ಮಂಗಳೂರು: ಯುದ್ದಪೀಡಿತ ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪಡೀಲ್ ನಿವಾಸಿ ಕ್ಲೇಟನ್ ಓಸ್ಮಂಡ್ ಡಿಸೋಜಾ ಕಳೆದ 2ದಿನಗಳ ಹಿಂದೆ ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿದ್ದಾರೆ.
ಮಂಗಳೂರಿನ ಕ್ಲೇಟನ್ ಓಸ್ಮಂಡ್ ಡಿಸೋಜಾ ರವರು ಇಂದು ಸಹಾಯಕ ಪೊಲೀಸ್ ಆಯುಕ್ತರಾದ ದಿನಕರ್ ಶೆಟ್ಟಿಯವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು.
ಉಕ್ರೇನ್ ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಕ್ಲೇಟನ್ ಅಲ್ಲಿ ನಡೆದಂತಹ ತಮ್ಮ ಅನುಭವಗಳನ್ನು ಹಾಗೂ ಕಣ್ಣೆದುರೇ ಕಂಡ ಅನೇಕ ಭೀಕರ ದೃಶ್ಯಗಳನ್ನು ಬಿಚ್ಚಿಟ್ಟಿದ್ದಾರೆ.
ಫೆ.24 ರಂದು ಬೆಳಗಿನ ಜಾವ 2 ಗಂಟೆಗೆ ಬಾಂಬ್ ಸದ್ದಿಗೆ ನಾವೆಲ್ಲ ಎಚ್ಚರಗೊಂಡೆವು.ಅಂದಿನಿಂದ ಬಂಕರ್ಗಳ ಒಳಗೆ ಸೀಮಿತ ಆಹಾರ ಮತ್ತು ನಿದ್ದೆಯಿಲ್ಲದೆ ಭಯದಿಂದ ದಿನಕಳೆಯುತ್ತಿದ್ದೆವು. ಬಾಂಬಿಂಗ್ ನಡುವೆಯೂ ನಾವು ಭಾರತದ ರಾಷ್ಟ್ರ ಧ್ವಜ ಹಿಡಿದು ಸುಮಾರು 10 ಕಿಮೀ ನಡೆದುಕೊಂಡೆ ರೈಲ್ವೇ ನಿಲ್ದಾಣಕ್ಕೆ ಬಂದೆವು ಎಂದು ಅಲ್ಲಿನ ಭಯದ ವಾತಾವಾರಣದ ಮಾತುಗಳನ್ನು ವಿವರಿಸಿದರು.
ಇದೇ ವೇಳೆ, ನನಗೆ ಉಕ್ರೇನ್ ನಿಂದ ತಾಯ್ನಾಡಿಗೆ ಬರಲು ಸಹಕರಿಸಿದ ಭಾರತ ಸರಕಾರ ಹಾಗೂ ಕರ್ನಾಟಕ ಸರಕಾರ ಮತ್ತು ಸ್ಥಳೀಯ ಶಾಸಕರಾದ ವೇದವ್ಯಾಸ್ ಕಾಮತ್ ರವರಿಗೂ ನಾನು ಕೃತಜ್ಞತೆ ತಿಳಿಸುತ್ತೇನೆ ಎಂದು ತುಳುನಾಡ ಸೂರ್ಯ ಪತ್ರಿಕೆಯ ಸಂಪಾದಕರಾದ ಯೋಗೀಶ್ ಶೆಟ್ಟಿ ಜಪ್ಪು ರವರ ಜೊತೆ ತನ್ನ ಅನುಭವದ ಮಾತುಗಳನ್ನು ಹಂಚಿಕೊಂಡರು.
