Friday, April 19, 2024
spot_img
More

    Latest Posts

    ಬ್ರಿಟಿಷರ ಕಾಲದ ಗುಪ್ತ ಸುರಂಗ ಪತ್ತೆ – 2022ರಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ : ರಾಮ್ ನಿವಾಸ್ ಗೋಯೆಲ್

    ನವದೆಹಲಿ, ಸ.04 : ದೆಹಲಿ ವಿಧಾನಸಭೆಯಲ್ಲಿ ಕೆಂಪುಕೋಟೆಗೆ ಸಂಪರ್ಕಿಸುವ ಗುಪ್ತ ಸುರಂಗ ಮಾರ್ಗವನ್ನು ಪತ್ತೆ ಮಾಡಲಾಗಿದ್ದು, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಈ ಸುರಂಗವನ್ನು ಬಳಸುತ್ತಿದ್ದು, 2022ರ ಸ್ವಾತಂತ್ರ್ಯದ ವೇಳೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡುತ್ತೇವೆ ಎಂದು ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಹೇಳಿದ್ದಾರೆ.

    ಈ ಕುರಿತು ಮಾತನಾಡಿರುವ ಗೋಯೆಲ್, “1993ರಲ್ಲಿ ನಾನು ಶಾಸಕನಾದಾಗ ಕೆಂಪುಕೋಟೆಯವರೆಗೆ ಹೋಗುವ ಸುರಂಗ ಮಾರ್ಗದ ಬಗ್ಗೆ ಕೇಳಿದ್ದೆ. ಅದಲ್ಲದೆ ನಾನು ಅದರ ಇತಿಹಾಸವನ್ನು ಹುಡುಕಲು ಅನೇಕ ಪ್ರಯತ್ನ ಪಟ್ಟಿದ್ದೇನೆ. ಆದರೆ ಈ ಬಗ್ಗೆ ಇನ್ನು ಕೂಡ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ” ಎಂದು ತಿಳಿಸಿದ್ದಾರೆ.

    ಇನ್ನು ಪ್ರಸ್ತುತ ಈ ಸುರಂಗ ಮಾರ್ಗವನ್ನು ನಾವು ಪತ್ತೆ ಹಚ್ಚಿದ್ದೇವೆ. ಮೆಟ್ರೋ ಯೋಜನೆಗಳು ಮತ್ತು ಒಳಚರಂಡಿ ಕಾಮಗಾರಿಯ ಸಂದರ್ಭ ಈ ಸುರಂಗದ ಮಾರ್ಗಗಳು ನಾಶವಾಗಿದೆ. ಹಾಗಾಗಿ ನಾವು ಅದನ್ನು ಮತ್ತಷ್ಟು ಅಗೆಯಲು ಮುಂದಾಗಿಲ್ಲ. ಶೀಘ್ರದಲ್ಲೇ ನಾವು ಅದನ್ನು ನವೀಕರಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುತ್ತೇವೆ. ಮುಂದಿನ ವರ್ಷ ಆಗಸ್ಟ್ 15 ರೊಳಗೆ ನವೀಕರಣ ಕಾರ್ಯ ಮುಗಿಯುವ ನಿರೀಕ್ಷೆಯಿದೆ” ಎಂದಿದ್ದಾರೆ.ಬ್ರಿಟಿಷರು 1912ರಲ್ಲಿ ಕೋಲ್ಕತ್ತಾದಿಂದ ಕೇಂದ್ರ ಶಾಸಕಾಂಗ ಕಚೇರಿಯನ್ನು ದೆಹಲಿ ವಿಧಾನ ಸಭೆ ಕಟ್ಟಡಕ್ಕೆ ಸ್ಥಳಾಂತರಿಸಿದ್ದು, ಬಳಿಕ 1962ರಲ್ಲಿ ಈ ಕಟ್ಟಡವನ್ನು ಕೋರ್ಟ್ ಆಗಿ ಪರಿವರ್ತಿಸಲಾಗಿತ್ತು. ಅದಲ್ಲದೆ ಸ್ವಾತಂತ್ರ್ಯ ಹೋರಾಟಗಾರರನ್ನು ಕೋರ್ಟ್‍ಗೆ ಹಾಜರುಪಡಿಸಲು ಬ್ರಿಟಿಷರು ಈ ರಹಸ್ಯ ಸುರಂಗ ಮಾರ್ಗವನ್ನು ಬಳಸುತ್ತಿದ್ದರು ಎಂಬ ಬಗ್ಗೆ ಮಾಹಿತಿ ಇದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss