Sunday, January 29, 2023

ಮಂಗಳೂರು: ಬಾಲಕನ ಮೆಲೆ ಲಾಠಿ ಬೀಸಿದ ಪೇದೆ ಅಮಾನತು

ಮಂಗಳೂರು:ತಣ್ಣೀರಬಾವಿ ಬೀಚ್‌ ಬಳಿ 6ನೇ ತರಗತಿ ವಿದ್ಯಾರ್ಥಿ ಮೇಲೆ ಲಾಠಿ ಬೀಸಿದ ಆರೋಪದ ಹಿನ್ನೆಲೆ ಪಣಂಬೂರು ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಸುನೀಲ್ ಎಂಬವರನ್ನು ಅಮಾನತುಗೊಳಿಸಲಾಗಿದೆ. ಈ...
More

  Latest Posts

  ಲಯನ್ಸ್ ಕ್ಲಬ್ ಮಂಗಳಾದೇವಿ ವತಿಯಿಂದ ಶಾಲಾ ಮಕ್ಕಳೊಂದಿಗೆ ಗಣರಾಜ್ಯೋತ್ಸವ ಸಂಭ್ರಮ

  ಮಂಗಳೂರು: 74 ನೇ ಗಣರಾಜ್ಯೋತ್ಸವ ಕಾರ್ಯಕ್ರಮವು ನಗರದ ನೋಬಲ್ ಸ್ಕೂಲ್ ಕುಂಜತ್ ಬೈಲ್ ನಲ್ಲಿ ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿ ಅಧ್ಯಕ್ಷರಾದ ಲಯನ್ ಅನಿಲ್ ದಾಸ್ ರಾಷ್ಟ್ರ ಧ್ವಜಾರೋಹಣ ಗೈದು...

  ಪದವು ಬಿಕರ್ನಕಟ್ಟೆ ಸರಕಾರಿ ಶಾಲೆಯಲ್ಲಿ 74 ನೇ ಗಣರಾಜ್ಯೋತ್ಸವ

  ಮಂಗಳೂರು: ಪದವು ಬಿಕರ್ನಕಟ್ಟೆ ಸರಕಾರಿ ಶಾಲೆಯಲ್ಲಿ 74 ನೇ ಗಣರಾಜ್ಯೋತ್ಸವದ ಅಂಗವಾಗಿ ದ್ವಜಾರೋಹಣ ಕಾರ್ಯಕ್ರಮವನ್ನು ಬಿಜೆಪಿ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರು ಕರ್ನಾಟಕ ಮತ್ತು...

  74ನೇ ಗಣರಾಜ್ಯೋತ್ಸವದ ಅಂಗವಾಗಿ ಕೋಟೆಕಾರು ಪಟ್ಟಣ ಪಂಚಾಯತ್‌ ಕಟ್ಟಡದಲ್ಲಿ ಧ್ವಜಾರೋಹಣ

  ಕೋಟೆಕಾರು ಪಟ್ಟಣ ಪಂಚಾಯತ್‌ ಕಟ್ಟಡದಲ್ಲಿ 74 ಗಣರಾಜ್ಯೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಕೋಟೆಕಾರು ಪಟ್ಟಣ ಪಂಚಾಯತ್‌ನ ಕೌನ್ಸಿಲರ್‌ ರಾಘವ ಗಟ್ಟಿಯವರು ಧ್ವಜಾರೋಹಣಗೈದರು.ಬಳಿಕ ಇಲ್ಲಿನ ಮೂಲಭೂತ ಸೌಕರ್ಯಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು.

  ಯು. ಆರ್ ಶೆಟ್ಟಿಯವರಿಗೆ ” ಗುರುಕುಲ ಕಲಾ ಶ್ರೀರತ್ನ ಪ್ರಶಸ್ತಿ ಹಾಗೂ ಅಬೂಬಕರ್ ಅವರಿಗೆ ” ಗುರುಕುಲ ಜ್ಞಾನ ಸಿಂಧು” ಪ್ರಶಸ್ತಿ ಪ್ರಧಾನ

  ಬೆಂಗಳೂರು: ಗುರುಕುಲ ಕಲಾ ಪ್ರತಿಷ್ಠಾನ ರಾಜ್ಯ ಸಮಿತಿಯ ಆಶ್ರಯದಲ್ಲಿ ಬೆಂಗಳೂರಿನ ಸ್ಪೂರ್ತಿಧಾಮ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಪ್ರಸಿದ್ಧ ಸಾಹಿತ್ಯ ಸಾಧಕ ಡಿ. ಐ. ಅಬೂಬಕರ್ ಕೈರಂಗಳ ಹಾಗೂ...

  ಕೋವಿಡ್ ನಿಯಂತ್ರಣ: ಉಡುಪಿ ಜಿಲ್ಲೆಯಲ್ಲಿ ಜನವರಿ 2ರವರೆಗೆ ಹೊಸ ನಿಯಮ ಜಾರಿ

  ಉಡುಪಿ: ಪ್ರಸ್ತುತ ಕೋವಿಡ್ 19 ಸೋಂಕು ಭೀತಿ ಮತ್ತೆ ಆರಂಭವಾಗಿದ್ದು, ಜನರು ಗುಂಪಾಗಿ ಸೇರುವ ಹೊಸ ವರ್ಷಾಚರಣೆಯಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಕೋವಿಡ್-19 ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೆಲವು ನಿಬಂಧನೆಗಳನ್ನು ವಿಧಿಸಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಆದೇಶ ಹೊರಡಿಸಿದ್ದಾರೆ.

  ಪಾಲಿಸಬೇಕಾದ ಮಾರ್ಗಸೂಚಿಗಳು

  1 ಹೊಸ ವರ್ಷಕ್ಕೆ ಸಂಬಂಧಿಸಿದಂತೆ ದಿನಾಂಕ: 31-12-2022, 01-01-2023 ಮತ್ತು 02.01.2023 ರಂದು ಆಚರಿಸಲಾಗುವ ಎಲ್ಲಾ ಸಮಾರಂಭಗಳನ್ನು ಮಧ್ಯರಾತ್ರಿ ಒಂದು ಗಂಟೆಯ ಒಳಗಾಗಿ ಕಡ್ಡಾಯವಾಗಿ ಮುಕ್ತಾಯಗೊಳಿಸತಕ್ಕದ್ದು.

  2 ದೊಡ್ಡ ಪ್ರಮಾಣದಲ್ಲಿ ನಡೆಸುವ ಸಮಾರಂಭಗಳನ್ನು ಕಡ್ಡಾಯವಾಗಿ ಹೊರಾಂಗಣದಲ್ಲಿ ಬೆಳಗಿನ ಹೊತ್ತಿನಲ್ಲಿ ನಡೆಸತಕ್ಕದ್ದು. ಸಾಧ್ಯವಾದಷ್ಟು ಮುಂಜಾನೆ ಹಾಗೂ ತಡರಾತ್ರಿಯ ಸಮಯದಲ್ಲಿ ಆಚರಣೆ ಮಾಡುವುದನ್ನು ತಪ್ಪಿಸುವುದು.

  3 ಸಾರ್ವಜನಿಕರು ಸೇರುವ ಪ್ರದೇಶ/ಸ್ಥಳಗಳಲ್ಲಿ ಆಸನ ಸಾಮರ್ಥ್ಯ ಮೀರದಂತೆ ಮುಖ್ಯವಾಗಿ ಒಳಾಂಗಣ ಪ್ರದೇಶ /ಸ್ಥಳಗಳಾದ ಹೋಟೆಲ್ಸ್/ಬಾರ್ ಅಂಡ್ ರೆಸ್ಟೋರೆಂಟ್ಸ್/ ರೆಸಾಟ್ಸ್/ ಪಬ್ ಕ್ಲಬ್ ಇತ್ಯಾದಿಗಳಲ್ಲಿನ ಆಸನ ಸಾಮರ್ಥ್ಯ ಮೀರದಂತೆ ಸಂಬಂಧಪಟ್ಟ ಮಾಲೀಕರು/ವ್ಯವಸ್ಥಾಪಕರುಗಳು ಕ್ರಮಕೈಗೊಳ್ಳತಕ್ಕದ್ದು.

  4 ಎಲ್ಲಾ ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಛೇರಿಗಳು, ಬಸ್ ನಿಲ್ದಾಣಗಳು, ಪ್ರಾರ್ಥನಾ ಮಂದಿರ/ಪೂಜಾ ಮಂದಿರ/ದೇವಸ್ಥಾನಗಳು, ಅಂಗಡಿ ಮುಂಗಟ್ಟುಗಳು, ಕೈಗಾರಿಕೆ ಹಾಗೂ ಇತರೆ ಕಾರ್ಖಾನೆಗಳು ಇತ್ಯಾದಿ ಪ್ರದೇಶಗಳಲ್ಲಿ ಮುಖಗವಸವನ್ನು ಕಡ್ಡಾಯವಾಗಿ ಧರಿಸುವುದು ಹಾಗೂ ಸ್ಯಾನಿಟೈಸರ್ ಬಳಕೆ ಮಾಡುವುದು ಕಡ್ಡಾಯವಾಗಿರುತ್ತದೆ.

  5 ಜ್ವರ, ಕೆಮ್ಮು, ನೆಗಡಿ, ಉಸಿರಾಟದ ಸಮಸ್ಯೆ ಹಾಗೂ ಇತ್ಯಾದಿ ಕೋವಿಡ್-19 ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಸ್ವಯಂ ಪ್ರೇರಿತರಾಗಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದು.

  6. 60 ವರ್ಷ ಮೇಲ್ಪಟ್ಟ ವಯಸ್ಕರರು, ಅನಾರೋಗ್ಯದಿಂದ ಬಳಲುತ್ತಿರುವವರು, ಗರ್ಭಿಣಿಯರು ಮತ್ತು ಬಾಣಂತಿಯರು ಇಂತಹ ಸಭೆ-ಸಮಾರಂಭಗಳಲ್ಲಿ ಭಾಗವಹಿಸುವುದರಿಂದ ದೂರವಿರುವುದು.

  7 ಸಮಾರಂಭಗಳು, ಹೋಟೆಲ್ಸ್/ ಬಾರ್ ಅಂಡ್ ರೆಸ್ಟೋರೆಂಟ್ಸ್/ ರೆಸಾಟ್ಸ್/ ಪಬ್/ ಕ್ಲಬ್ ಮತ್ತು ಇತ್ಯಾದಿಗಳ ಆಯೋಜಕರು/ ವ್ಯವಸ್ಥಾಪಕರು ಹಾಗೂ ಸೇವಾ ಸಿಬ್ಬಂದಿಗಳು ಆದ್ಯತೆ ಮೇರೆಗೆ ಬೂಸ್ಟರ್ ಡೋಸ್ ಅನ್ನು ಪಡೆಯುವುದು. ಕನಿಷ್ಠ ಎರಡು ಡೋಸ್ ಲಸಿಕೆಗಳನ್ನು ಪಡೆಯುವುದನ್ನು ನಿರೀಕ್ಷಿಸಲಾಗಿದೆ.

  ಪ್ರವೇಶ ದ್ವಾರದಲ್ಲಿ ಪಾಲಿಸ ಬೇಕಾದ ಮಾರ್ಗಸೂಚಿಗಳು

  1 ಮೇಲ್ಕಂಡ ಪ್ರದೇಶ/ಸ್ಥಳಗಳ ಪುವೇಶ ದ್ವಾರದಲ್ಲಿ ಸಾರ್ವಜನಿಕರು ಗುಂಪು ಗುಂಪಾಗಿ ಸೇರುವುದನ್ನು ತಪ್ಪಿಸಲು ಒಂದಕ್ಕಿಂತ ಹೆಚ್ಚಿನ ಪುವೇಶ ದ್ವಾರಗಳನ್ನು ನಿರ್ಮಿಸುವುದು.

  2 ಒಳಾಂಗಣ ಪ್ರದೇಶಗಳಲ್ಲಿ ಸಮಾರಂಭಗಳು ನಡೆಯುವ ಎಲ್ಲಾ ಸಂದರ್ಭಗಳಲ್ಲೂ ಕಡ್ಡಾಯವಾಗಿ ಮುಖಗವಸನ್ನು ಧರಿಸುವುದು ಮತ್ತು ಸಾಮಾಜಿಕ ಅಂತರವನ್ನುಕಾಪಾಡಿಕೊಳ್ಳುವುದು.

  3 ಪ್ರವೇಶ ದ್ವಾರದಲ್ಲಿ “ಮಾಸ್ಕ್ ಇಲ್ಲದೆ ಪ್ರವೇಶ ಇಲ್ಲ” ಎಂಬ ಫಲಕವನ್ನುಪ್ರದರ್ಶಿಸುವುದು.

  4 ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಟೀನಿಂಗ್ ವ್ಯವಸ್ಥೆ ಮಾಡಿಕೊಳ್ಳತಕದ್ದು.

  5 ಒಳಾಂಗಣ ಸಮಾರಂಭಗಳಲ್ಲಿ ಪ್ರತಿಯೊಬ್ಬರು ಹ್ಯಾಂಡ್ ಸ್ಯಾನಿಟೈಸರ್ ಬಳಸಲು ಅರಿವು ಮೂಡಿಸುವುದು.

  6 ಬಹುದೊಡ್ಡ ಸಮಾರಂಭಗಳನ್ನು ನಡೆಸಲು ಉದ್ದೇಶಿಸುವ ಆಯೋಜಕರು ಸಮಾರಂಭಗಳಲ್ಲಿ ಭಾಗವಹಿಸುವಂತಹ ವ್ಯಕ್ತಿಯು ಅಸ್ವಸ್ಥಗೊಂಡಲ್ಲಿ ಅಂತಹವರುಗಳನ್ನು ಹತ್ತಿರದ ವಿಶೇಷ ಸೌಲಭ್ಯವುಳ್ಳ, ಆಸ್ಪತ್ರೆಗೆ ಆಂಬ್ಯುಲೆನ್ಸ್ ಸೇವೆಯ ಮೂಲಕ ದಾಖಲಿಸಲು ಮುಂಚಿತವಾಗಿ ವ್ಯವಸ್ಥೆ ಮಾಡಿಕೊಳ್ಳತಕ್ಕದು.

  7 ಸಿನಿಮಾ ಮಂದಿರಗಳಿಗೆ ಚಲನಚಿತ್ರಗಳನ್ನು ವೀಕ್ಷಿಸಲು ಹೋಗುವ ಪ್ರತಿಯೊಬ್ಬ ಪ್ರೇಕ್ಷಕರು N-95 ಮುಖಗವಸನ್ನು ಕಡ್ಡಾಯವಾಗಿ ಧರಿಸತಕ್ಕದ್ದು. ಈ ಬಗ್ಗೆ ಪವೇಶ ದ್ವಾರದಲ್ಲಿರುವ ಸಿಬ್ಬಂದಿಗಳು ಪ್ರೇಕ್ಷಕರಿಗೆ ತಿಳಿ ಹೇಳುವುದು.

  Latest Posts

  ಲಯನ್ಸ್ ಕ್ಲಬ್ ಮಂಗಳಾದೇವಿ ವತಿಯಿಂದ ಶಾಲಾ ಮಕ್ಕಳೊಂದಿಗೆ ಗಣರಾಜ್ಯೋತ್ಸವ ಸಂಭ್ರಮ

  ಮಂಗಳೂರು: 74 ನೇ ಗಣರಾಜ್ಯೋತ್ಸವ ಕಾರ್ಯಕ್ರಮವು ನಗರದ ನೋಬಲ್ ಸ್ಕೂಲ್ ಕುಂಜತ್ ಬೈಲ್ ನಲ್ಲಿ ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿ ಅಧ್ಯಕ್ಷರಾದ ಲಯನ್ ಅನಿಲ್ ದಾಸ್ ರಾಷ್ಟ್ರ ಧ್ವಜಾರೋಹಣ ಗೈದು...

  ಪದವು ಬಿಕರ್ನಕಟ್ಟೆ ಸರಕಾರಿ ಶಾಲೆಯಲ್ಲಿ 74 ನೇ ಗಣರಾಜ್ಯೋತ್ಸವ

  ಮಂಗಳೂರು: ಪದವು ಬಿಕರ್ನಕಟ್ಟೆ ಸರಕಾರಿ ಶಾಲೆಯಲ್ಲಿ 74 ನೇ ಗಣರಾಜ್ಯೋತ್ಸವದ ಅಂಗವಾಗಿ ದ್ವಜಾರೋಹಣ ಕಾರ್ಯಕ್ರಮವನ್ನು ಬಿಜೆಪಿ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರು ಕರ್ನಾಟಕ ಮತ್ತು...

  74ನೇ ಗಣರಾಜ್ಯೋತ್ಸವದ ಅಂಗವಾಗಿ ಕೋಟೆಕಾರು ಪಟ್ಟಣ ಪಂಚಾಯತ್‌ ಕಟ್ಟಡದಲ್ಲಿ ಧ್ವಜಾರೋಹಣ

  ಕೋಟೆಕಾರು ಪಟ್ಟಣ ಪಂಚಾಯತ್‌ ಕಟ್ಟಡದಲ್ಲಿ 74 ಗಣರಾಜ್ಯೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಕೋಟೆಕಾರು ಪಟ್ಟಣ ಪಂಚಾಯತ್‌ನ ಕೌನ್ಸಿಲರ್‌ ರಾಘವ ಗಟ್ಟಿಯವರು ಧ್ವಜಾರೋಹಣಗೈದರು.ಬಳಿಕ ಇಲ್ಲಿನ ಮೂಲಭೂತ ಸೌಕರ್ಯಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು.

  ಯು. ಆರ್ ಶೆಟ್ಟಿಯವರಿಗೆ ” ಗುರುಕುಲ ಕಲಾ ಶ್ರೀರತ್ನ ಪ್ರಶಸ್ತಿ ಹಾಗೂ ಅಬೂಬಕರ್ ಅವರಿಗೆ ” ಗುರುಕುಲ ಜ್ಞಾನ ಸಿಂಧು” ಪ್ರಶಸ್ತಿ ಪ್ರಧಾನ

  ಬೆಂಗಳೂರು: ಗುರುಕುಲ ಕಲಾ ಪ್ರತಿಷ್ಠಾನ ರಾಜ್ಯ ಸಮಿತಿಯ ಆಶ್ರಯದಲ್ಲಿ ಬೆಂಗಳೂರಿನ ಸ್ಪೂರ್ತಿಧಾಮ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಪ್ರಸಿದ್ಧ ಸಾಹಿತ್ಯ ಸಾಧಕ ಡಿ. ಐ. ಅಬೂಬಕರ್ ಕೈರಂಗಳ ಹಾಗೂ...

  Don't Miss

  ಕೋಟ : ಪಡುಕರೆ ನಿವಾಸಿ ಕತಾರ್ ನಲ್ಲಿ ಕುಸಿದು ಬಿದ್ದು ಸಾವು

  ಕೋಟ: ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಕೋಟ ಸಮೀಪ ಕೋಟ ತಟ್ಟು ಪಡುಕರೆ ನಿವಾಸಿ ಮುಹಮ್ಮದ್‌ (45) ಕತಾರ್‌ನಲ್ಲಿ ಗುರುವಾರ ಬೆಳಗ್ಗೆ ಮಿದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದಾರೆ. ಮೃತರು ತಾಯಿ,...

  ಸಂಕ್ರಾಂತಿ ಬಳಿಕ ಕೇಂದ್ರ ಸಂಪುಟ ವಿಸ್ತರಣೆ?

  ಹೊಸದಿಲ್ಲಿ : ಕೇಂದ್ರ ಸಚಿವ ಸಂಪುಟದಲ್ಲಿ ಬದಲಾವಣೆ ತರಲು ಪ್ರಧಾನಿ ನರೇಂದ್ರ ಮೋದಿಯವರು ಚಿಂತನೆ ನಡೆಸುತ್ತಿದ್ದು, ಜ.14ರ ಬಳಿಕ ಬದಲಾವಣೆ ಸಾಧ್ಯತೆ ಇದೆ. ಬಿಜೆಪಿ ಸಂಘಟನೆಯನ್ನು ಬಲಪಡಿಸುವುದು...

  BIGG NEWS : ‘ರಿಷಭ್ ಪಂತ್’ಗೆ ಗಂಭೀರ ಗಾಯ ; ‘ಉತ್ತಮ ಆರೋಗ್ಯ & ಯೋಗಕ್ಷೇಮ’ಕ್ಕಾಗಿ ಪ್ರಧಾನಿ ಮೋದಿ ಪ್ರಾರ್ಥನೆ

  ನವದೆಹಲಿ: ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಶುಕ್ರವಾರ ಬೆಳಿಗ್ಗೆ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಹಿಂತಿರುಗುವಾಗ ಅಪಘಾತಕ್ಕೀಡಾಗಿದ್ದು, ಪ್ರಧಾನಿ ನರೇಂದ್ರ ಮೋದಿ ದುಃಖ ವ್ಯಕ್ತಪಡಿಸಿದ್ದಾರೆ. 'ಖ್ಯಾತ ಕ್ರಿಕೆಟಿಗ ರಿಷಭ್ ಪಂತ್...

  ಡಿ.31 ರಿಂದ ಜ.1 ರವರೆಗೆ ಒಳಗುಡ್ಡೆ ಕಾಂಬೋಡಿಗುತ್ತು ಶ್ರೀ ಉಗ್ಗೆದಲ್ತಾಯ ದೈವಸ್ಥಾನದ ಪುನರ್ ಪ್ರತಿಷ್ಠೆ, ದೊಂದಿ ನೇಮೋತ್ಸವ

  ಬಂಟ್ವಾಳ: ಬಂಟ್ವಾಳ ತಾಲೂಕಿನ ಕೂರಿಯಾಳ ಗ್ರಾಮದ ಒಳಗುಡ್ಡೆ ಕಾಂಬೋಡಿಗುತ್ತು ಶ್ರೀ ಉಗ್ಗೆದಲ್ತಾಯ ದೈವಸ್ಥಾನದ ಪುನರ್ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ಪ್ರತಿಷ್ಠಾ ದೊಂದಿ ನೇಮೋತ್ಸವ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ...

  ಹಿರಿಯ ಐಪಿಎಸ್ ಅಧಿಕಾರಿ ಆರ್. ದಿಲೀಪ್ ಹೃದಯಾಘಾತದಿಂದ ನಿಧನ..!

  ಬೆಂಗಳೂರು: ಹಿರಿಯ ಪೊಲೀಸ್ ಅಧಿಕಾರಿ ಆರ್ ದಿಲಿಪ್ ಅವರು ಹೃಹಯಘಾತದಿಂದ ನಿಧನರಾಗಿದ್ದಾರೆ. ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದ 53 ವರ್ಷದ ದಿಲೀಪ್ ಅನಾರೋಗ್ಯದಿಂದ ಬಳಲುತಿದ್ದರು....