ಮಂಗಳೂರು: ಅಬಕಾರಿ ಅಧಿಕಾರಿಗಳು ಮಂಗಳೂರು ದಕ್ಷಿಣ ವಲಯ-1 ರ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿ ಗಾಂಜಾ ಸೇವನೆ ಮಾಡುತ್ತಿದ್ದ ಏಳು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಅನೀಶ್, ಅಭಿರಾಮ್ , ಮಹಮ್ಮದ್ ಮಾರ್ವನ್, ರಿಲ್ಲಾಶ್, ಹರ್ಷ, ಮಹಮ್ಮದ್ ಸನನ್ ಮತ್ತು ರಯ್ಯಾನ್ ಬಂಧಿತರು. ಬಂಧಿಸಲ್ಪಟ್ಟ ಎಲ್ಲರೂ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
