ಬೆಂಗಳೂರು: ನಗರದಲ್ಲಿ ರೌಡಿ ಶೀಟರ್ ಒಬ್ಬ, ಮಹಿಳಾ ಹೆಡ್ ಕಾನ್ ಸ್ಟೇಬಲ್ ಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಹೀಗಾಗಿ ಬೆಂಗಳೂರಿನ ಸಿಟಿ ಪೊಲೀಸರೇ ಬೆಚ್ಚಿ ಬೀಳುವಂತೆ ಆಗಿದೆ.
ಬೆಂಗಳೂರಿನ ಹೆಚ್ ಎಎಲ್ ಬಳಿಯ ಜ್ಯೋತಿ ನಗರದಲ್ಲಿ ಇಂದು ರೌಡಿ ಶೀಟರ್ ಶೇಕ್ ಶರೀಫ್ ಆಲಿಯಾಸ್ ಶರೀಫ್ (25) ಎಂಬಾತ HAL ಠಾಣೆಯ ಮಹಿಳಾ ಹೆಡ್ ಕಾನ್ ಸ್ಟೇಬಲ್ ವಿನುತಾ ಎಂಬುವರಿಗೆ ಚಾಕುವಿನಿಂದ ಇರಿದಿರೋದಾಗಿ ತಿಳಿದು ಬಂದಿದೆ. ಚಾಕುವಿನಿಂದ ಇರಿದ ಬಳಿಕ ರೌಡಿ ಶೀಟರ್ ಸ್ಥಳದಿಂದ ಪರಾರಿಯಾಗಿದ್ದಾನೆ. ಚಾಕು ಇರಿತಕ್ಕೆ ಒಳಗಾದಂತ ಮಹಿಳಾ ಹೆಡ್ ಕಾನ್ ಸ್ಟೇಬಲ್ ವಿನುತಾರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಹೆಚ್ ಎಎಲ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.