ಮಂಗಳೂರು: ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಗಾಯಗೊಂಡಿರುವ ಆಟೋ ಚಾಲಕ ಪುರುಷೋತ್ತಮ್ ಕೂಡ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಅಂತ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಸ್ಫೋಟಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿರುವ ಅಲೋಕ್ ಕುಮಾರ್, ಆಟೋ ಚಾಲಕನಿಗೆ ಉತ್ತಮ ಚಿಕಿತ್ಸೆ ಕೊಡಿಸಲಾಗ್ತಿದೆ, ಜೊತೆಗೆ ಸರ್ಕಾರದಿಂದ ಸೂಕ್ತ ಪರಿಹಾರವನ್ನ ಕೊಡಿಸೋ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡ್ತೀವಿ. ಘಟನೆಯಲ್ಲಿ ಪುರುಷೋತ್ತಮ್ ಆಟೋ ಕೂಡ ಜಖಂ ಆಗಿದ್ದು, ಸರ್ಕಾರದ ಕಡೆಯಿಂದ ನೆರವು ನೀಡ್ಲಾಗುತ್ತೆ. ಅವರಿಗೆ ಸಮಸ್ಯೆ ಆಗಿರುವ ಬಗ್ಗೆ ನಮಗೂ ನೋವು ಇದೆ ಎಂದು ತಿಳಿಸಿದ್ದಾರೆ.
