ಮಂಗಳೂರು:ತಣ್ಣೀರಬಾವಿ ಬೀಚ್ ಬಳಿ 6ನೇ ತರಗತಿ ವಿದ್ಯಾರ್ಥಿ ಮೇಲೆ ಲಾಠಿ ಬೀಸಿದ ಆರೋಪದ ಹಿನ್ನೆಲೆ ಪಣಂಬೂರು ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಸುನೀಲ್ ಎಂಬವರನ್ನು ಅಮಾನತುಗೊಳಿಸಲಾಗಿದೆ.
ಈ ಕುರಿತು ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದು, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಣ್ಣೀರಬಾವಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸಿಬ್ಬಂದಿ ಸುನೀಲ್ ಅವರನ್ನು ಅಮಾನತುಗೊಳಿಸಲಾಗಿದ್ದು, ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಘಟನೆ ಕುರಿತು ಬಾಲಕರ ಪೋಷಕರು ಅಥವಾ ಬಾಲಕನಿಂದಾಗಲಿ ದೂರು ಬಂದಿಲ್ಲ ಎಂದು ತಿಳಿಸಿದ್ದಾರೆ.
ಜ.1ರಂದು ತಣ್ಣೀರಭಾವಿ ಬೀಚ್‌ಗೆ ಬಳಿ ಬ್ಲಾಕ್ ಆಗಿತ್ತು.ಇದರಿಂದ ಪೊಲೀಸರು ಲಾಠೀ ಬೀಸಿದ್ದರು.ಈ ವೇಳೆ ಬಾಲಕನ ಮೇಲೂ ಲಾಟೀ ಬೀಸಲಾಗಿತ್ತು.ಘಟನೆಯಲ್ಲಿ ಬಾಲಕನಿಗೆ ಗಾಯವಾಗಿತ್ತು. ಇದಕ್ಕ ಸಾರ್ವಜನಿಕರು ಪೊಲೀಸ್ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದರು.
