ಹುಬ್ಬಳ್ಳಿ: ಭೂತಾರಾಧನೆ ಸಂದರ್ಭದಲ್ಲಿ ಅವರ ಮೈಯಲ್ಲಿ ದೈವ ಬರೋದು ಶುದ್ಧ ಸುಳ್ಳು. ಹಾಗಿರುವಾಗ ದೈವನರ್ತಕರಿಗೆ ಇತ್ತೀಚೆಗೆ ಸರ್ಕಾರ ಎರಡು ಸಾವಿರ ರೂಪಾಯಿ ಮಾಸಾಶನ ಘೋಷಣೆ ಮಾಡಿರುವುದು ತಪ್ಪು ಎಂದು ಮಾಜಿ ಸಚಿವೆ ಬಿ.ಟಿ ಲಲಿತಾ ನಾಯ್ಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಖಾಸಗಿ ವಾಹಿನಿಯೊಂದರಲ್ಲಿ ಈ ಬಗ್ಗೆ ಮಾತನಾಡಿದ ಇವರು ‘ರಿಷಬ್ ಶೆಟ್ಟಿ ಒಬ್ಬ ವಿಚಾರವಾದಿ. ಆತನ ವಿಚಾರಗಳನ್ನು ನೇರವಾಗಿ ಹೇಳಿದರೆ ಆತನಿಗೆ ಹೊಡೆತ ಬೀಳುವುದು ಖಂಡಿತ. ಸತ್ಯವನ್ನು ನೇರವಾಗಿ ಹೇಳಿದ್ರೆ ಜನ ಆತನನ್ನು ಕೊಂದೇ ಹಾಕುತ್ತಾರೆ. ಅದು ಆತನಿಗೆ ಬೇಕಿಲ್ಲ. ಅವನು ಇನ್ನೂ ಸ್ವಲ್ಪ ವರ್ಷ ಬದುಕಬೇಕೆಂದು ‘ಕಾಂತಾರ’ ಚಿತ್ರ ಮಾಡಿದ್ದಾನೆ. ಕಾಂತಾರ ಸಿನಿಮಾ ನೋಡಲು ಬಹಳಷ್ಟು ಬುದ್ಧಿವಂತಿಕೆ ಬೇಕು’ ಎಂದು ಕಟುವಾಗಿ ವ್ಯಂಗ್ಯವಾಡಿದ್ದಾರೆ.
