Wednesday, May 25, 2022

ಬ್ರಹ್ಮಾವರ: ಬೆಂಕಿ ಕಾಣಿಸಿಕೊಂಡ ಸ್ಥಿತಿಯಲ್ಲಿ ಕಾರು ಪತ್ತೆ; ಸುಟ್ಟು ಕರಕಲಾದ ಯುವಕ – ಯುವತಿ

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಂದಾರ್ತಿ ಸಮೀಪ ಸುಟ್ಟು ಕರಕಲಾದ ಕಾರು ಮತ್ತು ಕಾರಿನೊಳಗೆ ಜೋಡಿ ಮೃತದೇಹ ನಿಗೂಢವಾಗಿ ಪತ್ತೆಯಾಗಿದೆ.ಮಂದರ್ತಿ ಸಮೀಪ ಹೆಗ್ಗುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊತ್ತೂರು...
More

    Latest Posts

    BIG NEWS: ರಾಸಾಯನಿಕ ಸೋರಿಕೆ; 6 ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

    ಮಡಿಕೇರಿ: ಲಾರಿಯಿಂದ ರಾಸಾಯನಿಕ ದ್ರವ ಸೋರಿಕೆಯಾದ ಪರಿಣಾಮ 6 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ನೆಲ್ಯಾಹುದಿಕೇರಿಯಲ್ಲಿ ನಡೆದಿದೆ. ಮಾಕುಟ್ಟ ಚೆಕ್ ಪೋಸ್ಟ್ ನಲ್ಲಿ...

    ಬಂಟ್ವಾಳ: ಮನೆಯ ಮಾಡಿನ ಹಂಚು ತೆಗೆದು ಕಳ್ಳತನ

    ಬಂಟ್ವಾಳ: ಮನೆಯ ಮಾಡಿನ ಹಂಚು ತೆಗೆದು ಮನೆಗೆ ನುಗ್ಗಿದ ಕಳ್ಳರು ನಗದು, ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಕೊಳ್ನಾಡು ಗ್ರಾಮದ ಕಟ್ಟೆ ಮನೆ ಎಂಬಲ್ಲಿ ನಡೆದಿದೆ.ಕೊಳ್ನಾಡು ಗ್ರಾಮ ಕಟ್ಟೆ ಮನೆ...

    ರಸ್ತೆ ಕಾಮಗಾರಿ ವಿರೋಧಿಸಿ ರಸ್ತೆಗೆ ಅಡ್ಡಲಾಗಿ ಮಲಗಿ ಪ್ರತಿಭಟಿಸಿದ ವೃದ್ಧೆ..!

    ಮಂಗಳೂರು: ಮಹಾನಗರಪಾಲಿಕೆ ಕಾಂಕ್ರೀಟೀಕರಣ ಮಾಡುವ ವೇಳೆ ವೃದ್ದ ಮಹಿಳೆಯೊಬ್ಬರು ಈ ಸ್ಥಳ ಖಾಸಗಿಯಾಗಿದ್ದು ಜಾಗ ನನ್ನದು ಎಂದು ನಡು ರಸ್ತೆಯಲ್ಲೇ ಮಲಗಿ ಅಡ್ಡಿಪಡಿಸಿದ ಘಟನೆ ಮಣ್ಣಗುಡ್ಡ ಗುರ್ಜಿ ಬಳಿ ಇಂದು...

    ಕುಕ್ಕೆ ಸುಬ್ರಮಣ್ಯ ದೇವರ ಸೇವೆಗೆ ತಮ್ಮನ್ನು ಮರುನೇಮಕ ಮಾಡುವಂತೆ DC ಗೆ ಮನವಿ

    ಸುಬ್ರಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪಂಚಪರ್ವ ಸಿಬ್ಬಂದಿಗಳನ್ನು ಕೆಲಸದಿಂದ ವಜಾಗೊಳಿಸಿದ್ದನ್ನು ಖಂಡಿಸಿ ಮತ್ತು ತಮ್ಮನ್ನು ಮರುನೇಮಕ ಮಾಡುವಂತೆ ಒತ್ತಾಯಿಸಿ ಪಂಚಪರ್ವ ಸಿಬ್ಬಂದಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳನ್ನು ಭೇಟಿಮಾಡಿ ಮನವಿ ಸಲ್ಲಿಸಿದರು.

    ‘ಚಲನಚಿತ್ರಗಳಲ್ಲಿ ದೇಸೀಯತೆ ಮತ್ತು ಶಾಸ್ತ್ರೀಯ ಸಂಗೀತಗಳ ಸಮ್ಮಿಲನ’

    “ಜಗತ್ತಿನ ಸಿನಿಮಾಗಳಲ್ಲಿ ಭಾರತೀಯ ಸಿನಿಮಾ ಗಮನ ಸೆಳೆಯುವುದೇ ತನ್ನ ಸಂಗೀತದಿಂದ.ಕನ್ನಡ ಸಿನಿಮಾಗಳೂ ಇದಕ್ಕೆ ಹೊರತಲ್ಲ. ಚಲನಚಿತ್ರಗಳಲ್ಲಿ ದೇಸೀಯತೆ ಮತ್ತು ಶಾಸ್ತ್ರೀಯ ಸಂಗೀತಗಳನ್ನು ಸಮ್ಮಿಲನಗೊಳಿಸಿಕೊಂಡಿದೆ” ಎಂದು ಮಂಗಳೂರು ಆಕಾಶವಾಣಿ ಕಲಾವಿದ ಖ್ಯಾತ ಸಿತಾರ್ ವಾದಕ ರಫೀಕ್ ಉಸ್ತಾದ್ ಖಾನ್ ಅವರು ಹೇಳಿದರು. ಅವರು ಕರಾವಳಿ ಲೇಖಕಿಯರ ವಾಚಕಿಯರ ಸಂಘ ಆಯೋಜಿಸಿದ್ದ ಮನಸು ಮಾಗಿದ ಸುಸ್ವರ ರಾಜ್ಯಮಟ್ಟದ ಕನ್ನಡದ ಮೌಲಿಕ ಚಿತ್ರಗೀತೆಗಳ ಕುರಿತು ಮಂಗಳೂರಿನ ಉರ್ವಸ್ಟೋರ್ ಸಾಹಿತ್ಯ ಸದನದಲ್ಲಿ ಭಾನುವಾರ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

    “ಚಲನಚಿತ್ರ ಗೀತೆಗಳ ಪ್ರಸಾರಕ್ಕಾಗಿ ಇಂದಿನಂತೆ ಸಂಪರ್ಕ ಮಾಧ್ಯಮಗಳಿಲ್ಲದ ಕಾಲದಲ್ಲಿ ಗೀತರಚನೆ ಸಂಗೀತ ನಿರ್ದೇಶನಕ್ಕಾಗಿ ಸುಮಾರು ಹತ್ತು ಹದಿನೈದು ದಿನಗಳ ಬಳಕೆಯಾಗಿ ಹತ್ತು ನಿಮಿಷದ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಆ ಕಾರ್ಯಕ್ರಮ ಸಂಯೋಜನೆ ಮಾಡುವಾಗ ಇದ್ದ ಸಂಕಷ್ಟಗಳು ಬಹಳ. ಸಿನಿಮಾ ಸಂಗೀತವನ್ನು ಸಾಹಿತ್ಯ ವನ್ನು ಜನರಲ್ಲಿಗೆ ಒಯ್ಯುವ ಕೆಲಸವನ್ನು ಈ ಕೃತಿ ಅದ್ಭುತವಾಗಿ ನಡೆಸಿದೆ. ಈ ಧ್ಯಾನಸ್ಥ ಸಾಹಿತ್ಯ ರಚನೆಗೆ ಲೇಖಕಿಗೆ ಅಭಿನಂದನೆಗಳು. ಸಿನಿಮಾ ಸಾಹಿತ್ಯ ಸಂಗೀತವನ್ನು ನೋಡುವ ಮನೋಧರ್ಮ ಇಂದು ಬದಲಾಗಿದೆ” ಎಂದವರು ಅಭಿಪ್ರಾಯ ಪಟ್ಟರು.

    ಹಿರಿಯ ಲೇಖಕಿ ಎ. ಪಿ. ಮಾಲತಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ‘ಮನಸು ಮಾಗಿದ ಸುಸ್ವರ’ ಅಂಕಣ ಕೃತಿಯ ಲೇಖಕಿ ಜ್ಯೋತಿ ಗುರುಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಕೃತಿರಚನೆಗೆ ಕಾರಣವಾದ ಬಾಲ್ಯದ ನೆನಪು, ಅನುಭವಗಳನ್ನು ಹಂಚಿಕೊಂಡರು.
    ಮಂಗಳೂರು ಆಕಾಶವಾಣಿಯ ಉನ್ನತ ಶ್ರೇಣಿಯ ಕಲಾವಿದರಾದ ಜಯಲಕ್ಷ್ಮೀ ಶಾಸ್ತ್ರೀ ಹಾಗೂ ರತ್ನಾವತಿ ಬೈಕಾಡಿ ಅವರು ‘ಅಮರ ಮಧುರ’ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬಳಿಕ ಖ್ಯಾತ ವಾಗ್ಮಿ, ಲೇಖಕಿ ಡಾ. ಶುಭಾ ಮರವಂತೆ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಮಂಗಳೂರು ಆಕಾಶವಾಣಿಯ ವಿಶ್ರಾಂತ ಹಿರಿಯ ಪ್ರಸಾರಕ ಮುದ್ದು ಮೂಡುಬೆಳ್ಳೆ ಅವರು ‘ಚಿತ್ರಗೀತೆಗಳಲ್ಲಿ ಪ್ರೇಮದ ಪರಿಕಲ್ಪನೆ ಮತ್ತು ಸಾಮಾಜಿಕ ಮೌಲ್ಯಗಳು’ ಎಂಬ ವಿಷಯದ ಕುರಿತು ಹಾಗೂ
    ಸುಂಕದಕಟ್ಟೆಯ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯರಾದ ಲತಾ ಆರ್ ಕೋಟ್ಯಾನ್ ಅವರು ‘ಮೌಲಿಕ ಚಿತ್ರಗೀತೆಗಳ ರಸಗ್ರಹಣ’ ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ ಮಾಡಿದರು. ವಿವಿಧ ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮನಸು ಮಾಗಿದ ಸುಸ್ವರ ಕೃತಿಯಿಂದ ಆಯ್ದ ಚಿತ್ರಗೀತೆಗಳನ್ನು ಹಾಡಿದರು. ಸಂಘದ ಸದಸ್ಯೆಯರು ಹಾಗೂ ವಿದ್ಯಾರ್ಥಿಗಳು ಲೇಖಕಿಯೊಂದಿಗೆ ಮುಕ್ತ ಸಂವಾದದಲ್ಲಿ ಪಾಲ್ಗೊಂಡರು.
    ಕರಾವಳಿ ವಾಚಕಿಯರ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳಾಯಿರು ಸ್ವಾಗತಿಸಿ ಪ್ರಸ್ತಾವನೆಗೈದರು. ವಿಜಯಲಕ್ಷ್ಮಿ ಬಿ. ಶೆಟ್ಟಿ ವಂದಿಸಿದರು. ವಾಣಿಶ್ರೀ ನಿರೂಪಿಸಿದರು.

    Latest Posts

    BIG NEWS: ರಾಸಾಯನಿಕ ಸೋರಿಕೆ; 6 ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

    ಮಡಿಕೇರಿ: ಲಾರಿಯಿಂದ ರಾಸಾಯನಿಕ ದ್ರವ ಸೋರಿಕೆಯಾದ ಪರಿಣಾಮ 6 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ನೆಲ್ಯಾಹುದಿಕೇರಿಯಲ್ಲಿ ನಡೆದಿದೆ. ಮಾಕುಟ್ಟ ಚೆಕ್ ಪೋಸ್ಟ್ ನಲ್ಲಿ...

    ಬಂಟ್ವಾಳ: ಮನೆಯ ಮಾಡಿನ ಹಂಚು ತೆಗೆದು ಕಳ್ಳತನ

    ಬಂಟ್ವಾಳ: ಮನೆಯ ಮಾಡಿನ ಹಂಚು ತೆಗೆದು ಮನೆಗೆ ನುಗ್ಗಿದ ಕಳ್ಳರು ನಗದು, ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಕೊಳ್ನಾಡು ಗ್ರಾಮದ ಕಟ್ಟೆ ಮನೆ ಎಂಬಲ್ಲಿ ನಡೆದಿದೆ.ಕೊಳ್ನಾಡು ಗ್ರಾಮ ಕಟ್ಟೆ ಮನೆ...

    ರಸ್ತೆ ಕಾಮಗಾರಿ ವಿರೋಧಿಸಿ ರಸ್ತೆಗೆ ಅಡ್ಡಲಾಗಿ ಮಲಗಿ ಪ್ರತಿಭಟಿಸಿದ ವೃದ್ಧೆ..!

    ಮಂಗಳೂರು: ಮಹಾನಗರಪಾಲಿಕೆ ಕಾಂಕ್ರೀಟೀಕರಣ ಮಾಡುವ ವೇಳೆ ವೃದ್ದ ಮಹಿಳೆಯೊಬ್ಬರು ಈ ಸ್ಥಳ ಖಾಸಗಿಯಾಗಿದ್ದು ಜಾಗ ನನ್ನದು ಎಂದು ನಡು ರಸ್ತೆಯಲ್ಲೇ ಮಲಗಿ ಅಡ್ಡಿಪಡಿಸಿದ ಘಟನೆ ಮಣ್ಣಗುಡ್ಡ ಗುರ್ಜಿ ಬಳಿ ಇಂದು...

    ಕುಕ್ಕೆ ಸುಬ್ರಮಣ್ಯ ದೇವರ ಸೇವೆಗೆ ತಮ್ಮನ್ನು ಮರುನೇಮಕ ಮಾಡುವಂತೆ DC ಗೆ ಮನವಿ

    ಸುಬ್ರಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪಂಚಪರ್ವ ಸಿಬ್ಬಂದಿಗಳನ್ನು ಕೆಲಸದಿಂದ ವಜಾಗೊಳಿಸಿದ್ದನ್ನು ಖಂಡಿಸಿ ಮತ್ತು ತಮ್ಮನ್ನು ಮರುನೇಮಕ ಮಾಡುವಂತೆ ಒತ್ತಾಯಿಸಿ ಪಂಚಪರ್ವ ಸಿಬ್ಬಂದಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳನ್ನು ಭೇಟಿಮಾಡಿ ಮನವಿ ಸಲ್ಲಿಸಿದರು.

    Don't Miss

    ಕುಲಶೇಖರ ಕಲ್ಪನೆ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ

    ಮಂಗಳೂರು: ಎರಡು ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಕಾರಣ ಮಂಗಳೂರು ಕುಲಶೇಖರ ಕಲ್ಪನೆ ಬಳಿ ಬೃಹತ್ ಮರವೊಂದು ಧರಾಶಾಹಿಯಾಗಿದೆ. ರಸ್ತೆ ಬದಿಯಲ್ಲಿದ್ದ ಮರವು ಬುಡಸಮೇತ ಕಿತ್ತು ರಸ್ತೆಗೆ ಅಡ್ಡಲಾಗಿ...

    SSLC Result 2022: ಒಟ್ಟಿಗೆ ಪರೀಕ್ಷೆ ಬರೆದ ತಾಯಿ,ಮಗಳು – ಪಾಸ್​

    ವಿಜಯನಗರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಒಟ್ಟಿಗೆ ಬರೆದ ತಾಯಿ - ಮಗಳು ಉತ್ತೀರ್ಣರಾಗಿದ್ದಾರೆ. ವಿಜಯನಗರದ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ನಿವಾಸಿ, ಚಿಲುಗೋಡಿ ಹೈಸ್ಕೂಲ್‌ ಶಿಕ್ಷಕ ಬಿ.ರಾಮಜ್ಜರ ಪತ್ನಿ ಸವಿತಾ (37) ಹಾಗೂ...

    ಕೆನಡಾ ಸಂಸತ್ ನಲ್ಲಿ ಮೊಳಗಿದ ಕನ್ನಡದ ಕಂಪು…!!

    ಕೆನಡಾ : ಕೆನಡಾ ಸಂಸತ್ ನಲ್ಲಿ ಕನ್ನಡದಲ್ಲಿ ಭಾಷಣ ಮಾಡುವ ಮೂಲಕ ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರು ಇತಿಹಾಸ ನಿರ್ಮಿಸಿದ್ದಾರೆ. ತುಮಕೂರು...

    ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಹೋಗಿ ಭೀಕರ ಅಪಘಾತ – ಇಬ್ಬರು ಯುವಕರು ಸ್ಥಳದಲ್ಲೇ ಸಾವು

    ಮೈಸೂರು : ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ನಂಜನಗೂಡು ಸಿಂಧುವಳ್ಳಿ ಬಳಿಯ ಹುಣಸನಾಳು...

    ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ : ಆರೋಪಿ ಬಂಧನ

    ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್​ ಇಟ್ಟು ಸ್ಫೊಟಿಸುವುದಾಗಿ ಇಂದು(ಶುಕ್ರವಾರ) ಮುಂಜಾನೆ ಬೆದರಿಕೆ ಹಾಕಿ ಕೆಲ ಕಾಲ ಆತಂಕ ಸೃಷ್ಟಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾವನ ಮೇಲಿನ ಸೇಡಿಗಾಗಿ ಏರ್‌ಪೋರ್ಟ್‌ಗೆ...