Monday, November 29, 2021

ಮಂಗಳೂರು: ನಾಗಬನ ಧ್ವಂಸ ಪ್ರಕರಣ; 8 ಆರೋಪಿಗಳ ಬಂಧನ

ಮಂಗಳೂರು: ನಗರದ ಕೂಳೂರು ಹಾಗೂ ಕೋಡಿಕಲ್ ನಲ್ಲಿ ನಾಗಬನಕ್ಕೆ ನುಗ್ಗಿ ನಾಗದೇವರ ಬಿಂಬದ ಕಲ್ಲಿಗೆ ಹಾನಿ ಮಾಡಿದ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ‌. ಸಫ್ವಾನ್, ಪ್ರವೀಣ್...
More

    Latest Posts

    ಸದ್ಯಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಕೊಡುವ ಚಿಂತನೆ ಇಲ್ಲ – ಬಿ.ಸಿ ನಾಗೇಶ್

    ತುಮಕೂರು: ರಾಜ್ಯದ ಎರಡು ಮೂರು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ.ಧಾರವಾಡದ ಎಸ್ ಡಿ ಎಂ ಕಾಲೇಜು,ಬೆಂಗಳೂರಿನ ಒಂದು ಶಾಲೆ,ಮೈಸೂರಿನಲ್ಲಿ ಪಿಯು ಕಾಲೇಜಿನ 5 ಮಕ್ಕಳಿಗೆ ಪಾಸಿಟಿವ್ ಬಂದಿದೆ....

    ವಿದೇಶಿ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯ : ಸಿಎಂ ಬಸವರಾಜ ಬೊಮ್ಮಾಯಿ

    ತುಮಕೂರು : ರಾಜ್ಯದಲ್ಲಿ ಹೊಸ ಒಮಿಕ್ರಾನ್ ವೈರಸ್ (Omicron Variant ) ಆತಂಕದ ಹಿನ್ನೆಲೆಯಲ್ಲಿ ವಿದೇಶದಿಂದ ಬರುವ ಎಲ್ಲಾ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಕಡ್ಡಾಯ (Corona Test mandatory) ಮಾಡಲಾಗಿದೆ...

    ಉಡುಪಿ ಹೊಟೇಲಿನಲ್ಲಿ ಮಸಾಲೆ ದೋಸೆ ಸಪ್ಲೈ ಮಾಡುತ್ತಿರುವ ಯಕ್ಷಗಾನ ವೇಷಧಾರಿಗಳು -ಯಕ್ಷಗಾನ ಪ್ರಿಯರಿಂದ ಆಕ್ರೋಶ

    ಉಡುಪಿ: ಯಕ್ಷಗಾನ‌ ಕಲೆ ಎಲ್ಲೆಡೆ ಮನೆಮಾತು.ಹೀಗಾಗಿ ಪ್ರತೀ ಘಟನೆ ,ಪ್ರಸಂಗ,ಹಾಸ್ಯ,ವಿಡಂಬನೆ ,ರಾಜಕೀಯ ಕಾಲೆಳೆಯುವಿಕೆಗೂ ಪಾತ್ರಧಾರಿಗಳು ಯಕ್ಷಗಾನ ಕಲೆಯನ್ನು ಬಳಸುವುದುಂಟು.ಆದರೆ ಇಲ್ಲಿ ಇಬ್ಬರು ಯಕ್ಷಗಾನ ವೇಷಧಾರಿಗಳು, ಹೊಟೇಲಿನಲ್ಲಿ ಮಸಾಲೆ ದೋಸೆ ಸಪ್ಲೈ...

    ಸುರತ್ಕಲ್: ದುಷ್ಕರ್ಮಿಯಿಂದ ATMಗೆ ಹಾನಿ

    ಸುರತ್ಕಲ್: ಸುರತ್ಕಲ್ ಸಮೀಪದ ಎಂಆರ್ ಪಿಎಲ್ ರಸ್ತೆಯ ಕಟ್ಲ ತಿರುವು ಬಳಿಯ ಎಸ್ ಬಿ ಐ ಬ್ಯಾಂಕಿನ ATM ನ್ನು ವ್ಯಕ್ತಿ ಯೋರ್ವ ಹಾನಿ ಮಾಡಿದ ಘಟನೆ ನಡೆದಿದೆ.ಕಳೆದ ಸೆ.9...

    ಉಡುಪಿ: ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾಗಿ ಕಾ.ವೀ.ಕೃಷ್ಣದಾಸ್ ನೇಮಕ

    ಮಂಗಳೂರು/ಉಡುಪಿ : ಕವಿ,ಸಂಘಟಕ ಕಾ.ವೀ.ಕೃಷ್ಣದಾಸ್ ಅವರನ್ನು ಉಡುಪಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಪ್ರಭಾರ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿ ಮೈಸೂರಿನ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ರಾಜ್ಯಾಧ್ಯಕ್ಷರಾಗಿರುವ ಕರ್ನಾಟಕ ವಿಧಾನ ಪರಿಷತ್ ನ ಮಾಜಿ ಸದಸ್ಯ ತೋಂಟದಾರ್ಯ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

    ಆಕ್ಟೊಬರ್ 20ರಂದು ಮೈಸೂರಿನಲ್ಲಿ ನಡೆದ ಧರ್ಮದರ್ಶಿಗಳ ಸಭೆಯಲ್ಲಿ ಕೇಂದ್ರ ಸಮಿತಿ ಸಂಚಾಲಕರಾಗಿರುವ ಎಂ.ಜಿ.ಅರಸ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಅಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿಯವರ ಶಿಫಾರಸ್ಸಿನಂತೆ ಕಾ.ವೀ.ಕೃಷ್ಣದಾಸ್ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಜಿಲ್ಲಾಧ್ಯಕ್ಷರಾಗಿದ್ದ ಶ್ರೀಮತಿ ತಾರಾ ಆಚಾರ್ಯ ಅವರನ್ನು ಜಿಲ್ಲಾ ಗೌರವಾಧ್ಯಕ್ಷರನ್ನಾಗಿ ನೇಮಿಸಲಾಗಿದೆ

    ಸದ್ಯ ಕಾ.ವೀ.ಕೃಷ್ಣದಾಸ್ ಅವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಹೆಚ್ಚುವರಿಯಾಗಿ ಉಡುಪಿ ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ನೀಡಲಾಗಿದೆ. ನಿಯಮಾವಳಿಗನುಸಾರ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳು ಆಯ್ಕೆ ಮಾಡಿಕೊಳ್ಳುವ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ತಾಲೂಕುಗಳಿಗೆ ತಾಲೂಕು ಅಧ್ಯಕ್ಷರುಗಳನ್ನು ಅಧಿಕಾರವನ್ನು ರಾಜ್ಯಾಧ್ಯಕ್ಷರು ನೀಡಿದ್ದಾರೆ.

    ಕಾ.ವೀ.ಕೃಷ್ಣದಾಸ್ ಕುರಿತು:

    ಕಳೆದ 25 ವರ್ಷಗಳಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಯಲ್ಲಿ ನಿರಂತರವಾಗಿ ಗುರುತಿಸಿಕೊಂಡಿದ್ದಾರೆ. 1980ರಲ್ಲಿ ಮಂಗಳೂರಿನ ಬೋಂದೆಲ್ ಎಂಬಲ್ಲಿ ಹುಟ್ಟಿದ ಕಾ.ವೀ.ಕೃಷ್ಣದಾಸ್ ಅವರು ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. 10 ವರ್ಷ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. 1995 ರಿಂದ ‘ಯಶುಪ್ರಿಯ ಪಕ್ಷಿಕೆರೆ’ ಎಂಬ ಕಾವ್ಯನಾಮದಲ್ಲಿ ಕತೆ,ಕವಿತೆ,ಲೇಖನ,ವಿಮರ್ಶೆ ಮತ್ತು ಬರಹಗಳನ್ನು ಬರೆಯುತ್ತಾ ಬಂದಿರುವ ಶ್ರೀಯುತರು ಪ್ರಪ್ರಥಮ ಗ್ರಾಮೀಣ ಸಾಹಿತ್ಯ ಸಮ್ಮೇಳನ, 9ನೇ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, 11ನೇ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ, 4ನೇ ಚುಟುಕು ಸಾಹಿತ್ಯ ಸಮ್ಮೇಳನಗಳಲ್ಲಿ ಆಹ್ವಾನಿತ ಕವಿಯಾಗಿ ಭಾಗವಹಿಸಿದ್ದಾರೆ.

    ‘ನಾನೊಂದು ಪುಟ್ಟ ಹಣತೆ’ ‘ಶರಸಂಚಯ’ ‘ಬಾಗಿಲು ತೆರೆದಿದೆ’ ಇವರ ಕನ್ನಡ ಕವನ ಸಂಕಲನಗಳು. ‘ನೂರೊಂದು ಕತೆಗಳು’ ಇವರ ಸಂಪಾದಿತ ಕಥಾಸಂಕಲನ. ಮೂಕಹಕ್ಕಿ, ಮೋಕೆದ ಮಗಲ್, ಎನ್ನ ಮೋಕೆದ ಇವರು ಸಾಹಿತ್ಯ ನೀಡಿರುವ ಪ್ರಮುಖ ಆಡಿಯೋ ವೀಡಿಯೊ ಆಲ್ಬಂ ಗಳು. ಉಡುಗೊರೆ, ಕೋರಿರೊಟ್ಟಿ, ಪಮ್ಮಣ್ಣೆ ದಿ ಗ್ರೇಟ್, ಭೋಜರಾಜ್ MBBS, ಇವರು ಸಾಹಿತ್ಯ ನೀಡಿರುವ ಸಿನೆಮಾಗಳು. ಇವರು ಕಳೆದ 15ವರ್ಷಗಳಿಂದ ರಿಟೇಲ್ ಆಡಳಿತದಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿಷ್ಠಿತ ಸಾಧನಾ ಪ್ರಶಸ್ತಿ,ಹಂಸಕಾವ್ಯ ಪ್ರಶಸ್ತಿಗಳ ಸ್ಥಾಪಕರು.ಕನ್ನಡ ತುಳು ಹಿಂದಿ ಇಂಗ್ಲಿಷ್ ಮತ್ತು ಬ್ಯಾರಿ ಭಾಷೆಯಲ್ಲಿ ಸಾಹಿತ್ಯ ರಚಿಸುವ ಇವರ ‘ಬೆಳಕು’ ಇವರದೇ ಸ್ವರಚಿತ ನುಡಿಮುತ್ತುಗಳ ಕೃತಿ,’ಗೆಲುವಿನ ಕುದುರೆ’ ಕವನ ಸಂಕಲನ, ‘ಚಂದ್ರಲೋಕದ ತಾರೆಯರು’ (ಕನ್ನಡ ಹಾಯ್ಕುಗಳ ಸಂಕಲನ) ಮುದ್ರಣಕ್ಕೆ ಸಿದ್ಧವಾಗಿದೆ.

    Latest Posts

    ಸದ್ಯಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಕೊಡುವ ಚಿಂತನೆ ಇಲ್ಲ – ಬಿ.ಸಿ ನಾಗೇಶ್

    ತುಮಕೂರು: ರಾಜ್ಯದ ಎರಡು ಮೂರು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ.ಧಾರವಾಡದ ಎಸ್ ಡಿ ಎಂ ಕಾಲೇಜು,ಬೆಂಗಳೂರಿನ ಒಂದು ಶಾಲೆ,ಮೈಸೂರಿನಲ್ಲಿ ಪಿಯು ಕಾಲೇಜಿನ 5 ಮಕ್ಕಳಿಗೆ ಪಾಸಿಟಿವ್ ಬಂದಿದೆ....

    ವಿದೇಶಿ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯ : ಸಿಎಂ ಬಸವರಾಜ ಬೊಮ್ಮಾಯಿ

    ತುಮಕೂರು : ರಾಜ್ಯದಲ್ಲಿ ಹೊಸ ಒಮಿಕ್ರಾನ್ ವೈರಸ್ (Omicron Variant ) ಆತಂಕದ ಹಿನ್ನೆಲೆಯಲ್ಲಿ ವಿದೇಶದಿಂದ ಬರುವ ಎಲ್ಲಾ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಕಡ್ಡಾಯ (Corona Test mandatory) ಮಾಡಲಾಗಿದೆ...

    ಉಡುಪಿ ಹೊಟೇಲಿನಲ್ಲಿ ಮಸಾಲೆ ದೋಸೆ ಸಪ್ಲೈ ಮಾಡುತ್ತಿರುವ ಯಕ್ಷಗಾನ ವೇಷಧಾರಿಗಳು -ಯಕ್ಷಗಾನ ಪ್ರಿಯರಿಂದ ಆಕ್ರೋಶ

    ಉಡುಪಿ: ಯಕ್ಷಗಾನ‌ ಕಲೆ ಎಲ್ಲೆಡೆ ಮನೆಮಾತು.ಹೀಗಾಗಿ ಪ್ರತೀ ಘಟನೆ ,ಪ್ರಸಂಗ,ಹಾಸ್ಯ,ವಿಡಂಬನೆ ,ರಾಜಕೀಯ ಕಾಲೆಳೆಯುವಿಕೆಗೂ ಪಾತ್ರಧಾರಿಗಳು ಯಕ್ಷಗಾನ ಕಲೆಯನ್ನು ಬಳಸುವುದುಂಟು.ಆದರೆ ಇಲ್ಲಿ ಇಬ್ಬರು ಯಕ್ಷಗಾನ ವೇಷಧಾರಿಗಳು, ಹೊಟೇಲಿನಲ್ಲಿ ಮಸಾಲೆ ದೋಸೆ ಸಪ್ಲೈ...

    ಸುರತ್ಕಲ್: ದುಷ್ಕರ್ಮಿಯಿಂದ ATMಗೆ ಹಾನಿ

    ಸುರತ್ಕಲ್: ಸುರತ್ಕಲ್ ಸಮೀಪದ ಎಂಆರ್ ಪಿಎಲ್ ರಸ್ತೆಯ ಕಟ್ಲ ತಿರುವು ಬಳಿಯ ಎಸ್ ಬಿ ಐ ಬ್ಯಾಂಕಿನ ATM ನ್ನು ವ್ಯಕ್ತಿ ಯೋರ್ವ ಹಾನಿ ಮಾಡಿದ ಘಟನೆ ನಡೆದಿದೆ.ಕಳೆದ ಸೆ.9...

    Don't Miss

    ಬಂಟ್ವಾಳ: ಕಾಲು ಜಾರಿ ಕೆರೆಗೆ ಬಿದ್ದು ಯುವತಿ ಸಾವು

    ಬಂಟ್ವಾಳ: ಯುವತಿಯೋರ್ವಳು ಅಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಕಾರಾಜೆ ಎಂಬಲ್ಲಿ ನಡೆದಿದೆ. ಸಜೀಪ ಮೂಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರಾಜೆ ನಿವಾಸಿ...

    ಪಾಣೆಮಂಗಳೂರು ನೇತ್ರಾವತಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ!

    ಬಂಟ್ವಾಳ: ಟೈಲರ್ ವೃತ್ತಿಗೆಂದು ತೆರಳಿ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವನ ಮೃತದೇಹ ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಪೊಡಿಕ್ಕಳ ಬೆಂಜನಪದವು ನಿವಾಸಿ ನಾರಾಯಣ ಮೂಲ್ಯ (62) ಮೃತಪಟ್ಟ ವ್ಯಕ್ತಿ....

    ಕಾಪು: ರೈಲು ಢಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿ ಸಾವು

    ಕಾಪು: ರೈಲು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನ.26ರ ಶುಕ್ರವಾರ ಮುಂಜಾನೆ ನಡೆದಿದೆ. ಮೃತರನ್ನು ಮಲ್ಲಾರು ಪಕೀರಣಕಟ್ಟೆ ಎಂ.ಜೆ.ಎಂ ಮಸೀದಿ ಬಳಿಯ ನಿವಾಸಿ ಅಬ್ದುಲ್ ರಜಾಕ್ (48)...

    ಮಂಗಳೂರು: ದೋಣಿಯಿಂದ ಬಿದ್ದು ಮೀನುಗಾರ ಸಾವು

    ಮಂಗಳೂರು: ಇಲ್ಲಿನ ಹಳೆ ಬಂದರು ದಕ್ಕೆಯಿಂದ ಮೀನುಗಾರಿಕೆಗೆಂದು ಬೋಟ್‌ನಲ್ಲಿ ಹೊರಟಿದ್ದ ಮೀನುಗಾರರ ಪೈಕಿ ಮನೋಜ್ ಎಂಬವರು ಸಮುದ್ರಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಇವರ ವಿಳಾಸ ಹಾಗೂ ಇತರೆ ವಿವರಗಳು ಲಭ್ಯವಾಗಿಲ್ಲ....

    ಬೆಳ್ತಂಗಡಿ: ಪಿಯುಸಿ ವಿದ್ಯಾರ್ಥಿನಿ ನಾಪತ್ತೆ- ದೂರು ದಾಖಲು !

    ಬೆಳ್ತಂಗಡಿ: ಕಸಬಾ ಗ್ರಾಮದ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದಲ್ಲಿದ್ದ ವಿದ್ಯಾರ್ಥಿ ನಿಯೋರ್ವರು ನ.24 ರಂದು ನಾಪತ್ತೆಯಾಗಿದ್ದಾರೆ. ಬೆಳ್ತಂಗಡಿಯ ಜೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ...