Friday, April 19, 2024
spot_img
More

    Latest Posts

    ಮಂಗಳೂರು: ಮನೆ ನಿರ್ಮಾಣಕ್ಕೆ ತಂದಿಟ್ಟಿದ್ದ ಸೆಂಟ್ರಿಂಗ್ ತಗಡು ಶೀಟ್‌ ಕಳವು

    ಕಿನ್ನಿಗೋಳಿ: ನಿರ್ಮಾಣ ಹಂತದ ಮನೆಯ ಕಾಮಗಾರಿಗೆ ತಂದಿಟ್ಟಿದ್ದ ಸೆಂಟ್ರಿಂಗ್ ತಗಡು ಶೀಟ್‌ಗಳನ್ನು ಕಳವಾದ ಘಟನೆ ಕಿನ್ನಿಗೋಳಿ ಸಮೀಪದ ಅಂಗರಗುಡ್ಡೆ ಮಸೀದಿ ಬಳಿ ನಡೆದಿದೆ.

    ಅತಿಕಾರಿಬೆಟ್ಟು ಗ್ರಾ. ಪಂ ವ್ಯಾಪ್ತಿಯ ಅಂಗರಗುಡ್ಡೆ ಮಸೀದಿ ಬಳಿ ಸ್ಥಳೀಯರಾದ ಶಂಶುದ್ದೀನ್ ಎಂಬವರು ಮನೆ ಕಟ್ಟುತ್ತಿದ್ದು ಕಾಮಗಾರಿಗೆ ಸುಮಾರು 48 ಸೆಂಟ್ರಿಂಗ್ ತಗಡು ಶೀಟ್ ತಂದಿರಿಸಿದ್ದರು.ಇನ್ನು ಕಳ್ಳರು ಬುಧವಾರ ರಾತ್ರಿ ಸುಮಾರು 26 ಶೀಟ್ ಗಳನ್ನು ಕಳವು ಮಾಡಿದ್ದು ಅದರ ಮೌಲ್ಯ 57,200 ಎಂದು ಅಂದಾಜಿಸಲಾಗಿದೆ.ಮಸೀದಿ ಸಿಸಿ ಕ್ಯಾಮರಾದಲ್ಲಿ ಆರೋಪಿಗಳು ಆಟೋದಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ದೃಶ್ಯ ದಾಖಲಾಗಿದ್ದು, ಮುಲ್ಕಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss