ತಿರುವನಂತಪುರಂ: ಆತ ಭದ್ರತಾ ಸಿಬ್ಬಂದಿ. ವಿಶೇಷ ಅಂದ್ರೆ ಮುಖ್ಯಮಂತ್ರಿ ಅಧಿಕೃತ ನಿವಾಸದ ಸಿಬ್ಬಂದಿ. ಆದರೆ ರೈಲಿಗೆ ತಲೆಗೆ ಇಟ್ಟು ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ.
ಹೌದು.ಇದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರ ಅಧಿಕೃತ ನಿವಾಸದ ಭದ್ರತಾ ಸಿಬ್ಬಂದಿ ಅನೀಶ್ ಕ್ಸೇವಿಯರ್ (32) ಆತ್ಮಹತ್ಯೆ ಕಥೆ.
ಮೊನ್ನೆ ಭಾನುವಾರ 1.30ರ ಸುಮಾರಿಗೆ ಇಲ್ಲಿಯ ಇಡಿಚಕ್ಕಪ್ಲಾಮೂಡು ಬಳಿ ಇರುವ ರೈಲ್ವೆ ಮೇಲ್ಸೇತುವೆಯಲ್ಲಿ ಮೃತ ದೇಹ ಪತ್ತೆ ಆಗಿದೆ.
ಪರಸಾಲ ಪೊಲೀಸ್ ಠಾಣೆಯಲ್ಲಿನ ಮಾನಸಿಕ ಕಿರುಕುಳದಿಂದಲೇ ಅನೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ.

