ಸುರತ್ಕಲ್: ಚೊಕ್ಕಬೆಟ್ಟು ಎಂಬಲ್ಲಿ ಮನೆಯ ಮುಂದೆ ನಿಂತಿದ್ದ ಮಗುವನ್ನು ಅಪಹರಿಸಲು ಯತ್ನ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸುರತ್ಕಲ್‌ನಾದ್ಯಂತ ಸೋಮವಾರ ರಾತ್ರಿ ವಿದ್ಯುತ್ ಕಡಿತಗೊಂಡಿತ್ತು.ಈ ವೇಳೆ ಚೊಕ್ಕಬೆಟ್ಟು ಮಸೀದಿಯ ಪಕ್ಕದ ಮನೆಯ ಮುಂದೆ ಮಗು ಆಟವಾಡುತ್ತಿತ್ತು. ಅಲ್ಲಿಗೆ ಬಂದ ವ್ಯಕ್ತಿಯೋರ್ವ ಮಗುವಿನ ಕೈ ಹಿಡಿದು ಎಳೆದು ಅಪಹರಣಕ್ಕೆ ಯತ್ನಿಸಿದ್ದಾನೆ.ಈ ವೇಳೆ ಮಗು ಆತನ ಕೈಯಿಂದ ತಪ್ಪಿಸಿಕೊಂಡು ಮನೆಗೆ ಓಡಿ ಹೋಗಿದೆ.
ಈ ವೇಳೆ ಅಪಹರಣಕ್ಕೆ ಯತ್ನಿಸಿದವ ಪರಾರಿಯಾಗಿದ್ದಾನೆ. ಇನ್ನು ದುಷ್ಕರ್ಮಿಯ ಕೃತ್ಯ ಮಸೀದಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.