ಮಂಗಳೂರು: ಇನ್ನುಂದೆ ನೀವೂಗಳು ಯಾರಿಗಾದ್ರೂ ಚೆಕ್ ಕೊಡ್ತೀರಾ ಜಾಗೃತೆ ವಹಿಸಿ, ನಿಮ್ಮ ಚೆಕ್ ಇಶ್ಯೂ ಮಾಡಿದ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದಿದ್ದರೆ ನಿಮ್ಮ ಇತರ ಬ್ಯಾಂಕ್ ಖಾತೆಗಳಿದ್ದರೆ ಅವುಗಳಿಂದ ಹಣವನ್ನು ವಿತ್ ಡ್ರಾ ಮಾಡಿ ಚೆಕ್ ಸ್ವೀಕಾರ ಮಾಡಿದ ಗ್ರಾಹಕರಿಗೆ ನೀಡಲಾವುದು. ಈ ಈ ವಿಚಾರಗಳ ಕುರಿತು ಶೀಘ್ರದಲ್ಲೇ ಕೇಂದ್ರ ಸರ್ಕಾರ ಕಾನೂನು ಜಾರಿ ಮಾಡಲಿದೆ.
ದೇಶದಲ್ಲಿ ಹೆಚ್ಚುತ್ತಿರುವ ಚೆಕ್ ಬೌನ್ಸ್ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಹೊಸ ನಿಯಮಗಳನ್ನು ಜಾರಿ ತರಲು ಕೇಂದ್ರ ಹಣಕಾಸು ಸಚಿವಾಲಯ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ದೇಶದಲ್ಲಿ ಚೆಕ್ ಬೌನ್ಸ್ ಪ್ರಕರಣಗಳ ಸಂಖ್ಯೆ ದಿನದಿಂದಿ ದಿನಕ್ಕೆ ಹೆಚ್ಚುತ್ತಲಿವೆ. ಇದರಿಂದ ನ್ಯಾಯಾಂಗದ ಮೇಲೆ ಹೆಚ್ಚಿನ ಹೊರೆಯಾಗುತ್ತಿದ್ದು, ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಂತಹ ಪ್ರಕರಣಗಳ ಸಂಖ್ಯೆ ಇಳಿಸುವ ನಿಟ್ಟಿನಲ್ಲಿ ಇತ್ತೀಚೆಗಷ್ಟೇ ವಿತ್ತ ಸಚಿವಾಲಯ ಕರೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ ಹಲವು ಕ್ರಮಗಳ ಕುರಿತು ಸಲಹೆಗಳು ಕೇಳಿಬಂದಿವೆ. ಯಾವುದೇ ಒಬ್ಬ ವ್ಯಕ್ತಿ ನೀಡಿದ ಚೆಕ್ ಬೌನ್ಸ್ ಆದರೆ ಅಥವಾ ಆತನ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದೇ ಇದ್ದರೆ ಆಗ ಅದೇ ವ್ಯಕ್ತಿಯ ಮತ್ತೊಂದು ಬ್ಯಾಂಕ್ ಖಾತೆಯಿಂದ ಹಣ ಡೆಬಿಟ್ ಮಾಡುವುದು, ಚೆಕ್ ಬೌನ್ಸ್ ಅನ್ನು ಸುಸ್ತಿ ಸಾಲವೆಂದು ಪರಿಗಣಿಸಿ ಆತನ ಕ್ರೆಡಿಟ್ ಸ್ಕೋರ್‍ಅನ್ನು ಕೆಳಮಟ್ಟಕ್ಕಿಳಿಸುವಂತೆ ಕ್ರೆಡಿಟ್ ಇನಾರ್ಮೇಷನ್ ಕಂಪನಿಗಳಿಗೆ ವರದಿ ನೀಡುವುದು, ಚೆಕ್ ನೀಡಿದ ವ್ಯಕ್ತಿ ಹೊಸ ಖಾತೆ ತೆರೆಯುವುದಕ್ಕೆ ನಿರ್ಬಂಧ ಹೇರುವುದು ಮುಂತಾದ ಅನೇಕ ಕ್ರಮಗಳು ಈಗ ಸಚಿವಾಲಯದ ಮುಂದಿವೆ. ಈ ಎಲ್ಲ ಸಲಹೆಗಳ ಕುರಿತು ಸೂಕ್ತ ಕಾನೂನು ಸಲಹೆಗಳನ್ನು ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಸಲಹೆಗಳನ್ನು ಒಪ್ಪಿಕೊಳ್ಳುವ ಮೊದಲು ಕಾನೂನಿನಡಿ ಇವು ಎಷ್ಟು ಸರಿ ಎಂಬುದನ್ನು ಪರಿಶೀಲಿಸಲಾಗುವುದು ಅಂತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸುಧಾರಣಾ ಕ್ರಮಗಳಿಂದ ದೇಶದಲ್ಲಿ ವಾಣಿಜ್ಯ ವಹಿವಾಟು ನಡೆಸುವುದು ಇನ್ನಷ್ಟು ಸುಲಭ ಆಗಲಿದೆ. ಖಾತೆಯಲ್ಲಿ ಕಡಿಮೆ ಹಣ ಇದ್ದಾಗಲೂ, ಉದ್ದೇಶಪೂರ್ವಕವಾಗಿ ಹೆಚ್ಚಿನ ಮೊತ್ತಕ್ಕೆ ಚೆಕ್ ನೀಡುವ ಪರಿಪಾಠಕ್ಕೆ ಕಡಿವಾಣ ಬೀಳುತ್ತದೆ ಅನ್ನೋ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.
