ಉಡುಪಿ: ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ರವರ ಸಾರಥ್ಯದಲ್ಲಿ ಕಳೆದ 13ವರ್ಷಗಳಿಂದ ನೂರಾರು ಜನಪರ ಹೋರಾಟ ,ಅನ್ನದಾನ, ರಕ್ತದಾನ , ತುಳು ಸಮ್ಮೇಳನಗಳು ಸೇರಿದಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯ ಮತ್ತು ವಿದೇಶದಲ್ಲಿ ಪ್ರಸಿದ್ಧಿಗಳಿಸಿದೆ.

ಇಂದು ದಿನಾಂಕ 04/06/2022 ರಂದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ಕರಂಬಳ್ಳಿ ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಅಭಿಯಾನ ಚಾಲನೆ ನೀಡಲಾಯಿತು . ಈ ಸಂಧರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ರೋಹಿತ್ ಕರಂಬಳ್ಳಿ, ಪ್ರಧಾನ ಕಾರ್ಯದರ್ಶಿಯಾದ ಅಜಾರುದ್ಧಿನ್ ಸುಬ್ರಹ್ಮಣ್ಯ ನಗರ , ಯುವ ಉದ್ಯಮಿ ರಾಕೇಶ್ ಕಟಪಾಡಿ , ಹಳೆ ವಿದ್ಯಾರ್ಥಿ ಸಂಘದ ಅದ್ಯಕ್ಷರಾದ ಕುಮಾರ್ ಪೂಜಾರಿ , ಏಕದಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅದ್ಯಕ್ಷರಾದ ಚೇತನ್ ಪೂಜಾರಿ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು ಶಾಲಾ ಮುಖ್ಯ ಶಿಕ್ಷಕರು, ವಿಧ್ಯಾರ್ಥಿಗಳು ಉಪಸ್ಥಿರಿದ್ಧರು.
