ಮುಂಬೈ: ಕಳೆದ ವರ್ಷ ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಬೀಕರ ಕೃತ್ಯ ದೇಶದಲ್ಲಿ ಎಲ್ಲರನ್ನು ಭಯಬೀತರನ್ನಾಗಿ ಮಾಡಿದೆ. ಬಳಿಕ ಅಂತಹ ಘಟನೆಗಳು ಹೆಚ್ಚಾಗುತ್ತಲೆ ಇದೆ. ಇದೀಗ ಮತ್ತೊಂದು ಬೀಕರ ಕೃತ್ಯ ತನ್ನ ಪ್ರೇಯಸಿಯ ದೇಹದ ಭಾಗವನ್ನು ತಂಡುಗಳಾಗೆ ಕತ್ತರಿಸಿ ಕುಕ್ಕರ್ ನಲ್ಲಿ ಬೇಯಿಸಿದ ಕೃತ್ಯ ಮಂಬೈಯಲ್ಲಿ ನಡೆದಿದೆ.
ಮನೋಜ್ ಸಹಾನಿ (36) ಕಳೆದ ಮೂರು ವರ್ಷಗಳಿಂದ ಗೀತಾ ನಗರ 7ನೇ ಹಂತದ ಗೀತಾ ಆಕಾಶ್ ದೀಪ್ ಕಟ್ಟಡದಲ್ಲಿ 704 ಫ್ಲಾಟ್‌ನಲ್ಲಿ ಸರಸ್ವತಿ ವೈದ್ಯ (36) ಎಂಬವರೊಂದಿಗೆ ವಾಸವಾಗಿದ್ದರು. ಜೂ.7ರಂದು ಮನೋಜ್ ಹಾಗೂ ಸರಸ್ವತಿ ವಾಸಿಸುತ್ತಿರುವ ಫ್ಲಾಟ್ ನ ಇತರೆ ಸದಸ್ಯರು ಮನೋಜ್ ಅವರ ನಿವಾಸದಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ನೋಡಿದಾಗ 3-4 ದಿನಗಳ ಹಿಂದೆ ಕೊಲೆಯಾಗಿರುವ ಮಹಿಳೆಯೊಬ್ಬರ ದೇಹದ ಭಾಗಗಳು ಕುಕ್ಕರ್ ನಲ್ಲಿ ಬೇಯುತ್ತಿರುವುದನ್ನು ಪೊಲೀಸರು ನೋಡಿದ್ದಾರೆ. ತನಿಖೆ ನಡೆಸಿದ ಪೊಲೀಸರು ಮನೋಜ್ ಬೋರಿವಾಲಿಯಲ್ಲಿ ಸಣ್ಣ ಅಂಗಡಿ ನಡೆಸುತ್ತಿದ್ದರು. ಮನೋಜ್ ಹಾಗೂ ಸರಸ್ವತಿ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಕೆಲವು ವಿಷಯಕ್ಕೆ ಇವರಿಬ್ಬರ ನಡುವೆ ಜಗಳವಾಗಿದೆ. ಇದೇ ವಿಚಾರಕ್ಕೆ ಈ ಕೃತ್ಯ ನಡೆದಿರಬಹುದು ಎನ್ನಲಾಗಿದೆ. ಆಕೆಯ ದೇಹವನ್ನು ಮರ ಕಟ್ ಮಾಡುವ ಮಿಷನ್ ನಿಂದ ತುಂಡು ಮಾಡಲಾಗಿದ್ದು, ಮನೆಗೆ ತಲುಪಿ ಬಾಗಿಲು ತೆರೆದಾಗ, ಇದು ಕೊಲೆಯ ಪ್ರಕರಣ ಎಂದು ತಿಳಿದು ಬಂದಿದೆ. ಶಂಕಿತ ಆರೋಪಿಯಯು ಈ ಕೊಲೆ ಮಾಡಿರುವುದು ತಿಳಿಯಬಾರದೆಂದು ಈ ರೀತಿ ದೇಹದ ಭಾಗವನ್ನು ಕುಕ್ಕರ್ ನಲ್ಲಿ ಬೇಯಿಸಿರಬಹುದು ಎಂದು ಪೊಲೀಸ್ ಉಪ ಆಯುಕ್ತ ಜಯಂತ್ ಬಜ್ಬಲೆ ಅವರು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಕೊಲೆಯ ಹಿಂದಿನ ಉದ್ದೇಶವನ್ನು ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದು, ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.