Sunday, September 15, 2024
spot_img
More

    Latest Posts

    ಸಮಾಜಕ್ಕೆ ಮಾರ್ಗದರ್ಶನ, ಸೇವಾ ಮನೋಭಾವದ ವಿಚಾರದಲ್ಲಿ ಕ್ರೈಸ್ತರು ವಹಿಸಿರುವ ಪಾತ್ರ ದೇಶವೇ ಹೆಮ್ಮೆಯಿಂದ ಸ್ಮರಿಸುತ್ತದೆ -ಪ್ರಧಾನಿ ಮೋದಿ ನಿವಾಸದಲ್ಲಿ ಕ್ರಿಸ್ಮಸ್ ಹಬ್ಬ

    ನವದೆಹಲಿ: ಸಮಾಜಕ್ಕೆ ಮಾರ್ಗದರ್ಶನ ನೀಡುವ ಮತ್ತು ಸೇವಾ ಮನೋಭಾವದ ವಿಚಾರದಲ್ಲಿ ಕ್ರೈಸ್ತರು ವಹಿಸಿರುವ ಪಾತ್ರವನ್ನು ದೇಶವು ಹೆಮ್ಮೆಯಿಂದ ಸ್ಮರಿಸುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ಕ್ರಿಸ್‌ಮಸ್‌ ಅಂಗವಾಗಿ ತಮ್ಮ ನಿವಾಸದಲ್ಲಿ ಸೋಮವಾರ ಕ್ರೈಸ್ತ ಸಮುದಾಯದವರೊಂದಿಗೆ ಹಬ್ಬದ ಸಂಭ್ರಮದಲ್ಲಿ ಭಾಗಿಯಾದ ಅವರು, ಕ್ರೈಸ್ತರು ನೀಡಿರುವ ಕೊಡುಗೆಗಳನ್ನು ಶ್ಲಾಘಿಸಿದರು.

    ಈ ಹಿಂದೆ ಕ್ರೈಸ್ತರೊಂದಿಗೆ ತಾವು ಹೊಂದಿದ್ದ ನಿಕಟ ಹಾಗೂ ಸೌಹಾರ್ದಯುತ ಸಂಬಂಧವನ್ನು ಮೆಲುಕು ಹಾಕಿದರು.

    ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕ್ರೈಸ್ತ ಸಮುದಾಯದವರು ನಡೆಸಿಕೊಂಡು ಬರುತ್ತಿರುವ ಸಂಸ್ಥೆಗಳು ದೇಶದಾದ್ಯಂತ ಸಮಾಜದ ಏಳಿಗೆಯಲ್ಲಿ ಮಹತ್ತರ ಕೊಡುಗೆ ನೀಡುತ್ತಾ ಬಂದಿವೆ. ಬಡವರು ಮತ್ತು ದುರ್ಬಲರ ಸೇವೆಯಲ್ಲಿ ಅವರು ಯಾವಾಗಲೂ ಮುಂಚೂಣಿಯಲ್ಲಿ ಇದ್ದಾರೆ ಎಂದು ಪ್ರಶಂಸಿಸಿದರು. 

    ಯೇಸು ಕ್ರಿಸ್ತನ ಜೀವನ ಸಂದೇಶವು ಮುಖ್ಯವಾಗಿ ಸಹಾನುಭೂತಿ ಮತ್ತು ಸೇವೆಯ ಮೇಲೆ ಕೇಂದ್ರೀಕೃತವಾಗಿದೆ. ಸರ್ವರಿಗೂ ನ್ಯಾಯ ದೊರೆಯುವಂತಹ ಸಮಾಜದ ನಿರ್ಮಾಣಕ್ಕಾಗಿ ಅವರು ಶ್ರಮಿಸಿದ್ದರು. ಇದೇ ಮೌಲ್ಯಗಳು ನಮ್ಮ ಸರ್ಕಾರದ ಅಭಿವೃದ್ಧಿಯ ಪಯಣದಲ್ಲಿ ದಾರಿದೀಪವಾಗಿದೆ ಎಂದರು.

    ಸಮಾಜದ ಬಡವರು ಹಾಗೂ ದುರ್ಬಲ ವರ್ಗಗಳನ್ನು ಗೌರವಿಸುವುದು ಮತ್ತು ಸಬಲೀಕರಣ ಮಾಡುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss