ಮೈಸೂರು : ವಿದ್ಯಾರ್ಥಿಗಳಲ್ಲಿ ನೈತಿಕ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಸಂವಿಧಾನಸ ಪೀಠಿಕೆ ಓದುವುದು ಕಡ್ಡಾಯವಾಗಿದೆ ಎಂದು ಸಚಿವ ಹೆಚ್.ಡಿ. ಮಹದೇವಪ್ಪ ಹೇಳಿದ್ದಾರೆ.
ಮೈಸೂರಿನಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಹೆಚ್.ಸಿ. ಮಹದೇವಪ್ಪ, ಮಕ್ಕಳು ವಿದ್ಯಾರ್ಥಿಗಳಿದ್ದಾಗಲೇ ನೈತಿಕ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಲಿ ಎಂಬ ಕಾರಣಕ್ಕೆ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದುವುದು ಕಡ್ಡಾಯ ಮಾಡಲಾಗಿದೆ. ಒಂದು ನಿಮಿಷದ ಸಂವಿಧಾನದ ಪೀಠಿಕೆ ಓದು ಸಮಾನತೆಯ ಪಾಠ ಕಲಿಸುತ್ತದೆ ಎಂದರು.
ಇನ್ನು ಕಳೆದ ಬಾರಿ ಜನರಿಗೆ ಹೆಚ್ಚು ಸಮಯ ನೀಡದ ಕಾರಣ ನಾನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದೆ. ಮೂರು ಬಾರಿ ನನ್ನಿಂದ ನಾನೇ ಸೋತಿದ್ದೇನೆ.ಗೆದ್ದಾಗ ಮಂತ್ರಿಯಾಗುತ್ತಿದೆ. ಜನರಿಗೆ ಹೆಚ್ಚು ಸಮಯ ಕೊಡಲು ಆಗುತ್ತಿರಲಿಲ್ಲ. ನಾನು ತೆರೆದ ಪುಸ್ತಕವಿದ್ದಂತೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ.ಆದರೆ ಪ್ರಚಾರ ಮಾಡಿಕೊಳ್ಳಲಾಗಲಿಲ್ಲ ಎಂದು ಹೇಳಿದ್ದಾರೆ.