Sunday, October 2, 2022

ಕೇರಳದ ರೈಲು ಅಪಘಾತದಲ್ಲಿ ವಿಟ್ಲದ ಯುವಕ‌ ಮೃತ್ಯು

ವಿಟ್ಲ: ಬಂಟ್ವಾಳದ ವಿಟ್ಲ ಸಮೀಪದ ಕಡಂಬುವಿನ ಯುವಕ ಕೇರಳದಲ್ಲಿ ನಡೆದ ರೈಲು ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಇಲ್ಲಿನ ಕಡಂಬು ಸಮೀಪದ ಪಿಲಿವಲಚ್ಚಿಲ್ ನಿವಾಸಿ ಅಶ್ರಫ್ (19) ಮೃತಪಟ್ಟ...
More

  Latest Posts

  ಕಾಪು: ಕಡಲ ತೀರದಲ್ಲಿ ಭಾರೀ ಗಾತ್ರದ “ತೊರಕೆ”ಮೀನುಗಳ ಸುಗ್ಗಿ !

  ಕಾಪು ಸಮೀಪದ ಮೂಳೂರು ಕಡಲ ತೀರದಲ್ಲಿ ಮೀನುಗಾರರ ಬಲೆಗೆ ನೂರಾರು ತೊರಕೆ ಮೀನುಗಳು ಬಿದ್ದಿದ್ದು ಮತ್ಸ್ಯ ಪ್ರಿಯರ ಸಂಭ್ರಮಕ್ಕೆ ಕಾರಣವಾಗಿದೆ. ಮೀನುಗಾರರ ಬಲೆಗೆ ದೊಡ್ಡ ದೊಡ್ಡ...

  ಕುಂಬಳೆ: ಅ.10 ರಂದು ಅನಂತಪುರದಲ್ಲಿ “ಪುವೆಂಪು ನೆಂಪು” ತುಳು ಲಿಪಿ ದಿನಾಚರಣೆ

  ಕುಂಬಳೆ: ತುಳು ಲಿಪಿ ಸಂಶೋಧಕ, ವಿದ್ವಾಂಸ, ಕೇರಳ ತುಳು ಅಕಾಡೆಮಿಯ ಮೊದಲ ಅಧ್ಯಕ್ಷರು, ತುಳುರತ್ನ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ (ಪುವೆಂಪು) ಇವರ ಹುಟ್ಟು ಹಬ್ಬದ ಪ್ರಯುಕ್ತ "ಪುವೆಂಪು - ನೆಂಪು"...

  ಗಾಂಜಾ ಸೇವನೆ: 35 ಮಣಿಪಾಲ ವಿದ್ಯಾರ್ಥಿಗಳು ವಶಕ್ಕೆ

  ಮಣಿಪಾಲ: ಗಾಂಜಾ ಸೇವನೆಗೆ ಸಂಬಂಧಿಸಿ ಮಣಿಪಾಲದ 35 ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಮಣಿಪಾಲ ಪೊಲೀಸರು ಮಣಿಪಾಲ ಎಂಐಟಿ ವಿದ್ಯಾರ್ಥಿಗಳಾದ ಯಶ್...

  ಮಂಗಳೂರು: ಕೋಡಿಕಲ್‌ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗೆ ತುಳು ಲಿಪಿ ನಾಮ ಫಲಕ ಅನಾವರಣ

  ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಕಿರಣ್‌ ಕುಮಾರ್‌ ಕೋಡಿಕಲ್‌ ಇವರ ನೇತೃತ್ವದಲ್ಲಿ ಕೋಡಿಕಲ್‌ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗೆ ತುಳು ಲಿಪಿ ನಾಮ ಫಲಕ ಅನಾವರಣ ಕಾರ್ಯಕ್ರಮ ಇಂದು ನಡೆಯಿತು.

  ಕೆಜಿಎಫ್-2, ಅವತಾರ ಪುರುಷ ಬಳಿಕ ಸ್ಯಾಂಡಲ್ ವುಡ್ ನಲ್ಲಿ ದೂಳೆಬ್ಬಿಸಲು ಸಜ್ಜಾಗಿದೆ “ಚೇಸ್”

  ಚೇಸ್.. ಹೆಸರೇ ಥ್ರಿಲ್ಲಿಂಗ್ ಆಗಿರುವಾಗ ಸಿನೆಮಾ ಇನ್ನೆಷ್ಟು ಥ್ರಿಲ್ಲಿಂಗ್ ಆಗಿರಬೇಡ. ಹೆಸರೇ ಹೇಳುವಂತೆ ಇದು ಸೀಟ್ ಎಡ್ಜ್ ಥ್ರಿಲ್ಲಿಂಗ್ ಸಿನೆಮಾ ಅನ್ನೋದರಲ್ಲಿ ಯಾವುದೇ ಅನುಮಾನ ಬೇಡ ಎನ್ನುತ್ತಿದೆ ಚಿತ್ರ ತಂಡ. ಚಿತ್ರದ ಹಾಡುಗಳ ಜ್ಯೂಕ್ ಬಾಕ್ಸ್ ಈಗಾಗಲೇ ಬಿಡುಗಡೆಯಾಗಿದ್ದು ಎಲ್ಲ ಹಾಡುಗಳು ಕೇಳಲು ಹಿತವಾಗಿವೆ. ಅದರಲ್ಲೂ ವಿಜಯ್ ಪ್ರಕಾಶ್ ಹಾಡಿರುವ ‘ಮನದ ಹೊಸಿಲ’ ಹಾಗು ಬೆನ್ನಿ ದಯಾಳ್ ಕಂಠಸಿರಿಯಲ್ಲಿ ಮೂಡಿಬಂದ ‘ಷಾ ಲಾ ಲ ಲಾ’ ಹಾಡುಗಳು ಕೇಳುಗರಿಗೆ ಹೆಚ್ಚು ಇಷ್ಟವಾಗಿದ್ದು ಹಿಟ್ ಅನಿಸಿಕೊಂಡಿವೆ. ಚಿತ್ರದ ಎಲ್ಲಾ ಹಾಡುಗಳನ್ನು ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಉಮೇಶ್ ಪಿಲಿಕುಡೇಲು ಬರೆದಿದ್ದಾರೆ.

  ಈ ತಿಂಗಳ ಅಂತ್ಯದಲ್ಲಿ ಅಥವಾ ಜೂನ್ ಮೊದಲ ವಾರ ಚಿತ್ರ ಬಿಡುಗಡೆ ಪ್ಲಾನ್ ಮಾಡಿಕೊಂಡಿರುವ ಚೇಸ್ ಚಿತ್ರ ತಂಡ ಚಿತ್ರದ ಪ್ರೊಮೋಷನ್ ಕಾರ್ಯಕ್ಕೆ ಚಾಲನೆ ನೀಡಿದೆ. ಕೊರೋನಾ ಸಾಂಕ್ರಾಮಿಕ ಕಾರಣ ಬಿಡುಗಡೆ ಸ್ವಲ್ಪ ತಡವಾಗಿದ್ದರೂ, ತಡವಾದರೂ ಪರವಾಗಿಲ್ಲ ಒಳ್ಳೆಯ ಎಂಟ್ರಿ ಕೊಡುತ್ತೇವೆ ಅನ್ನುವ ಆತ್ಮ ವಿಶ್ವಾಸ ಚೇಸ್ ತಂಡದ್ದು.

  ಈ ಚಿತ್ರದಲ್ಲಿ ನಾಯಕ ನಾಯಕಿ ಅನ್ನುವುದಕ್ಕಿಂತ ಚಿತ್ರದ ಕಂಟೆಂಟ್ ಇಲ್ಲಿ ಹೈಲೈಟ್ ಅನ್ನುತ್ತಾರೆ ಚೇಸ್ ಚಿತ್ರದ ಸಹಾಯಕ ನಿರ್ದೇಶಕರಲ್ಲಿ ಒಬ್ಬರಾದ ಅಶ್ವಿನ್ ಅವರು. ಇಲ್ಲಿ ಕಥೆಯೇ ಚಿತ್ರದ ಜೀವಾಳ. ನಿರ್ದೇಶಕ ವಿಲೋಕ್ ಶೆಟ್ಟಿ ಅವರು ಒಂದು ಸ್ಟ್ರಾಂಗ್ ಕಂಟೆಂಟ್ ಇಟ್ಟುಕೊಂಡು ಚಿತ್ರ ಕತೆ ಹೆಣೆದಿದ್ದು ಪ್ರತಿ ದೃಶ್ಯದಲ್ಲೂ ಮುಂದೇನಾಗುತ್ತೆ ಎಂಬ ಕುತೂಹಲ ಉಳಿಸಿಕೊಂಡು ಹೋಗುವ ಒಂದು ಒಳ್ಳೆಯ ಮಿಸ್ಟರಿ ಥ್ರಿಲ್ಲರ್ ಚಿತ್ರ ಇದಾಗಿದೆ. ಬಹು ತಾರಾಗಣ ಹೊಂದಿರುವ ಈ ಚಿತ್ರದಲ್ಲಿ ಘಟಾನುಘಟಿ ನಟ ನಟಿಯರ ದಂಡೇ ಇದ್ದು ಎಲ್ಲರ ಪಾತ್ರಗಳೂ ಪ್ರಾಮುಖ್ಯತೆಯನ್ನು ಪಡೆದಿರುವುದು ಚಿತ್ರದ ಪ್ಲಸ್ ಪಾಯಿಂಟ್. ರಾಧಿಕಾ ನಾರಾಯಣ್, ಶೀತಲ್ ಶೆಟ್ಟಿ, ಹಾಸ್ಯ ನಟ ನರಸಿಂಹ ರಾಜು ಅವರ ಕುಟುಂಬದ ಕುಡಿ ಅವಿನಾಶ್ ನರಸಿಂಹ ರಾಜು, ಅರವಿಂದ್ ರಾವ್, ರಾಜೇಶ್ ನಟರಂಗ, ಪ್ರಮೋದ್ ಶೆಟ್ಟಿ, ಕರಾವಳಿಯ ಹಾಸ್ಯ ದಿಗ್ಗಜ ಅರವಿಂದ್ ಬೋಳಾರ್, ಶ್ವೇತಾ ಸಂಜೀವುಲು, ಅರ್ಜುನ್ ಯೋಗಿ, ಬಾಲಿವುಡ್ ಖ್ಯಾತಿಯ ಸುಶಾಂತ್ ಪೂಜಾರಿ, ವೀಣಾ ಸುಂದರ್, ಸುಧಾ ಬೆಳವಾಡಿ, ಸುಂದರ್ ವೀಣಾ ಮುಂತಾದ ಮೇರು ಕಲಾವಿದರ ದಂಡೇ ಚಿತ್ರದಲ್ಲಿದೆ.

  ನಟಿ ರಾಧಿಕಾ ನಾರಾಯಣ್ ಇಲ್ಲಿವರೆಗೆ ತಾವು ಮಾಡದ ಪಾತ್ರವನ್ನು ನಿರ್ವಹಿಸಿದ್ದು ಅದ್ಭುತವಾಗಿ ಅಭಿನಯಿಸಿದ್ದಾರೆ. ‘ರಂಗಿ ತರಂಗ’ ಚಿತ್ರದ ನಂತರ ರಾಧಿಕ ನಾರಾಯಣ್ ಅವರಿಗೆ ದೊರೆತಿರುವ ಚಾಲೆಂಜಿಂಗ್ ಪಾತ್ರ ಇದಾಗಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ವಿಲೋಕ್ ಶೆಟ್ಟಿ. ಈಗಾಗಲೇ ಚಿತ್ರ ನೋಡಿದ ಸೆನ್ಸಾರ್ ಮಂಡಳಿ ಭಾರೀ ಮೆಚ್ಚುಗೆ ಸೂಚಿಸಿದ್ದು ಚಿತ್ರತಂಡದ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚಿಸಿದೆ. ಒಟ್ಟಿನಲ್ಲಿ ಕೆಜಿಎಫ್ ಅಬ್ಬರದ ಬಳಿಕ, ಅವತಾರ ಪುರುಷನ ಗೆಲುವಿನ ಕೇಕೆಯ ನಂತರ ಮುಂದೇನು ಅನ್ನುವವರಿಗೆ “ಚೇಸ್” ಎನ್ನುತಿದೆ ಗಾಂಧಿನಗರ.

  Latest Posts

  ಕಾಪು: ಕಡಲ ತೀರದಲ್ಲಿ ಭಾರೀ ಗಾತ್ರದ “ತೊರಕೆ”ಮೀನುಗಳ ಸುಗ್ಗಿ !

  ಕಾಪು ಸಮೀಪದ ಮೂಳೂರು ಕಡಲ ತೀರದಲ್ಲಿ ಮೀನುಗಾರರ ಬಲೆಗೆ ನೂರಾರು ತೊರಕೆ ಮೀನುಗಳು ಬಿದ್ದಿದ್ದು ಮತ್ಸ್ಯ ಪ್ರಿಯರ ಸಂಭ್ರಮಕ್ಕೆ ಕಾರಣವಾಗಿದೆ. ಮೀನುಗಾರರ ಬಲೆಗೆ ದೊಡ್ಡ ದೊಡ್ಡ...

  ಕುಂಬಳೆ: ಅ.10 ರಂದು ಅನಂತಪುರದಲ್ಲಿ “ಪುವೆಂಪು ನೆಂಪು” ತುಳು ಲಿಪಿ ದಿನಾಚರಣೆ

  ಕುಂಬಳೆ: ತುಳು ಲಿಪಿ ಸಂಶೋಧಕ, ವಿದ್ವಾಂಸ, ಕೇರಳ ತುಳು ಅಕಾಡೆಮಿಯ ಮೊದಲ ಅಧ್ಯಕ್ಷರು, ತುಳುರತ್ನ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ (ಪುವೆಂಪು) ಇವರ ಹುಟ್ಟು ಹಬ್ಬದ ಪ್ರಯುಕ್ತ "ಪುವೆಂಪು - ನೆಂಪು"...

  ಗಾಂಜಾ ಸೇವನೆ: 35 ಮಣಿಪಾಲ ವಿದ್ಯಾರ್ಥಿಗಳು ವಶಕ್ಕೆ

  ಮಣಿಪಾಲ: ಗಾಂಜಾ ಸೇವನೆಗೆ ಸಂಬಂಧಿಸಿ ಮಣಿಪಾಲದ 35 ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಮಣಿಪಾಲ ಪೊಲೀಸರು ಮಣಿಪಾಲ ಎಂಐಟಿ ವಿದ್ಯಾರ್ಥಿಗಳಾದ ಯಶ್...

  ಮಂಗಳೂರು: ಕೋಡಿಕಲ್‌ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗೆ ತುಳು ಲಿಪಿ ನಾಮ ಫಲಕ ಅನಾವರಣ

  ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಕಿರಣ್‌ ಕುಮಾರ್‌ ಕೋಡಿಕಲ್‌ ಇವರ ನೇತೃತ್ವದಲ್ಲಿ ಕೋಡಿಕಲ್‌ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗೆ ತುಳು ಲಿಪಿ ನಾಮ ಫಲಕ ಅನಾವರಣ ಕಾರ್ಯಕ್ರಮ ಇಂದು ನಡೆಯಿತು.

  Don't Miss

  ದೇಶದಲ್ಲಿ 5 ವರ್ಷ `PFI’ ನಿಷೇಧ : ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ

  ನವದೆಹಲಿ : ದೇಶಾದ್ಯಂತ ಎನ್ ಐಎ ದಾಳಿ ಬೆನ್ನಲ್ಲೇ ದೇಶದಲ್ಲಿ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (PFI) ನಿಷೇಧ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

  ರಾಜ್ಯದಲ್ಲಿ ಬೈಕ್ ಆ‍್ಯಂಬುಲೆನ್ಸ್ ಸೇವೆ ಸ್ಥಗಿತಗೊಳಿಸಿ ಆರೋಗ್ಯ ಇಲಾಖೆ ಆದೇಶ

  ಬೆಂಗಳೂರು : ಕರ್ನಾಟಕದಲ್ಲಿ ಬೈಕ್ ಆ‍್ಯಂಬುಲೆನ್ಸ್ ಸೇವೆ ಸ್ಥಗಿತಗೊಳಿಸಿ ರಾಜ್ಯ ಆರೋಗ್ಯ ಇಲಾಖೆ ಆದೇಶಿಸಿದೆ. ರಾಜ್ಯದಲ್ಲಿ 108 ಆಯಂಬುಲೆನ್ಸ್ ಸೇವೆ ಹೆಚ್ಚಿರುವುದರಿಂದ ರಾಜ್ಯದಲ್ಲಿ ಬೈಕ್ ಆ‍್ಯಂಬುಲೆನ್ಸ್...

  ಮಳಲಿ ಮಸೀದಿ ವಿವಾದ: ಅ.17ಕ್ಕೆ ತೀರ್ಪು ಕಾಯ್ದಿರಿಸಿದ ಮಂಗಳೂರು ಸಿವಿಲ್‌ ಕೋರ್ಟ್‌

  ಮಂಗಳೂರು: ನಗರದ ಹೊರವಲಯದ ಗಂಜಿಮಠ ಬಳಿಯ ಮಳಲಿ ಮಸೀದಿ ವಿವಾದ ಹಿನ್ನೆಲೆ ಸ್ಥಳದಲ್ಲಿ ಸರ್ವೇ ಮಾಡಿಸುವಂತೆ ಕೋರಿ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ 3ನೇ ಹೆಚ್ಚುವರಿ...

  ಉಪ್ಪಿನಂಗಡಿ: ಕಾಲೇಜು ವಿದ್ಯಾರ್ಥಿಗಳ ನಡುವೆ ಗಲಾಟೆ -ಮೂವರು ಪೊಲೀಸ್ ವಶಕ್ಕೆ

  ಪುತ್ತೂರು: ಉಪ್ಪಿನಂಗಡಿಯ ಸರಕಾರಿ ಪಿಯು ಕಾಲೇಜಿನಲ್ಲಿ ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವಿನ ಮಾರಾಮಾರಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಸೆಪ್ಟಂಬರ್ 26ರ ಸೋಮವಾರ ಸಂಜೆ ಉಪ್ಪಿನಂಗಡಿಯ ಬಸ್...

  ಬೆಳ್ತಂಗಡಿ: ಅಪಘಾತ ತಪ್ಪಿಸಲು ಹೋಗಿ ಮನೆಗೆ ಡಿಕ್ಕಿ ಹೊಡೆದ ಲಾರಿ

  ಬೆಳ್ತಂಗಡಿ: ನಿಡಿಗಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ತಪ್ಪಿಸಲು ಹೋಗಿ ಲಾರಿಯೊಂದು ರಸ್ತೆ ಬದಿಯ ಮನೆಗೆ ಡಿಕ್ಕಿಹೊಡೆದ ಘಟನೆ ಮಂಗಳವಾರ ಸಂಭವಿಸಿದೆ. ಅತಿಯಾದ ವೇಗದಲ್ಲಿ ಬಂದ...