Thursday, March 28, 2024
spot_img
More

    Latest Posts

    ಕುಂದಾಪುರ : ಪೊದೆಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ: ಮಹಿಳೆಯರಿಂದ ಮಗು ರಕ್ಷಣೆ!

    ಕುಂದಾಪುರ : ಸಿದ್ದಾಪುರ -ಅಮಾಸೆಬೈಲು ಮುಖ್ಯರಸ್ತೆಯ ಮಚ್ಚಟ್ಟು ಗ್ರಾಮದಲ್ಲಿ ನಿನ್ನೆ ನವಜಾತ ಶಿಶುವನ್ನು ಎಸೆದು ಹೋಗಿದ್ದು ಮಹಿಳೆಯರು ಮಗುವನ್ನು ರಕ್ಷಿಸಿದ್ದಾರೆ. ಇಲ್ಲಿನ ವಾರಾಹಿ ಸೇತುವೆ ಬಳಿ ನವಜಾತ ಶಿಶುವಿನ ಅಳು ಕೇಳಿ ಬರುತ್ತಿತ್ತು. ಈ ವೇಳೆ ಸ್ಥಳೀಯ ಸವಾರರು ಹಾಗೂ ಮಹಿಳೆಯರು ನೋಡಿದಾಗ ಪೊದೆಯಲ್ಲಿ ಸುಮಾರು 5-6 ದಿನಗಳ ಹೆಣ್ಣು ಮಗು ಪತ್ತೆಯಾಗಿದೆ.

    ಬಳಿಕ ಸ್ಥಳೀಯರು ಅಮಾಸೆಬೈಲು ಠಾಣೆಗೆ ಮಾಹಿತಿ ನೀಡಿದರು.ಅಲ್ಲಿ‌ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು ಮಗು ಈಗ ಆರೋಗ್ಯವಾಗಿದೆ. ಅಮಾಸೆಬೈಲು ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss