ಉಡುಪಿ: ಬೆಂಗಳೂರಿನಿಂದ ಮಣಿಪಾಲ ಮಾರ್ಗವಾಗಿ ಉಡುಪಿ ಕಡೆ ತೆರಳುತ್ತಿದ್ದ ಖಾಸಗಿ ಬಸ್ ಕಾಂಕ್ರೀಟ್ ಮಿಕ್ಸರ್ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಹಲವಾರು ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಕುಂಜಿಬೆಟ್ಟು ಸಮೀಪ ಶನಿವಾರ (ಮೇ.13)ಬೆಳಗ್ಗೆ ಸಂಭವಿಸಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕರ ನಿಯಂತ್ರಣ ತಪ್ಪಿ ಬ್ರೇಕ್ ವ್ಯೆಫಲ್ಯ ಆದ ಕಾರಣ ಈ ಘಟನೆ ನಡೆದಿದೆ ಎನ್ಬಲಾಗಿದೆ. ಟ್ರಾಫಿಕ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.