Friday, March 29, 2024
spot_img
More

    Latest Posts

    ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್ ಸಂಚಾರದ ವೇಳಾಪಟ್ಟಿ

    ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅ.31 ರಿಂದ‌ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಹಾಗೂ ಮಣಿಪಾಲದಿಂದ ಕೆಎಸ್ ಆರ್ಟಿಸಿ ( ಎಸಿ ವೋಲ್ವೊ ) ಬಸ್‌ಗಳ ಸಂಚಾರ ಆರಂಭಗೊಳ್ಳಲಿದೆ.

    ಸೆಂಟ್ರಲ್ ರೈಲು ನಿಲ್ದಾಣದಿಂದ ಆಗಮಿಸುವ ಬಸ್ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ(ಜ್ಯೋತಿ), ಲಾಲ್‌ಬಾಗ್ , ಕುಂಟಿಕಾನ , ಕಾವೂರು, ಮರವೂರು ಮೂಲಕ ಬಜ್ಪೆಯ ಕೆಂಜಾರಿನಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ. ವಿಮಾನ ನಿಲ್ದಾಣಕ್ಕೆ 100 ರೂ. ಹಾಗೂ ಮಣಿಪಾಲದಿಂದ ವಿಮಾನ ನಿಲ್ದಾಣಕ್ಕೆ 300 ರೂ. ದರ ನಿಗದಿಪಡಿಸಲಾಗಿದೆ.

    ಸೆಂಟ್ರಲ್ ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 6.30, ಬೆಳಗ್ಗೆ 8.45, ಪೂರ್ವಾಹ್ನ 11:10, ಅಪರಾಹ್ನ 3, ಸಂಜೆ 5:15 , ರಾತ್ರಿ 7:30 ಆಗಮಿಸುತ್ತದೆ. ಅದೇ ರಯ ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಬೆಳಗ್ಗೆ 7:40 , ಬೆಳಗ್ಗೆ 10 , ಮಧ್ಯಾಹ್ನ 12:20 , ಸಂಜೆ 4:05 , ಸಂಜೆ 6:25 , ರಾತ್ರಿ 8 : 45 ಕ್ಕೆ ಪ್ರಯಾಣಿಸಲಿದೆ. ಮಣಿಪಾಲದಿಂದ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 7:15 , ಬೆಳಗ್ಗೆ 8:45 ಮತ್ತು ಸಂಜೆ 5:15 ಹಾಗೂ ವಿಮಾನ ನಿಲ್ದಾಣದಿಂದ ಮಣಿಪಾಲಕ್ಕೆ : ಬೆಳಗ್ಗೆ 10:45 , ಮಧ್ಯಾಹ್ನ 12:30 ಮತ್ತು ರಾತ್ರಿ 9 : 15 ಕ್ಕೆ ಬಸ್ ಸಂಚರಿಸಲಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss