Wednesday, April 17, 2024
spot_img
More

    Latest Posts

    ಸಪೋಟ ಹಣ್ಣು ತಿಂದರೆ ಸಿಗುತ್ತೆ ಈ ಆರೋಗ್ಯ ಲಾಭ

    ಸಪೋಟ ಹಣ್ಣು ಹೆಸರು ಕೇಳುತ್ತಲೇ ಬಾಯಲ್ಲಿ ನೀರು ಬರುತ್ತದೆ. ಇದರಲ್ಲಿ ಕಾರ್ಬೋ ಹೈಡ್ರೇಟ್, ಫೈಬರ್, ಕಬ್ಬಿಣದಂಶ, ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ ಹೇರಳವಾಗಿದೆ. ಇದು ಜೀರ್ಣ ಕ್ರಿಯೆಯನ್ನು ಸರಾಗವಾಗಿಸುತ್ತದೆ. ಮೂಳೆ ಹಾಗೂ ಹಲ್ಲುಗಳನ್ನು ಸದೃಢವಾಗಿಸುತ್ತದೆ.

    ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಈ ಹಣ್ಣು ಹೊಂದಿದೆ. ಚಿಕ್ಕು ಸೇವಿಸುವುದರಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ .

    ತುಂಬಾ ಸ್ನಾಯುಗಳ ನೋವು, ಗಂಟು ನೋವು ಅನುಭವಿಸುವವರಿಗೆ ಈ ಹಣ್ಣು ಉತ್ತಮವಾದದ್ದು. ಜೀರ್ಣ ಕ್ರಿಯೆಗೆ ಸಹಾಯಕಾರಿಯಾಗಿದೆ.

    ಇನ್ನು ಇದರಲ್ಲಿ ಕ್ಯಾನ್ಸರ್ ಅನ್ನು ತಡೆಗಟ್ಟುವ ಗುಣ ಕೂಡ ಇದೆ. ಇದರಲ್ಲಿ ಆಯಂಟಿ ಆಕ್ಸಿಡೆಂಟ್ ಹೇರಳವಾಗಿದೆ. ಹಾಗಾಗಿ ಇದು ದೇಹವನ್ನು ಕ್ಯಾನ್ಸರ್ ನಿಂದ ಕಾಪಾಡುತ್ತದೆ. ಹಾಗೇ ಇದರಲ್ಲಿನ ಫೈಬರ್ ಕೂಡ ದೇಹದ ಆರೋಗ್ಯಕ್ಕೆ ತೀರಾ ಅವಶ್ಯಕ. ಈ ಹಣ್ಣನ್ನು ಸೇವಿಸುವುದರಿಂದ ಶ್ವಾಸಕೋಶ, ಬಾಯಿಯ ಕ್ಯಾನ್ಸರ್ ಬಾರದಂತೆ ರಕ್ಷಿಸಿಕೊಳ್ಳಬಹುದು,

    ಇದರಲ್ಲಿ ಕ್ಯಾಲ್ಸಿಯಂ, ಕಬ್ಬಿಣದಂಶ ಹೆಚ್ಚಿರುತ್ತದೆ. ಹಾಗಾಗಿ ಮೂಳೆಗಳ ಸದೃಢತೆಗೆ ಈ ಹಣ್ಣು ಹೆಚ್ಚು ಸಹಾಯಕಾರಿ. ಇನ್ನು ಗರ್ಭಿಣಿಯರಿಗೆ ಈ ಹಣ್ಣು ತುಂಬಾ ಒಳ್ಳೆಯದು. ದೇಹದಲ್ಲಿ ಶಕ್ತಿ ಸಂಚಾರವಾಗುವಂತೆ ಮಾಡುತ್ತದೆ.

    ಹವಾಮಾನದ ವೈಪರೀತ್ಯದ ಶೀತ, ಕೆಮ್ಮು ಉಂಟಾದರೆ ಸಪೋಟವನ್ನು ಸೇವಿಸುವುದರಿಂದ ಕಡಿಮೆಯಾಗುತ್ತದೆ. ಇದು ಉಸಿರಾಟ ಕ್ರಿಯೆ ಸರಾಗವಾಗಿ ಆಗುವಂತೆ ಮಾಡುತ್ತದೆ.

    ಸಪೋಟ ಹಣ್ಣಿನಲ್ಲಿ ಪೋಟ್ಯಾಷಿಯಂ ಹೇರಳವಾಗಿದೆ. ಹಾಗಾಗಿ ಅಧಿಕ ರಕ್ತದೊತ್ತಡ ಇರುವವರಿಗೆ ಇದು ತುಂಬಾ ಒಳ್ಳೆಯದು. ಸೋಡಿಯಂ ಲೆವಲ್ ಅನ್ನು ಕಡಿಮೆ ಮಾಡುತ್ತದೆ.

    ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ದೇಹದಲ್ಲಿನ ಟಾಕ್ಸಿನ್ ಅನ್ನು ಹೊರಹಾಕುತ್ತದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss