ಉಳ್ಳಾಲ : ಪಾಸ್ ಪೋರ್ಟ್ ರಿನಿವಲ್ ಮಾಡಿಸಲೆಂದು ಬೆಂಗಳೂರಿನಿಂದ ಮಂಗಳೂರಿನ ತೊಕ್ಕೊಟ್ಟಿಗೆ ಬಂದಿದ್ದ ಯುವಕ ಸಂಶಯಾಸ್ಪದವಾಗಿ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿ ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಮಹಾಂತೇಶ್ ಎ.ಎಸ್ ಮೃತ ಯುವಕನಾಗಿದ್ದಾನೆ.
ಕಳೆದ ಬುಧವಾರ ಮಂಗಳೂರಿನ ತೊಕ್ಕೊಟ್ಟು ಕಾಫಿಕಾಡುವಿನ ಲಾಡ್ಜ್‌ನಲ್ಲಿ ತಂಗಿದ್ದ ಯುವಕ ಮಹಾಂತೇಶ್ ನಾಪತ್ತೆಯಾಗಿದ್ದ,ಈ ಕುರಿತು ಸಹೋದರಿ ಉಳ್ಳಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಳು. ಇಂದು ಮದ್ಯಾಹ್ನ ಲಾಡ್ಜ್ ಸಮೀಪ ಬಾವಿಯಲ್ಲಿ ಮಹಾಂತೇಶನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬಾವಿಯಲ್ಲಿ ಪಂಪ್ ಸೆಟ್ ಅಳವಡಿಸಲಾಗಿದ್ದು, ಸಂಪೂರ್ಣವಾಗಿ ಬಲೆಯಿಂದ ಮುಚ್ಚಲಾಗಿದೆ. ಇದರಿಂದ ಮಹಾಂತೇಶ್ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿದೆ. ಪೊಲೀಸರ ತನಿಖೆಯಿಂದಷ್ಟೆ ಪೂರ್ಣ ಸತ್ಯ ಹೊರಬೀಳಬೇಕಿದೆ.