Thursday, April 18, 2024
spot_img
More

    Latest Posts

    ಭಾರತ – ಉಕ್ರೇನ್‌ ನಡುವೆ ಸಂಚರಿಸುವ ವಿಮಾನಗಳಿಗೆ ನಿರ್ಬಂಧ ರದ್ದು

    ಹೊಸದಿಲ್ಲಿ: ಭಾರತ – ಉಕ್ರೇನ್‌ ನಡುವೆ ಸಂಚರಿಸುವ ವಿಮಾನಗಳಿಗೆ ವಿಧಿಸಲಾಗಿದ್ದ ಮಿತಿಯನ್ನು ಭಾರತ ರದ್ದುಗೊಳಿಸಿದೆ. ಇದರ ಜತೆಗೆ ವಿಮಾನಗಳಲ್ಲಿ ಪ್ರಯಾಣಿಕರಿಗೆ ವಿಧಿಸಲಾಗಿದ್ದ ಆಸನಗಳ ಮಿತಿಯನ್ನೂ ತೆಗೆದುಹಾಕಲಾಗಿದೆ.

    “ಉಕ್ರೇನ್‌ನಲ್ಲಿರುವ ಎಲ್ಲ ಭಾರತೀಯರನ್ನು ತತ್‌ಕ್ಷಣವೇ ತೆರವುಗೊಳಿಸುವ ಆಲೋಚನೆ ಸದ್ಯಕ್ಕಿಲ್ಲ.

    ಆದರೂ, ಅವರ ಸುರಕ್ಷೆಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಭಾರತ ಹೇಳಿದೆ.

    ಉಕ್ರೇನ್‌-ರಷ್ಯಾ ನಡುವೆ ಯುದ್ಧ ನಡೆಯುವ ಭೀತಿ ಆವರಿಸಿರುವುದರಿಂದ ಉಕ್ರೇನ್‌ನಲ್ಲಿರುವ ಭಾರತೀಯರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಭಾರತಕ್ಕೆ ಆದಷ್ಟು ಬೇಗನೇ ಆಗಮಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇತ್ತೀಚೆಗೆ, ಕೊರೊನಾ ನಿಬಂಧನೆಗಳನ್ವಯ, ಎರಡು ದೇಶಗಳ ನಡುವೆ ಸಂಚರಿಸುವ ವಿಮಾನಗಳ ಸಂಖ್ಯೆಯನ್ನು ಇಳಿಕೆ ಮಾಡಲಾಗಿತ್ತು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss