ಬೆಂಗಳೂರು: ಸಾಹಿತಿಗಳಾದಂತ ಕುಂ.ವೀರಭದ್ರಪ್ಪ, ಬಿ.ಎಲ್ ವೇಣು, ಬಂಜಗೆರೆ ಜಯಪ್ರಕಾಶ್, ಬಿ.ಟಿ ಲಲಿತಾ ನಾಯಕ್ ಹಾಗೂ ವಸುಂಧರಾ ಭೂಪತಿ ಅವರಿಗೆ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ತನಿಖೆ ನಡೆಸಲು ಬೆಂಗಳೂರು ಸಿಸಿಬಿಯಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ.
ಈ ಬಗ್ಗೆ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರರಾದಂತ ಡಾ.ಅಲೋಕ್ ಮೋಹನ್ ಅವರು ಆದೇಶ ಹೊರಡಿಸಿದ್ದಾರೆ.
ಅದರಲ್ಲಿ ಕರ್ನಾಟಕ ರಾಜ್ಯದಲ್ಲಿ ಇತ್ತೀಚೆಗೆ ಕನ್ನಡ ಸಾಹಿತಿಗಳ ದೂಲಿನ ಆಧಾರದ ಮೇಲೆ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುತ್ತವೆ. ಈ ಎಲ್ಲಾ ಪ್ರಕರಣಗಳಲ್ಲಿ ಕನ್ನಡ ಸಾಹಿತಿಗಳಿಗೆ ಅನಾಮಧೇಯ ಪತ್ರಗಳ ಮೂಲಕ ಜೀವ ಬೆದರಿಕ ಹಾಕಲಾಗಿರುತ್ತದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಎಲ್ಲಾ ಪ್ರಕರಣಗಳಲ್ಲಿ ಪ್ರತಿಯೊಂದು ಆಯಾಮಗಳಿಂದ ಆಳವಾದ ತನಿಖೆ ಮಾಡುವ ಉದ್ದೇಶದಿಂದ ಈ ಕೆಳಗೆ ನಮೂದಿಸಿರುವ ಪ್ರಕರಣಗಳನ್ನು ಬೆಂಗಳೂರು ನಗರ ಅಪರಾಧ ವಿಭಾಗಕ್ಕೆ ಮುಂದಿನ ತನಿಖೆಗಾಗಿ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರು ಮೇಲಿನ ಎಲ್ಲಾ ಪ್ರಕರಣಗಳ ತನಿಖೆಗಾಗಿ ಒಂದು ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖಾಧಿಕಾಲಿಯನ್ನಾಗಿ ಒಬ್ಬ ಎಸಿಪಿ ದರ್ಜೆಯ ಅಧಿಕಾಲಿಯನ್ನು ನೇಮಿಸಲು ಸೂಚಿಸಿದೆ. ಜಂಟಿ ಪೊಲೀಸ್ ಆಯುಕ್ತರು ಈ ಎಲ್ಲಾ ಪ್ರಕರಣಗಳ ತನಿಖೆಯ ಮೇಲ್ವಿಚಾರಣೆಯನ್ನು ದಿನಂಪ್ರತಿ ಮಾಡಲು (ಅಪರಾಧ) ಹಾಗೂ ಉಪ ಪೊಲೀಸ್ ಆಯುಕ್ತರು (ಅಪರಾಧ) ಬೆಂಗಳೂರು ನಗರ ರವರಿಗೆ ಸೂಚಿಸಿದೆ. ತನಿಖೆಯ ಪ್ರಗತಿಯನ್ನು ಪೊಲೀಸ್ ಆಯುಕ್ತರು ಕಾಲಕಾಲಕ್ಕೆ ಪರಿಶೀಲಿಸುವಂತೆ ಸೂಚಿಸಿದ್ದಾರೆ.
ಸಂಬಂಧಪಟ್ಟ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹಾಗೂ ಉಪ ಪೊಲೀಸ್ ಆಯುಕ್ತರು ಈ ಪ್ರಕರಣಗಳ ಕಡತವನ್ನು ಬೆಂಗಳೂರು ಪೊಲೀಸ್ ಆಯುಕ್ತರು ನೇಮಿಸುವ ತನಿಖಾಧಿಕಾರಿಗೆ ಕೂಡಲೇ ಹಸ್ತಾಂತಲಿಸಲು ಮತ್ತು ತನಿಖೆಗೆ ಬೇಕಾಗುವ ಎಲ್ಲಾ ರೀತಿಯ ಸಹಕಾರವನ್ನು ನೀಡಲು ಸೂಚಿಸಲಾಗಿದೆೆ.