ಮಂಗಳೂರು: ಶಾಲಾ ಬಸ್- ಸ್ಕೂಟರ್ ಗೆ ಢಿಕ್ಕಿ ಹೊಡೆದು ಸ್ಕೂಟರ್ ಬಸ್ ನಡಿಗೆ ಸಿಲುಕಿದ ಘಟನೆ ನಗರದ ಪಿವಿಎಸ್ ಜಂಕ್ಷನ್ ನಲ್ಲಿ ಶನಿವಾರ(ಡಿ.10) ನಡೆದಿದೆ.
ಘಟನೆ ಮಧ್ಯಾಹ್ನ 1:45ರ ಸುಮಾರಿಗೆ ನಡೆದಿದ್ದು, ಶಾಲಾ ಬಸ್ ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಬಸ್ ನಡಿಗೆ ಸಿಲುಕಿತ್ತು.
ಅದೃಷ್ಟವಶಾತ್ ಸ್ಕೂಟರ್ ನಲ್ಲಿದ್ದ ಇಬ್ಬರು ಯುವತಿಯರು ಪಾರಾಗಿದ್ದಾರೆ. ಸ್ಕೂಟರ್ ಬಿದ್ದ ಕೂಡಲೇ ಇಬ್ಬರು ಕೂಡ ಬಲ ಬದಿಗೆ ಬಿದ್ದಿದ್ದರಿಂದ ಬಚಾವಾಗಿದ್ದಾರೆ ಎಂಬುದು ಸ್ಥಳೀಯರ ಮಾತು.