Friday, April 19, 2024
spot_img
More

    Latest Posts

    ಬಂಟ್ವಾಳ: ನಾಟಿ ವೈದ್ಯೆ ಚಂದ್ರಾವತಿ ನಿಧನ

    ಬಂಟ್ವಾಳ: ಬಂಟ್ವಾಳ ತಾಲೂಕು ಬಡಗಕಜೆಕಾರು ಗ್ರಾಮದ ಮಾಡಪಲ್ಕೆ ದಿ. ಡೊಂಬಯ್ಯ ಪೂಜಾರಿಯವರ ಪತ್ನಿ ಚಂದ್ರಾವತಿ ಅವರು ಅಸೌಖ್ಯದಿಂದ ಬಳಲುತ್ತಿದ್ದು ಇಂದು ಬೆಳಗ್ಗೆ ನಿಧನರಾದರು.

    ಹಿರಿಯರಾದ (105 ,ವರ್ಷ) ಚಂದ್ರಾವತಿ ಅವರು ನಾಟಿ ವೈದ್ಯರಾಗಿ ಸಮಾಜದಲ್ಲಿ ಗುರುತಿಸಿ ಹೆರಿಗೆ ವೈದ್ಯೆ ಎಂದೇ ಹೆಸರುವಾಸಿಯಾಗಿದ್ದರು. ಸುಮಾರು 50 ವರ್ಷಗಳ ಹಿಂದೆಯೇ ಆಸ್ಪತ್ರೆಗಳ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿಯೂ ದಿವಂಗತ ಚಂದ್ರಾವತಿಯವರು ಊರಿನಲ್ಲಿ ಹಲವಾರು ಹೆರಿಗೆಗಳನ್ನು ಮಾಡಿಸಿ, ಮನೆಯಲ್ಲಿ ಆರೈಕೆ ಮಾಡಿದಂತಹ ವೈದ್ಯೆಯಾಗಿ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ.

    ಕೆಲವು ವರ್ಷಗಳ ಹಿಂದೆ ನೂರು ವರ್ಷದ ಪೂರೈಕೆಯ ಸಂಭ್ರಮದ ಆಚರಣೆಯ ಸಂದರ್ಭದಲ್ಲಿ ಹಲವಾರು ಸಂಘ-ಸಂಸ್ಥೆಗಳಿಂದ ಗೌರವದ ಅಭಿನಂದನೆಗಳನ್ನು ಪಡೆದಿದ್ದರು.ಮೃತರು ಒಂದು ಗಂಡು , 4 ಹೆಣ್ಣುಮಕ್ಕಳು , 13 ಮೊಮ್ಮಕ್ಕಳು, 21 ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss