Saturday, June 25, 2022

SSLC ಪೂರಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಸೇವೆ ಕಲ್ಪಿಸಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಸಿಟಿ) ತಿಳಿಸಿದೆ. SSLC ಪೂರಕ...
More

    Latest Posts

    ಕುಂದಾಪುರ: ಪುರಾತನ ಕಾಲದ ಆನೆ ನೀರು ಕುಡಿಯುವ ಕೊಪ್ಪರಿಗೆ ಪತ್ತೆ

    ಕುಂದಾಪುರ: ಪುರಾತನ ಕಾಲದಲ್ಲಿ ಬಳಕೆಯಲ್ಲಿದ್ದ ಆನೆ ನೀರು ಕುಡಿಯುವ ಕೊಪ್ಪರಿಗೆ, ಆನೆ ಕಟ್ಟುವ ಕಲ್ಲಿನ ಕಂಬವೊಂದು ತಾಲೂಕಿನ ಹೊಸಂಗಡಿ ಪೇಟೆಯಲ್ಲಿ ನಿನ್ನೆ ಪತ್ತೆಯಾಗಿದೆ. ಶತವಸಂತಗಳಿಗೂ ಹಿಂದಿನ ಕಾಲದ ರಾಜರ, ಆನೆ...

    BIG NEWS: ಹಳ್ಳದಲ್ಲಿ ತೇಲಿ ಬಂದ 7 ನವಜಾತ ಶಿಶುಗಳ ಶವ; ಕಂಗಾಲಾದ ಗ್ರಾಮಸ್ಥರು

    ಬೆಳಗಾವಿ: ಹಳ್ಳದಲ್ಲಿ ತೇಲಿ ಬಂದ ಬೃಹತ್ ಡಬ್ಬಿಯಲ್ಲಿ 7 ನವಜಾತ ಶಿಶುಗಳ ಮೃತದೇಹ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂ ಕಿನಲ್ಲಿ ಬೆಳಕಿಗೆ ಬಂದಿದೆ. ಆಗತಾನೇ...

    ರಕ್ತ ಪರೀಕ್ಷೆಯ ಮೂಲಕ ʻಸ್ತನ ಕ್ಯಾನ್ಸರ್‌ʼ ಪತ್ತೆ: ಭಾರತದಲ್ಲೂ ಈ ತಂತ್ರಜ್ಞಾನ ಲಭ್ಯ

    ದೆಹಲಿ: ರಕ್ತ ಪರೀಕ್ಷೆ ಮೂಲಕ ಸ್ತನ ಕ್ಯಾನ್ಸರ್ ಅನ್ನು ಅದರ ಆರಂಭಿಕ ಹಂತದಲ್ಲೇ ಪತ್ತೆ ಮಾಡಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ತಂತ್ರಜ್ಞಾನ ಈಗ ಭಾರತದಲ್ಲೂ ಲಭ್ಯವಿದೆ.

    ಮಂಗಳೂರು: ಜುಲೈ 3ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ

    ಮಂಗಳೂರು: ಬಿಲ್ಲವ ಸಂಘ (ರಿ.) ಉರ್ವ -ಅಶೋಕನಗರ ವತಿಯಿಂದ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ,ಮಂಗಳೂರು ಇವರ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಜುಲೈ-3 ಆದಿತ್ಯವಾರದಂದು ಉರ್ವ ಬಿಲ್ಲವ ಸಂಘದ ನಾರಾಯಣ...

     2 ತಿಂಗಳ ಬಳಿಕ ದ.ಕ ಜಿಲ್ಲೆಯಲ್ಲಿ ಪುನರಾರಂಭಗೊಂಡ ವಾಣಿಜ್ಯ ವಹಿವಾಟು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಮತ್ತಷ್ಟು ಸಡಿಲಿಕೆ ಮಾಡಲಾಗಿದ್ದು, ಬೆಳಗ್ಗೆ 7ರಿಂದ ಅಪರಾಹ್ನ 2ರವರೆಗೆ ಎಲ್ಲ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಿರುವ ಹಿನ್ನಲೆಯಲ್ಲಿ ಲಾಕ್ ಡೌನ್, ಸ್ತಬ್ಧಗೊಂಡಿದ್ದ ಜಿಲ್ಲೆಯ ವಾಣಿಜ್ಯ ವಹಿವಾಟು ಸುಮಾರು ಎರಡು ತಿಂಗಳ ಬಳಿಕ ಪುನಾರಂಭಗೊಂಡಿದೆ. ದಿನಸಿ, ತರಕಾರಿ, ಮೆಡಿಕಲ್‌ ಶಾಪ್‌ಗಳು ಮಾತ್ರ ಲಾಕ್‌ಡೌನ್‌ ಆರಂಭವಾದಾಗಿನಿಂದಲೂ ಜಿಲ್ಲಾದ್ಯಂತ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದರೂ ಉಳಿದ ಯಾವ ಅಂಗಡಿಗಳನ್ನು ತೆರೆಯಲು ಅವಕಾಶ ಇರಲಿಲ್ಲ.

    ಈಗ ನಿಯಮ ಸಡಿಲಗೊಳಿಸಿರುವುದು ಹಾಗೂ ಕೆಲವೊಂದು ವ್ಯಾಪಾರಕ್ಕೆ ಅವಕಾಶ ನೀಡಿರುವುದರಿಂದ ಆರ್ಥಿಕ ಚಟುವಟಿಕೆ ಗರಿಗೆದರುವ ಲಕ್ಷಣಗಳಿವೆ. ಆರ್ಥಿಕ ಚಟುವಟಿಕೆಗೆ ಅವಕಾಶ ಸಿಕ್ಕಿದ್ದರಿಂದ ಅಂಗಡಿ ಮಾಲೀಕರು ಬಾಗಿಲು ತೆರೆದು ವ್ಯಾಪಾರಕ್ಕೆ ಅಣಿಯಾಗಿದ್ದಾರೆ. ಆದರೆ, ಕೆಲವೊಂದು ಅಂಗಡಿ ಹೊರತುಪಡಿಸಿ ಉಳಿದ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಬಹಳ ವಿರಳವಾಗಿದೆ. ವಸ್ತ್ರಮಳಿಗೆ, ಪಾದರಕ್ಷೆಗಳ ಅಂಗಡಿಗಳು ಬೆಳಗ್ಗೆಯೇ ತೆರೆದುಕೊಂಡಿದ್ದು, ಸಾಮಗ್ರಿಗಳನ್ನು ಜೋಡಿಸಿಡುವ ಕಾರ್ಯದಲ್ಲಿ ಸಿಬ್ಬಂದಿ ನಿರತರಾಗಿರುವುದು ಕಂಡುಬರುತ್ತಿದೆ.

    ಅಪರಾಹ್ನ 2ರವರೆಗೆ ಎಲ್ಲ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದರೂ ಕೆಲವೊಂದು ನಿರ್ಬಂಧಗಳನ್ನು ಜಿಲ್ಲಾಡಳಿತ ವಿಧಿಸಿದೆ. ಅಂದರೆ ಎಸಿ (ಏರ್ ಕಂಡಿಷನ್ಡ್) ಅಂಗಡಿಗಳು ಹಾಗೂ ಎಸಿ ಹೊಂದಿರುವ ಶಾಪ್‌ಗಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳು ಮತ್ತು ಮಾಲ್‌ಗಳ ಕಾರ್ಯಾಚರಣೆಗೆ ಅವಕಾಶವಿರುವುದಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ತೆರೆದ ಹೊಟೇಲ್‌ಗಳು: ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಹೊಟೇಲ್‌ಗಳನ್ನು ತೆರೆಯಲೂ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಕೆಲವೊಂದು ಹೊಟೇಲ್‌‌ಗಳು ಇಂದು ತೆರೆದುಕೊಂಡಿದೆ. ಆದರೆ ಒಟ್ಟು ಆಸನ ಸಾಮರ್ಥ್ಯದ ಶೇ.50ರಷ್ಟು ಗ್ರಾಹಕರು ಮೀರುವಂತಿಲ್ಲ ಎಂದು ಮಾರ್ಗಸೂಚಿ ಹೊರಡಿಸಲಾಗಿದೆ.

    Latest Posts

    ಕುಂದಾಪುರ: ಪುರಾತನ ಕಾಲದ ಆನೆ ನೀರು ಕುಡಿಯುವ ಕೊಪ್ಪರಿಗೆ ಪತ್ತೆ

    ಕುಂದಾಪುರ: ಪುರಾತನ ಕಾಲದಲ್ಲಿ ಬಳಕೆಯಲ್ಲಿದ್ದ ಆನೆ ನೀರು ಕುಡಿಯುವ ಕೊಪ್ಪರಿಗೆ, ಆನೆ ಕಟ್ಟುವ ಕಲ್ಲಿನ ಕಂಬವೊಂದು ತಾಲೂಕಿನ ಹೊಸಂಗಡಿ ಪೇಟೆಯಲ್ಲಿ ನಿನ್ನೆ ಪತ್ತೆಯಾಗಿದೆ. ಶತವಸಂತಗಳಿಗೂ ಹಿಂದಿನ ಕಾಲದ ರಾಜರ, ಆನೆ...

    BIG NEWS: ಹಳ್ಳದಲ್ಲಿ ತೇಲಿ ಬಂದ 7 ನವಜಾತ ಶಿಶುಗಳ ಶವ; ಕಂಗಾಲಾದ ಗ್ರಾಮಸ್ಥರು

    ಬೆಳಗಾವಿ: ಹಳ್ಳದಲ್ಲಿ ತೇಲಿ ಬಂದ ಬೃಹತ್ ಡಬ್ಬಿಯಲ್ಲಿ 7 ನವಜಾತ ಶಿಶುಗಳ ಮೃತದೇಹ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂ ಕಿನಲ್ಲಿ ಬೆಳಕಿಗೆ ಬಂದಿದೆ. ಆಗತಾನೇ...

    ರಕ್ತ ಪರೀಕ್ಷೆಯ ಮೂಲಕ ʻಸ್ತನ ಕ್ಯಾನ್ಸರ್‌ʼ ಪತ್ತೆ: ಭಾರತದಲ್ಲೂ ಈ ತಂತ್ರಜ್ಞಾನ ಲಭ್ಯ

    ದೆಹಲಿ: ರಕ್ತ ಪರೀಕ್ಷೆ ಮೂಲಕ ಸ್ತನ ಕ್ಯಾನ್ಸರ್ ಅನ್ನು ಅದರ ಆರಂಭಿಕ ಹಂತದಲ್ಲೇ ಪತ್ತೆ ಮಾಡಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ತಂತ್ರಜ್ಞಾನ ಈಗ ಭಾರತದಲ್ಲೂ ಲಭ್ಯವಿದೆ.

    ಮಂಗಳೂರು: ಜುಲೈ 3ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ

    ಮಂಗಳೂರು: ಬಿಲ್ಲವ ಸಂಘ (ರಿ.) ಉರ್ವ -ಅಶೋಕನಗರ ವತಿಯಿಂದ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ,ಮಂಗಳೂರು ಇವರ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಜುಲೈ-3 ಆದಿತ್ಯವಾರದಂದು ಉರ್ವ ಬಿಲ್ಲವ ಸಂಘದ ನಾರಾಯಣ...

    Don't Miss

    `ಹಿಜಾಬ್’ ವಿವಾದ : ಕಾಲೇಜಿನಿಂದ ವರ್ಗಾವಣೆ ಪ್ರಮಾಣಪತ್ರ ಕೋರಿದ ಐವರು ವಿದ್ಯಾರ್ಥಿನಿಯರು!

    ಮಂಗಳೂರು : ರಾಜ್ಯದಲ್ಲಿ ಹಿಜಾಬ್ ವಿವಾದ ಮತ್ತೆ ಶುರುವಾಗಿದ್ದು, ಹಿಜಾಬ್ ಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಮತ್ತೆ ಐವರು ವಿದ್ಯಾರ್ಥಿನಿಯರು ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಹಂಪನಕಟ್ಟೆ...

    ಕಾರ್ಕಳ: ಜೀಪ್ ಪಲ್ಟಿ- ಯುವತಿ ಮೃತ್ಯು, ಮೂವರಿಗೆ ಗಂಭೀರ ಗಾಯ

    ಕಾರ್ಕಳ : ಬೆಳ್ಮಣ್‌ನ ಮುಂಡ್ಕೂರು ಸಮೀಪದ ಸಂಕಲಕರಿಯ ಎಂಬಲ್ಲಿ ಜೀಪು ಪಲ್ಟಿಯಾದ ಪರಿಣಾಮ ಯುವತಿಯೊಬ್ಬರು ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ಮೃತರನ್ನು...

    ಕರ್ನಾಟಕಕ್ಕೆ ಹೋಗುತ್ತಿದ್ದೇನೆ; ಕನ್ನಡದಲ್ಲಿಯೇ ಟ್ವೀಟ್ ಮಾಡಿ ತಿಳಿಸಿದ ಪ್ರಧಾನಿ ಮೋದಿ

    ನವದೆಹಲಿ: ಕರ್ನಾಟಕ ರಾಜ್ಯಕ್ಕೆ ಹೋಗುತ್ತಿರುವೆ. ಅಲ್ಲಿ ಬೆಂಗಳೂರು ಮತ್ತು ಮೈಸೂರಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುವೆ ಎಂದು ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಟ್ವೀಟ್ ಮಾಡಿ, ಕಾರ್ಯಕ್ರಮಗಳ ವಿವರವನ್ನು ತಿಳಿಸಿದ್ದಾರೆ. ಮೊದಲು ಬೆಂಗಳೂರಿನ ಮಿದುಳು...

    ಮಂಗಳೂರು – ಮುಂಬಯಿ: ಇಂಡಿಗೋ ವಿಮಾನಯಾನ ಆರಂಭ

    ಮಂಗಳೂರು: ಮಂಗಳೂರು – ಮುಂಬಯಿ ನಡುವೆ ಇಂಡಿಗೋ ವಿಮಾನದ ದೈನಂದಿನ ಸಂಚಾರ ರವಿವಾರ ಆರಂಭಗೊಂಡಿದೆ. ಇಂಡಿಗೋದ ಏರ್‌ಬಸ್‌ ಎ320 ವಿಮಾನ ಪ್ರತಿದಿನ ಬೆಳಗ್ಗೆ 8.50ಕ್ಕೆ ಮುಂಬಯಿಯಿಂದ ಹೊರಟು...

    ಉಡುಪಿ: ಕಡಿಯಾಳಿ ದೇವಸ್ಥಾನದ ತಿರುಗುವ ಮುಚ್ಚಿಗೆಗೆ ಅಮಿತಾಬ್ ಬಚ್ಚನ್ ಮೆಚ್ಚುಗೆ

    ಉಡುಪಿ: ಕಡಿಯಾಳಿ ದೇವಸ್ಥಾನದ ತಿರುಗುವ ಮುಚ್ಚಿಗೆಗೆ ಅಮಿತಾಬ್ ಬಚ್ಚನ್ ಮೆಚ್ಚುಗೆಉಡುಪಿ: ದೇಶಾದ್ಯಂತ ಮೆಚ್ಚುಗೆ ಗಳಿಸಿದ ಕಡಿಯಾಳಿ ದೇವಳದ ತಿರುಗುವ ಮುಚ್ಚಿಗೆ ಮತ್ತು ತಾಯಿ ಮಹಿಷಮರ್ದಿನಿಯ ಚಿತ್ರವನ್ನು ಬಿಗ್ ಬಿ ಖ್ಯಾತಿಯ...