Friday, April 19, 2024
spot_img
More

    Latest Posts

    ಹೆತ್ತವರಿಂದ ಮಗು ದತ್ತು ಪಡೆದು ಪೋಷಿಸುವುದು ಅಪರಾಧವಲ್ಲ – ಹೈಕೋರ್ಟ್ ಆದೇಶ

    ಬೆಂಗಳೂರು: ನೇರವಾಗಿ ಹೆತ್ತವರಿಂದ ಮಗುವನ್ನು ದತ್ತು ಪಡೆದುಕೊಂಡು ಪೋಷಣೆ ಮಾಡುವುದು ಅಪರಾಧವಲ್ಲ ಎಂದು ಹೈಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ.

    ದಂಪತಿಯೋರ್ವರು ನಿಯಮ ಪಾಲಿಸದೆ ಮಗುವನ್ನು ದತ್ತು ಪಡೆದಿದ್ದಾರೆ ಎಂದು ತಮ್ಮ ಮೇಲೆ ದಾಖಲಾಗಿದ್ದ ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್‌ ಈ ಆದೇಶ ನೀಡಿದೆ. ನ್ಯಾ. ಹೇಮಂತ್‌ ಚಂದನಗೌಡರ್‌ ಅವರಿದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.2018ರ ಸೆ.18ರಂದು ಮೆಹಬೂಬ್‌ ಸಾಬ್‌ ನಬಿಸಾಬ್‌ ಅವರ ಪತ್ನಿ ಬಾನು ಬೇಗಂ ಅವರು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಈ ವೇಳೆ ಮಕ್ಕಳಾಗದ ಹಿನ್ನೆಲೆಯಲ್ಲಿ ಜರೀನಾ ಬೇಗಂ ಮತ್ತು ಅಬ್ದುಲ್‌ ಸಾಬ್‌ ಹುಡೇದಮನಿ ಅವರು ಒಂದು ಮಗುವನ್ನು ಮೆಹಬೂಬ್-ಬಾನು ಬೇಗಂ ದಂಪತಿಯಿಂದ ದತ್ತು ಪಡೆದು ಸಾಕುತ್ತಿದ್ದು. ಇದಕ್ಕಾಗಿ 20 ರೂ. ಸ್ಟಾಂಪ್‌ ಪೇಪರ್‌ ಮೇಲೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ದಂಪತಿ ನಿಯಮ ಪಾಲಿಸದೆ ನೇರವಾಗಿ ಹೆತ್ತವರಿಂದ ಮಗುವನ್ನು ದತ್ತುಪಡೆದುಕೊಂಡು ಸಾಕುತ್ತಿದ್ದಾರೆ ಎಂದು ಅವರ ವಿರುದ್ದ ಪ್ರಕರಣ ದಾಖಲಾಗಿತ್ತು. ಆದರೆ ಪ್ರಸ್ತುತ ಈ ಪ್ರಕರಣವನ್ನು ರದ್ದುಗೊಳಿಸಿರುವ ಹೈಕೋರ್ಟ್ ಈ ಮಹತ್ವದ ಆದೇಶ ನೀಡಿದೆ.ಬಾಲ ನ್ಯಾಯ (ಆರೈಕೆ ಮತ್ತು ಮಕ್ಕಳ ರಕ್ಷಣಾ) ಕಾಯಿದೆ- 2015ರ ಸೆಕ್ಷನ್‌ 80ರ ಅನ್ವಯ ಮಗು ಅನಾಥ, ನಿರಾಶ್ರಿತವಾಗಿದ್ದರೆ ಅಥವಾ ಬಾಲಮಂದಿರಗಳಲ್ಲಿ ಬೆಳೆಯುತ್ತಿರುವ ಮಗುವಾದರೆ ಅಂತಹ ಮಗುವನ್ನು ದತ್ತು ಪಡೆಯುವ ವೇಳೆ ನಿಯಮಗಳು ಅನ್ವಯಿಸುತ್ತವೆ. ಬಾಲ ಕಾಯಿದೆ ನಿಯಮಗಳನ್ನು ಪಾಲಿಸದೆ ಇಂತಹ ಮಕ್ಕಳನ್ನು ದತ್ತು ತೆಗೆದುಕೊಳ್ಳುವಂತಿಲ್ಲ. ಆದರೆ ಈ ಮಗುವನ್ನು ನೇರವಾಗಿ ಪೋಷಕರಿಂದಲೇ ದತ್ತು ಪಡೆದುಕೊಂಡಿರುವುದರಿಂದ ಅಂತಹ ಯಾವುದೇ ನಿಯಮ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss