Saturday, August 20, 2022

28ವರ್ಷದ ಹಿಂದೆ ನಾಲ್ವರನ್ನು ಕೊಲೆಗೈದ ಪ್ರವೀಣ್‌ಗೆ ಸಿಕ್ಕಿಲ್ಲ ಬಿಡುಗಡೆ ಭಾಗ್ಯ

ಮಂಗಳೂರು : ವಾಮಂಜೂರಿನಲ್ಲಿ 28 ವರ್ಷಗಳ ಹಿಂದೆ ಚಿನ್ನಕ್ಕಾಗಿ ಒಂದೇ ಕುಟುಂಬದ ನಾಲ್ವರು ಸದಸ್ಯರನ್ನು ಕೊಲೆ ಮಾಡಿ ಜೈಲಿನಲ್ಲಿರುವ ಪ್ರವೀಣ್‌ ಕುಮಾರ್‌ ಬಿಡುಗಡೆಯಾಗಿಲ್ಲ ಎಂದು ಹತ್ಯೆಯಾ ದವರ ಕುಟುಂಬಸ್ಥರು ತಿಳಿಸಿದ್ದಾರೆ.
More

  Latest Posts

  ಸುರತ್ಕಲ್: ಇಬ್ಬರ ಮೇಲೆ ಕತ್ತಿ ಬೀಸಿ ಹಲ್ಲೆ, ಬಸ್ಸಿಗೆ ಕಲ್ಲು ತೂರಾಟ

  ಸುರತ್ಕಲ್:ವ್ಯಕ್ತಿಯೊಬ್ಬ ಕತ್ತಿಯಿಂದ ಇಬ್ಬರಿಗೆ ಗಾಯಗೊಳಿಸಿದ್ದಲ್ಲದೆ, ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಘಟನೆ ಕಾನಾ ಸಮೀಪ ನಡೆದಿದೆ. ಗಾಯಾಳು ಸೇರಿ ಕತ್ತಿ ಬೀಸಿದ ವ್ಯಕ್ತಿಗೂ ಗಾಯವಾಗಿದ್ದು, ಇಬ್ಬರನ್ನೂ...

  ಕಾರ್ಕಳ : ಆತ್ಮಹತ್ಯೆಗೆ ಶರಣಾದ ನಿಟ್ಟೆ ಕಾಲೇಜು ವಿದ್ಯಾರ್ಥಿ

  ಕಾರ್ಕಳ : ತಾಲೂಕಿನ ಕಾಲೇಜು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ಕಾಬೆಟ್ಟು ಎಂಬಲ್ಲಿ ಅ. 18 ರಂದು ಸಂಭವಿಸಿದೆ. ಕಾಬೆಟ್ಟು ನಿವಾಸಿ 21 ವರ್ಷದ...

  ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ

  ಮುಂಡಿತ್ತಡ್ಕ :- ಶ್ರೀ ಮಹಾವಿಷ್ಣು ಭಜನಾ ಸಂಘ(ರಿ), ಶ್ರೀ ವಿಷ್ಣು ಕಲಾವೃಂದ(ರಿ) ಹಾಗೂ ಶ್ರೀ ವಿಷ್ಣು ಮಹಿಳಾ ಸಂಘ(ರಿ) ವಿಷ್ಣು ನಗರ ಮುಂಡಿತ್ತಡ್ಕ ಇವುಗಳ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ಣ...

  ಮುಂಬೈನಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ, ಹಲವು ಸಿಕ್ಕಿಹಾಕಿಕೊಂಡಿರುವ ಶಂಕೆ

  ಮುಂಬೈ: ಬೊರಿವಲಿ ಪಶ್ಚಿಮದ ಮುಂಬೈನ ಸಾಯಿಬಾಬಾ ನಗರ ನೆರೆಹೊರೆಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡವೊಂದು ( Four-storey building collapses) ಕುಸಿದಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ...

  Udupi: ಕಾರು ಸುಟ್ಟ ಶವ ಪತ್ತೆ ಕೇಸ್ ಬೆನ್ನತ್ತಿದ ಪೊಲೀಸರಿಗೇ ಶಾಕ್ ; ಆತ್ಮಹತ್ಯೆ ಬಿಂಬಿಸಲು ಅಮಾಯಕನ ಬಲಿಕೊಟ್ಟ ಸರ್ವೇಯರ್

  ಮಂಗಳೂರು : ಸಿನಿಮೀಯ ಮಾದರಿಯಲ್ಲಿ ಕಾರಿನೊಂದಿಗೆ ಸುಟ್ಟು ಕರಕಲಾದ ವ್ಯಕ್ತಿಯ ಕೊಲೆಯ ರಹಸ್ಯವನ್ನು ಪೊಲೀಸರು ಬಯಲು ಮಾಡಿದ್ದು, ಮಹಿಳೆ ಸಹಿತ ನಾಲ್ವರನ್ನು ಬಂಧಿಸಿದ್ದಾರೆ.

  ಯಾವುದೋ ತಂತ್ರ ಹೆಣೆದು ಅಮಾಯಕನೊಬ್ಬನನ್ನು ಸಾಯಿಸಿ, ತಾನೇ ಸತ್ತಿದ್ದೇನೆಂದು ಬಿಂಬಿಸಲು ಹೋಗಿ ಇದೀಗ ಕತರ್ನಾಕ್ ಜೋಡಿ ಪೊಲೀಸ್ ಬಲೆಗೆ ಬಿದ್ದಿದೆ. ಬೈಂದೂರು ಸಮೀಪದ ಒತ್ತಿನೆಣೆ ಹೇನ್ ಬೇರು ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಕಾರಿನೊಂದಿಗೆ ಸಂಪೂರ್ಣವಾಗಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಬೈಂದೂರು ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಹಂತಕರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಪ್ರಮುಖ ಆರೊಪಿಗಳನ್ನು ಕಾರ್ಕಳ ತಾಲೂಕಿನ ಮಾಳ ಗ್ರಾಮದ ಪೇರಡ್ಕ ನಿವಾಸಿ ಸದಾನಂದ ಶೇರಿಗಾರ್ (ದೇವಾಡಿಗ)(52), ಕಾರ್ಕಳ ತಾಲೂಕಿನ ಮೂರೂರು ಸಮೀಪದ ಹಿರ್ಗಾನ ನಿವಾಸಿ ಶಿಲ್ಪಾ ಪೂಜಾರಿ(30) ಎಂದು ಗುರುತಿಸಲಾಗಿದ್ದು, ಕೊಲೆಗೆ ಸಹಕರಿಸಿದವರನ್ನು ಸದಾನಂದ ಶೇರಿಗಾರನ ಪತ್ನಿಯ ಸಹೋದರರಾದ ಕಾರ್ಕಳ ತಾಲೂಕಿನ ಶಿರ್ವದ ಸೂಡ ಗ್ರಾಮದ ನಿವಾಸಿಗಳಾದ ನಿತಿನ್ ದೇವಾಡಿಗ (40) ಹಾಗೂ ಸತೀಶ್ ದೇವಾಡಿಗ(50) ಎಂದು ಗುರುತಿಸಲಾಗಿದೆ. ಕಾರಿನೊಂದಿಗೆ ಸುಟ್ಟು ಹೋದ ವ್ಯಕ್ತಿಯನ್ನು ಕಾರ್ಕಳ ತಾಲೂಕಿನ ಅತ್ತೂರು ಚರ್ಚ್ ಸಮೀಪದ ಭಾರತ್ ಬೀಡಿ ಕಾಲೊನಿಯ ನಿವಾಸಿ ಗಾರೆ ಮೇಸ್ತ್ರಿಯಾಗಿದ್ದ ಆನಂದ ದೇವಾಡಿಗ (60). ಮಂಗಳವಾರ ಮನೆಯಲ್ಲಿ ಯಾರೂ ಇಲ್ಲದ ಕಾರಣ ಶಿಲ್ಪಾ ಪೂಜಾರಿ, ಗಾರೆ ಮೇಸ್ತ್ರಿ ಆನಂದ ದೇವಾಡಿಗನನ್ನು ಮನೆಗೆ ಕರೆಯಿಸಿಕೊಂಡಿದ್ದು, ಮದ್ಯ ಕುಡಿಸಿದ್ದಾಳೆ. ಈ ಸಂದರ್ಭ ಆನಂದ ದೇವಾಡಿಗ ತನಗೆ ಕಾಮ ಪ್ರಚೋದನೆ ಆಗುವುದಿಲ್ಲ ಎಂದಿದ್ದ. ಆನಂದನಿಗೆ ವಯಾಗ್ರ ಮಾತ್ರೆ ಎಂದು ನಂಬಿಸಿ ನಿದ್ದೆ ಮಾತ್ರೆಗಳನ್ನು ಸೇವಿಸುವಂತೆ ಪ್ರಚೋದಿಸಿ ಮಾತ್ರೆ ತಿನ್ನಿಸಿದ್ದಾಳೆ. ಅಲ್ಲದೇ ಮದ್ಯದ ಬಾಟಲಿಗೂ ಮಾತ್ರೆ ಪುಡಿಮಾಡಿ ಹಾಕಿ ಕುಡಿಸಿದ್ದಾಳೆ. ಆನಂದ ದೇವಾಡಿಗ ಬಳಿಕ ಅಸ್ವಸ್ಥನಾಗಿ ಪ್ರಜ್ಞೆ ಕಳೆದುಕೊಂಡ ತಕ್ಷಣ ಸದಾನಂದನಿಗೆ ಮಾಹಿತಿ ನೀಡಿದ ಶಿಲ್ಪಾ ಕಾರು ತರುವಂತೆ ತಿಳಿಸಿದ್ದಾಳೆ. ಸದಾನಂದ ತನ್ನ ಹಳೆಯ ಕಾರಿನಲ್ಲಿ ಆನಂದ ದೇವಾಡಿಗನನ್ನು ಹಿಂಬದಿಯಲ್ಲಿ ಕುಳ್ಳಿರಿಸಿ ಮುಂದಿನ ಸೀಟಿನಲ್ಲಿ ಸದಾನಂದ ಹಾಗು ಶಿಲ್ಪಾ ಬೈಂದೂರು ಕಡೆಗೆ ಬಂದಿದ್ದಾರೆ. ಬೈಲೂರು ಸಮೀಪದ ಪೆಟ್ರೋಲ್ ಬಂಕಿನಲ್ಲಿ 2 ಲೀಟರ್ ಬಾಟಲಿ ಹಾಗೂ 10 ಲೀಟರ್ ಕ್ಯಾನಿನಲ್ಲಿ ಪೆಟ್ರೋಲ್ ಖರೀದಿಸಿದ್ದಾರೆ. ಬಳಿಕ ಆರೋಪಿಗಳಾದ ಸದಾನಂದ ಮತ್ತು ಶಿಲ್ಪಾ ಒತ್ತಿನೆಣೆಗೆ ಬಂದಿದ್ದು ತಾವು ತಂದಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬಳಿಕ ಮೊದಲೇ ಸೂಚನೆ ನೀಡಿದಂತೆ ಆರೋಪಿ ಸದಾನಂದನ ಪತ್ನಿಯ ಸಹೋದರರಾದ ನಿತಿನ್ ಹಾಗೂ ಸಚಿನ್ ಎಂಬ ಆರೋಪಿಗಳು ಇನ್ನೊಂದು ಕಾರಿನಲ್ಲಿ ಬಂದು ಕರೆದೊಯ್ದಿದ್ದಾರೆ. ಬಳಿಕ ಶಿಲ್ಪಾ ಮನೆಯಲ್ಲಿ ಉಳಿದುಕೊಂಡ ಸದಾನಂದ ಹಾಗೂ ಶಿಲ್ಪಾ ಬುಧವಾರ ಸಂಜೆ ಬೆಂಗಳೂರಿಗೆ ಹೊರಟಿದ್ದಾರೆ. ಬಸ್ ಹಾಸನದಲ್ಲಿ ಹಾಳಾಗಿದ್ದರಿಂದ ಮತ್ತೆ ಮೂಡಬಿದ್ರೆಗೆ ಬಂದ ಆರೋಪಿಗಳು ಕಾರ್ಕಳದ ಕಡೆಗೆ‌ ಪ್ರಯಾಣಿಸುತ್ತಿದ್ದ ವೇಳೆ ಕಾರ್ಕಳ ಬೈಪಾಸಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಆರೋಪಿ ಸದಾನಂದ ಶೇರಿಗಾರ್ ಈ‌ ಹಿಂದೆ ಕಾರ್ಕಳದಲ್ಲಿ ಸರ್ವೇ ಇಲಾಖೆಯಲ್ಲಿ ಖಾಸಗಿ ಸರ್ವೇಯರ್ ಆಗಿದ್ದ, ಆತ 2019ರಲ್ಲಿ ವ್ಯಕ್ತಿಯೊಬ್ಬರ ಜಮೀನಲ್ಲಿ ಅಕ್ರಮವಾಗಿ ತನ್ನ ಕೈ ಬರಹದಲ್ಲಿ ರಸ್ತೆ ಇರುವುದಾಗಿ ನಕ್ಷೆ ತಯಾರಿಸಿಕೊಟ್ಟಿದ್ದ. ಈ ಪ್ರಕರಣದ ಬಗ್ಗೆ ಜಮೀನಿನ ಮಾಲೀಕರು ಸದಾನಂದ ಶೇರಿಗಾರ್ ವಿರುದ್ಧ ಖಾಸಗೀ ದೂರು ದಾಖಲಿಸಿದ್ದು ಎಫ್.ಐ.ಆರ್. ಆಗಿತ್ತು. ಈ ಬಗ್ಗೆ ನ್ಯಾಯಾಲಯ ಹಲವು ಬಾರಿ ವಾರಂಟ್ ಕಳುಹಿಸಿದ್ದರೂ ಹಾಜರಾಗಿರಲಿಲ್ಲ. ಹೈಕೋರ್ಟಿನಲ್ಲೂ ಜಾಮೀನು ಸಿಕ್ಕಿರಲಿಲ್ಲ. ಇದರಿಂದಾಗಿ ತಾನು ಸತ್ತಿರುವುದಾಗಿ ಬಿಂಬಿಸಿ ಪಲಾಯನ ಮಾಡುವ ಹುನ್ನಾರದಿಂದ ಈ ಕೃತ್ಯ ಎಸಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಅದರಂತೆ ಕಾರ್ಯತಂತ್ರಕ್ಕೆ ಮುಂದಾದ ಸದಾನಂದನಿಗೆ ನೆನಪಾಗಿದ್ದೇ ಜಮೀನು ವಿಚಾರ ಒಂದರಲ್ಲಿ ಸದಾನಂದ ದೇವಾಡಿಗನಿಗೆ ಪರಿಚಯವಾಗಿ, ಆತ್ಮೀಯತೆ ಬೆಳೆಸಿಕೊಂಡಿದ್ದ ಹಿರ್ಗಾನ ಶಿಲ್ಪಾ ಪೂಜಾರಿ ಎಂಬ ವಿವಾಹಿತ ಮಹಿಳೆ. ಇದೇ ತಂತ್ರವನ್ನು ತಲೆಮರೆಸಿಕೊಂಡಿದ್ದ ಸದಾನಂದ ಶಿಲ್ಪಾ ಬಳಿ ಹೇಳಿಕೊಂಡಿದ್ದ. ಈ ಯೋಜನೆಗೆ ಶಿಲ್ಪಾ ಆಯ್ಕೆ ಮಾಡಿಕೊಂಡಿದ್ದೇ ನತದೃಷ್ಟ ಗಾರೆ ಮೇಸ್ತ್ರಿ ಆನಂದ ದೇವಾಡಿಗ! ಕೈಬಿಟ್ಟ ಸಹೋದರ ಮತ್ತು ಸ್ನೇಹಿತ : ಘಟನೆ ನಡೆದ ತಕ್ಷಣ ಸದಾನಂದ ಶೇರಿಗಾರ್ ತನ್ನ ಸಹೋದರ ರವಿಶಂಕರ್ ಎಂಬಾತನಿಗೆ ಫೋನ್ ಮಾಡಿ ತಾನು ನಾಪತ್ತೆಯಾಗಿರುವುದಾಗಿ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸೂಚಿಸಿದ್ದ. ಆದರೆ ಸಹೋದರ ಪೊಲೀಸರಿಗೆ ದೂರು ನೀಡಿರಲಿಲ್ಲ. ಬಳಿಕ ಸದಾನಂದ ತನ್ನ ಸ್ನೇಹಿತನಿಗೂ ಮಿಸ್ಸಿಂಗ್ ಕಂಪ್ಲೇಂಟ್ ಕೊಡುವಂತೆ ಹೇಳಿದ್ದ. ಆದರೆ ಇಬ್ಬರೂ ಇವನ ಖತರ್ನಾಕ್ ಬುದ್ಧಿ ತಿಳಿದಿದ್ದರಿಂದ ಆತ ಹೇಳಿದ್ದನ್ನು ನಿರ್ಲಕ್ಷಿಸಿದ್ದರು ಎನ್ನಲಾಗಿದೆ. ಭಯಾನಕ ತಂತ್ರ ಹೆಣೆದ ಸದಾನಂದ ದೇವಾಡಿಗ ಹಾಗೂ ಆತನ ಸ್ನೇಹಿತೆ ಇದೀಗ ಮಾಡಬಾರದ ಘೋರ ಕೃತ್ಯಕ್ಕೆ ಕಂಬಿ ಎಣಿಸುವಂತಾಗಿದೆ.

  Latest Posts

  ಸುರತ್ಕಲ್: ಇಬ್ಬರ ಮೇಲೆ ಕತ್ತಿ ಬೀಸಿ ಹಲ್ಲೆ, ಬಸ್ಸಿಗೆ ಕಲ್ಲು ತೂರಾಟ

  ಸುರತ್ಕಲ್:ವ್ಯಕ್ತಿಯೊಬ್ಬ ಕತ್ತಿಯಿಂದ ಇಬ್ಬರಿಗೆ ಗಾಯಗೊಳಿಸಿದ್ದಲ್ಲದೆ, ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಘಟನೆ ಕಾನಾ ಸಮೀಪ ನಡೆದಿದೆ. ಗಾಯಾಳು ಸೇರಿ ಕತ್ತಿ ಬೀಸಿದ ವ್ಯಕ್ತಿಗೂ ಗಾಯವಾಗಿದ್ದು, ಇಬ್ಬರನ್ನೂ...

  ಕಾರ್ಕಳ : ಆತ್ಮಹತ್ಯೆಗೆ ಶರಣಾದ ನಿಟ್ಟೆ ಕಾಲೇಜು ವಿದ್ಯಾರ್ಥಿ

  ಕಾರ್ಕಳ : ತಾಲೂಕಿನ ಕಾಲೇಜು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ಕಾಬೆಟ್ಟು ಎಂಬಲ್ಲಿ ಅ. 18 ರಂದು ಸಂಭವಿಸಿದೆ. ಕಾಬೆಟ್ಟು ನಿವಾಸಿ 21 ವರ್ಷದ...

  ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ

  ಮುಂಡಿತ್ತಡ್ಕ :- ಶ್ರೀ ಮಹಾವಿಷ್ಣು ಭಜನಾ ಸಂಘ(ರಿ), ಶ್ರೀ ವಿಷ್ಣು ಕಲಾವೃಂದ(ರಿ) ಹಾಗೂ ಶ್ರೀ ವಿಷ್ಣು ಮಹಿಳಾ ಸಂಘ(ರಿ) ವಿಷ್ಣು ನಗರ ಮುಂಡಿತ್ತಡ್ಕ ಇವುಗಳ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ಣ...

  ಮುಂಬೈನಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ, ಹಲವು ಸಿಕ್ಕಿಹಾಕಿಕೊಂಡಿರುವ ಶಂಕೆ

  ಮುಂಬೈ: ಬೊರಿವಲಿ ಪಶ್ಚಿಮದ ಮುಂಬೈನ ಸಾಯಿಬಾಬಾ ನಗರ ನೆರೆಹೊರೆಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡವೊಂದು ( Four-storey building collapses) ಕುಸಿದಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ...

  Don't Miss

  ಸುಳ್ಯದಲ್ಲಿ ಮತ್ತೆ ಕಂಪಿಸಿದ ಭೂಮಿ

  ಸುಬ್ರಹ್ಮಣ್ಯ : ದಕ್ಷಿಣ ಕನ್ನಡ – ಕೊಡಗು ಜಿಲ್ಲೆಗಳ ಗಡಿಯಲ್ಲಿ ಸೋಮವಾರ ಮತ್ತೊಮ್ಮೆ ಭೂಮಿ ಕಂಪಿಸಿದ ಅನುಭವ ಆಗಿದೆ. ಇದರಿಂದ ಈ ಪ್ರದೇಶದ ನಿವಾಸಿಗಳು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.

  ಕರ್ನಾಟಕದ 18 ಪೊಲೀಸ್ ಅಧಿಕಾರಿಗಳಿಗೆ ‘ರಾಷ್ಟ್ರಪತಿ ಪದಕ’

  ಬೆಂಗಳೂರು: ಪ್ರತಿ ವರ್ಷದಂತೆ ಈ ಭಾರಿಯ ಸ್ವಾತಂತ್ರ್ಯೋತ್ಸವ ಸಮಾರಂಭದ ಸಂದರ್ಭದಲ್ಲಿ ಕೊಡಮಾಡುವ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕಕ್ಕೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಅಮೋಘ ಸೇವೆ ಸಲ್ಲಿಸಿದ 18 ಅಧಿಕಾರಿಗಳು ಪಾತ್ರರಾಗಿದ್ದಾರೆ.

  ಇರ್ವತ್ತೂರು: ಒಡಿಯೂರು ಶ್ರೀಗಳ ಜನ್ಮದಿನೋತ್ಸವದ ಅಂಗವಾಗಿ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಶಿಬಿರ

  ಇರ್ವತ್ತೂರು: ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಇರ್ವತ್ತೂರು ಘಟಸಮಿತಿ ಮತ್ತು ದಲಿತ ಸಂಘಟನೆ ಸಮಿತಿ ಪಂಜೋಡಿ (ರಿ )ನೇರಳಕಟ್ಟೆ. ಇದರ ಜಂಟಿ ಆಶ್ರಯದಲ್ಲಿ ಜಿಲ್ಲಾ...

  ಕಡಬ: ಧ್ವಜಾರೋಹಣದ ವೇಳೆ ಕುಸಿದು ಬಿದ್ದ ನಿವೃತ್ತ ಸೈನಿಕ ಮೃತ್ಯು

  ಕಡಬ: ಕುಟ್ರುಪಾಡಿ ಗ್ರಾ.ಪಂ. ವತಿಯಿಂದ ಹಳೆ ಸ್ಟೇಷನ್ ಅಮೃತ ಸರೋವರದ ಬಳಿ ನಡೆದ ಧ್ವಜಾರೋಹಣದ ವೇಳೆ ನಿವೃತ್ತ ಸೈನಿಕರೋರ್ವರು ಕುಸಿದು ಬಿದ್ದು ಅಸ್ವಸ್ಥಗೊಂಡು ಬಳಿಕ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ...

  ಸ್ವಾತಂತ್ರ್ಯೋತ್ಸವದಲ್ಲಿ ಹೊಸ ಯೋಜನೆಗಳನ್ನ ಘೋಷಿಸಿದ ಸಿಎಂ ಬೊಮ್ಮಾಯಿ

  ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು. 75ನೇ ಸ್ವಾತಂತ್ರ್ಯೋತ್ಸವವನ್ನ ದೇಶಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಅದರಂತೆ ನಾಡಿನ ಮುಖ್ಯಮಂತ್ರಿ ಬೊಮ್ಮಾಯಿ ಅವರು...