಿಕಾ ಶಿಬಿರ ಆರಂಭವಾಗಲಿದೆ.