ಶ್ರೀ ಭದ್ರಕಾಳಿ ಮಹಾ ಮಾರಿಕಾಂಬ ದೇವಸ್ಥಾನದ ತೋನ್ಸೆ, ಗುಡ್ಯಾಂ, ಕೆಮ್ಮಣ್ಣು ಇದರ 27 ನೇ ವಾರ್ಷಿಕೋತ್ಸವದ ಚಂಡಿಕಾಯಾಗ ಮತ್ತು ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.


ಆ ಪ್ರಯುಕ್ತ ಮೇ.1 ರಂದು ಆಯೋಜಿಸಲಾದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರಾದ ಕೆ. ರಘುಪತಿ ಭಟ್,ಡಾ. ಡೇವಿಡ್ ಫ್ರಾಂಕ್ ಫೆರ್ನಾಂಡೀಸ್, Ph.D.Hum.chancellor General MEA, Peace Ambassador &chief Of Mission UAE ICDRHRP IGO, ಯೋಗಿಶ್ ಶೆಟ್ಟಿ ಜಪ್ಪು, ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರು, ನಿತ್ಯಾನಂದ ಕೋಟ್ಯಾನ್ ಮಾಜಿ ಅಧ್ಯಕ್ಷರು ಬಿಲ್ಲವರ ಅಸೋಸಿಯೇಶನ್, ಮುಂಬೈ, ಪ್ರಸಾದ್ ರಾಜ್ ಕಾಂಚನ್ ಮ್ಯಾನೇಜಿಂಗ್ ಡೈರೆಕ್ಟರ್,ಕಾಂಚನಾ ಹುಂಡೈ ಉಡುಪಿ ಭಾಗವಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೋನ್ಸೆ ಪಡುಮನೆ ಜಯಕೃಷ್ಣ ಎ.ಶೆಟ್ಟಿ ಅಧ್ಯಕ್ಷರು,ಶ್ರೀ ಭದ್ರಕಾಳಿ ಮಹಾಮಾರಿಕಾಂಬ ದೇವಸ್ಥಾನ ಮತ್ತು ಸಂಸ್ಥಾಪಕರು,ಜಯಕೃಷ್ಣ ಪರಿಸರ ಪ್ರೇಮಿ ಸಮಿತಿ,ಮುಂಬೈ ಮತ್ತು ಅವಿಭಜಿತ ದ.ಕ ಜಿಲ್ಲೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕೃಷ್ಣ ದೇವಾಡಿಗ, ಅಧ್ಯಕ್ಷರು ಕಲ್ಯಾಣಪುರ ಗ್ರಾಮ ಪಂಚಾಯತ್,ಶ್ರೀಮತಿ ಲತಾ,ಅಧ್ಯಕ್ಷರು ತೋನ್ಸೆ ಗ್ರಾಮ ಪಂಚಾಯತ್,ಕೆಮ್ಮಣ್ಣು, ಪ್ರಭಾಕರ ತಿಂಗಳಾಯ, ಅಧ್ಯಕ್ಷರು,ಬಡಾನಿಡಿಯೂರು ಗ್ರಾಮ ಪಂಚಾಯತ್,ಶ್ರೀಮತಿ ವಿಜಯ ಪೈ,ಸೇವಾ ಪ್ರತಿನಿಧಿ ಶ್ರೀ ಕ್ಷೇತ್ರ ಧ.ಗ್ರಾ ಯೋಜನೆ,ಕೆಮ್ಮಣ್ಣು ಒಕ್ಕೂಟ,ಶ್ರೀಮತಿ ಪುಷ್ಪ ಕೋಟ್ಯಾನ್,ಪ್ರೇರಕರು,ನವೋದಯ ಗ್ರಾ.ವಿ.ಚಾ.ಟ್ರಸ್ಟ್ ಮಂಗಳೂರು,ಕೆಮ್ಮಣ್ಣು ವಲಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

