ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್ಇ) ಶುಕ್ರವಾರ 12 ನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿದ್ದು ಈ ಬಾರಿ ಶೇ.87.33ರಷ್ಟು ಫಲಿತಾಂಶ ದಾಖಲಾಗಿದೆ.ಈ ಬಾರಿ 12ನೇ ತರಗತಿ ಪರೀಕ್ಷೆಯಲ್ಲೂ ಬಾಲಕಿಯಾರದ್ದೇ ಮೇಲುಗೈ. ಕೇರಳದ ತಿರುವನಂತಪುರಂನಲ್ಲಿ ಹೆಚ್ಚು ವಿದ್ಯಾರ್ಥಿಗಳು ಅಂದರೆ ಶೇ.99.9ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್ರಾಜ್ಗೆ ಕೊನೆಯ ಸ್ಥಾನದಲ್ಲಿದೆ. CBSE 12 ನೇ ಫಲಿತಾಂಶ ಇದೀಗ results.cbse.nic.in ಮತ್ತು cbse.gov.in ನಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಿದೆ.ಫೆಬ್ರವರಿ 15 ರಿಂದ ಏಪ್ರಿಲ್ 5ರವರೆಗೆ ನಡೆದ ಪರೀಕ್ಷೆಗೆ ಸುಮಾರು 16.9 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.
©2021 Tulunada Surya | Developed by CuriousLabs