ಕಡಬ: ಕೋಡಿಂಬಾಳ ಪೇಟೆಯ ಕೋಳಿ ಮಾಂಸದ ಅಂಗಡಿಯಲ್ಲಿ ಮಾಂಸ ಖರೀದಿಸಿದ ಗ್ರಾಹಕನಿಗೆ ಅಂಗಡಿ ಮಾಲಕ ಚಿಲ್ಲರೆ ನೀಡುವ ವೇಳೆ 100 ರೂ. ನಕಲಿ ನೋಟು ನೀಡಿದ ಘಟನೆ ಶನಿವಾರ ನಡೆದಿದೆ.
ಅಸಲಿ ನೋಟನ್ನೇ ಹೋಲುವ 100 ರೂ. ಕಲರ್ ಜೆರಾಕ್ಸ್ ನೋಟನ್ನು ಅಂಗಡಿಯಿಂದ ಪಡೆದ ಗ್ರಾಹಕ ಬಳಿಕ ಆಟೋದಲ್ಲಿ ಪ್ರಯಾಣಿಸುವಾಗ ಅದನ್ನು ಆಟೋ ಚಾಲಕ ರಾಜೇಶ್ ಅವರಿಗೆ ನೀಡಿದ್ದ.ನೋಟು ನಕಲಿ ಎಂದು ಪತ್ತೆ ಮಾಡಿದ ಆಟೋ ಚಾಲಕ ರಾಜೇಶ್ ಕಡಬ ಪೊಲೀಸರಿಗೆ ನೀಡಿದ ಮಾಹಿತಿಯಂತೆ ಪೊಲೀಸರು ಕೋಳಿ ಮಾಂಸದ ಅಂಗಡಿಗೆ ತೆರಳಿ ಅಂಗಡಿ ಮಾಲಕ ಅಶ್ರಫ್ನನ್ನು ವಿಚಾರಣೆಗೊಳಪಡಿಸಿದ್ದಾರೆ.
ಯಾರೋ ಗ್ರಾಹಕರು ನೀಡಿದ ನೋಟನ್ನು ಸರಿಯಾಗಿ ಗಮನಿಸಿದೆ ಅಸಲಿ ಎಂದೇ ತಿಳಿದು ನಾನು ಇನ್ನೋರ್ವ ಗ್ರಾಹಕನಿಗೆ ನೀಡಿದ್ದೆ ಎಂದು ಅಶ್ರಫ್ ವಿವರಣೆ ನೀಡಿದ್ದಾರೆ.

