Friday, March 29, 2024
spot_img
More

    Latest Posts

    ಬೆಳ್ಳಿತೆರೆಯ ಮೇಲೆ ‘ಚೇಸ್’‌ ನ ಥ್ರಿಲ್ಲಿಂಗ್ ಹವಾ!

    ಉತ್ತಮ ಟೀಸರ್ ಮೂಲಕ ಕುತೂಹಲ ಕೆರಳಿಸಿದ್ಸ  ‘ಚೇಸ್’ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸ ಅಂತಿಮ ಹಂತದಲ್ಲಿದ್ದು ಸೆನ್ಸಾರ್ ಗಾಗಿ ತಯಾರಿ ನಡೆಸುತ್ತಿದೆ. ವಿಲೋಕ್ ಶೆಟ್ಟಿ ನಿರ್ದೇಶನದ ಚೇಸ್ ನಲ್ಲಿ ನುರಿತ ಹಾಗೂ ಪ್ರತಿಭಾವಂತ ತಂತ್ರಜ್ಞರ ದಂಡೇ ಇದೆ. ಎಂ. ಗೀತಾ ಗುರಪ್ಪ ಸಿನಿಮಾದ ಡಾಲ್ಬಿ ಅಟ್ಮೋಸ್ ಹಾಗೂ ಶಬ್ಧ ವಿನ್ಯಾಸದ ಜವಾಬ್ದಾರಿ ವಹಿಸುತ್ತಿದ್ದು ಈ ತಾಂತ್ರಿಕತೆಯಲ್ಲಿ ಪರಿಣತಿ ಸಾಧಿಸಿರುವ ದೇಶದ ಮೊದಲ ಮಹಿಳಾ ತಂತ್ರಜ್ಞೆ ಎನ್ನುವುದು ಇನ್ನೊಂದು ವಿಶೇಷ. ಈಗಾಗಲೇ ಹಲವು ತಮಿಳು, ತೆಲುಗು ಹಾಗೂ ಕೆಲ ಕನ್ನಡದ ದೊಡ್ಡ ಬಡ್ಜೆಟ್ ನ ಚಿತ್ರಗಳಲ್ಲಿ ಕೆಲಸ ಮಾಡಿರುವ ಇವರು ಕನ್ನಡತಿ ಅನ್ನುವುದೂ ಹೆಮ್ಮೆಯ ವಿಷಯ. ಡಿಐ ಕೆಲಸವನ್ನು ಈ ಬಾರಿಯ ಕೇರಳ ರಾಜ್ಯ ಪ್ರಶಸ್ತಿ ವಿಜೇತ ಲಿಜು ಪ್ರಭಾಕರನ್ ನಿರ್ವಹಿಸಿದರೆ, ಶ್ರೀ ಕ್ರೇಜಿ ಮೈಂಡ್ಸ್ ​ ಚೇಸ್ ಚಿತ್ರದ ಸಂಕಲನಕಾರರು. ಮಂಗಳೂರು, ಬೆಂಗಳೂರು, ಕೊಚ್ಚಿ, ಹಿಮಾಚಲ ಪ್ರದೇಶದ ಕಲರ್ ಫುಲ್ ಲೋಕೇಷನ್​ಗಳಲ್ಲಿ ಚಿತ್ರೀಕರಣ ನಡೆದಿದ್ದು, ಅನಂತ ಅರಸ್ ಛಾಯಾಗ್ರಹಣದಲ್ಲಿ ‘ಚೇಸ್’ ಸಿನಿಮಾ ಸೆರೆಯಾಗಿದ್ದು ಅವಿನಾಶ್ ಕಲಾ ನಿರ್ದೇಶನದ ಕಾರ್ಯ ನಿರ್ವಹಿಸಿದ್ದಾರೆ.. ಕಾರ್ತಿಕ್ ಆಚಾರ್ಯ ಸಂಗೀತ ಹಾಗೂ ಹಿನ್ನೆಲೆ ಸಂಗೀತದ ಚೇಸ್ ನಲ್ಲಿ,  ಡಾ.ಉಮೇಶ್ ಪಿಲಿಕುಡೇಲು ಮತ್ತು ವಿಲೋಕ್ ಶೆಟ್ಟಿ ಅವರ ಸಾಹಿತ್ಯವಿದೆ.. ಸಂತೋಷ್ ಕುಮಾರ್ ಸಹ ಸಂಭಾಷಣಾಕಾರರಾಗಿ ಜೊತೆಗೂಡಿದ್ದಾರೆ.

    ಸಸ್ಪೆನ್ಸ್, ಥ್ರಿಲ್ಲರ್, ಕ್ರೈಂ ಜೊತೆಗೆ ಕಮರ್ಶಿಯಲ್ ಎಲಿಮೆಂಟ್​​​ಗಳಾದ ಆಕ್ಷನ್, ರೋಮ್ಯಾನ್ಸ್, ಕಾಮಿಡಿ ಎಲ್ಲವನ್ನೂ ಚೇಸ್ ಸಿನಿಮಾ ಒಳಗೊಂಡಿದ್ದು, ಎಲ್ಲಾ ವರ್ಗದ ಪ್ರೇಕ್ಷಕರಿಗೂ ಮನರಂಜನೆ ನೀಡಲಿದೆ ಅನ್ನೋದು ನಿರ್ದೇಶಕ ವಿಲೋಕ್ ಶೆಟ್ಟಿ ಅವರ ಮಾತು. ಸೆನ್ಸಾರ್ ಅಂಗಳಕ್ಕೆ ಹೊರಡಲಿರೋ ‘ಚೇಸ್’ ಸಿನಿಮಾದ ಹಾಡುಗಳು ಸದ್ಯದಲ್ಲೇ ಕನ್ನಡ ಸಿನಿರಸಿಕರನ್ನು ರಂಜಿಸಲು ಬಿಡುಗಡೆಯಾಗಲಿದ್ದು ವಿಜಯ ಪ್ರಕಾಶ್, ಸಂಜಿತ್ ಹೆಗ್ಡೆ, ಬೆನ್ನಿ ದಯಾಳ್, ಅನುರಾಧ ಭಟ್, ಮಕ್ಬೂಲ್‌ ಮನ್ಸೂರ್ ಮೊಹಮ್ಮದ್, ಹರೀಶ್ ವೆಂಕಟ್ ಹಿನ್ನೆಲೆ ಗಾಯಕರಾಗಿ ಜೊತೆಗೂಡಿದ್ದಾರೆ. ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ‘ಚೇಸ್’  ಚಿತ್ರಕ್ಕೆ ಬಂಡವಾಳ ಹಾಕಿದ್ದು, ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿರುವ ಚೇಸ್ ಸಿನಿಮಾದಲ್ಲಿ ‘ರಂಗಿತರಂಗ’, ‘ಮುಂದಿನ ನಿಲ್ದಾಣ’ ಖ್ಯಾತಿಯ ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ,ಸುಶಾಂತ್ ಪೂಜಾರಿ, ರೆಹಮಾನ್ ಹಾಸನ್, ರಾಜೇಶ್ ನಟರಂಗ, ಪ್ರಮೋದ್ ಶೆಟ್ಟಿ, ಅರವಿಂದ್ ರಾವ್, ಶ್ವೇತಾ ಸಂಜೀವುಲು, ಸತೀಶ ಮಾಧ್ಯಮಿಕ, ಪ್ರಿಯಾ ಷಟಮರ್ಷಣ್, ನಾಗಾರ್ಜುನ ಬಿ ರಾಜಶೇಖರ್, ವೀಣಾ ಸುಂದರ್, ಸುಧಾ ಬೆಳವಡಿಉಷಾ ಭಂಡಾರಿ, ಸುಂದರ್, ಡಾ.ಕಿಂಗ್ ಮೋಹನ್  ತಾರಾಬಳಗದಲ್ಲಿದ್ದಾರೆ. ತುಳುಚಿತ್ರರಂಗದ ಪ್ರಖ್ಯಾತ ಹಾಸ್ಯ ಕಲಾವಿದ ಅರವಿಂದ್ ಕೂಡ ಚೇಸ್ ನ ಮುಖ್ಯ ಪಾತ್ರವೊಂದರಲ್ಲಿ ಜನರಿಗೆ ಮನರಂಜನೆ ನೀಡಲು ಬರುತ್ತಿದ್ದಾರೆ.

    ಮ್ಯಾಕ್ಸ್ ಎನ್ನುವ ನಾಯಿ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಭಾರತದ ಏಕೈಕ ಶ್ವಾನ ಮನಶಾಸ್ತ್ರಜ್ಞ ಅಮೃತ್ ಶ್ರೀಧರ್ ಹಿರಣ್ಯ ತರಬೇತು ನೀಡಿರುವುದು ಚಿತ್ರದ ಇನ್ನೊಂದು ವಿಶೇಷ!
    ಈ ಬಾರಿಯ ಬೇಸಗೆಯಲ್ಲಿ ಚೇಸ್ ಚಿತ್ರದ ಥ್ರಿಲ್ಲಿಂಗ್ ಹವಾ ಎಲ್ಲಾ ಚಿತ್ರಮಂದಿರದಲ್ಲಿ ಬೀಸಲು ಅಣಿಯಾಗುತ್ತಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss