Thursday, March 28, 2024
spot_img
More

    Latest Posts

    ಮಲ್ಪೆ ಸಮುದ್ರ ಮಧ್ಯೆ ಹತ್ತಾರು ಬೋಟ್ ಗಳಲ್ಲಿ ಕೋಟಿ ಕಂಠ ಗಾಯನ

    ಮಲ್ಪೆ: 67ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಕೋಟಿ ಕಂಠ ಗಾಯನವು ಮಲ್ಪೆಯ ಸಮುದ್ರದ ಅಲೆಗಳ ಮೇಲೆ ಅನುರಣಿಸಿತು. ಉಡುಪಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬೆಳಿಗ್ಗೆ 11 ಗಂಟೆಗೆ ಮಲ್ಪೆ ಸಮುದ್ರದ ಮಧ್ಯೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಸಮುದ್ರ ಮಧ್ಯದಲ್ಲಿ ಹತ್ತಾರು ಬೋಟ್ ಗಳಲ್ಲಿ ಸಾವಿರಕ್ಕೂ ಹೆಚ್ಚು ಜನ ಗಾಯನದಲ್ಲಿ ಪಾಲ್ಗೊಂಡರು.ಉಡುಪಿ ಜಿಲ್ಲಾಧಿಕಾರಿ ಸಮಕ್ಷಮ ಈ ಗೀತ ಗಾಯನ ನಡೆಯಿತು. ಜಯ ಭಾರತ ಜನನಿಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂನತ ವಿದ್ಯಾಚೇತನ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳು ಸಮುದ್ರದಲೆಗಳಲ್ಲಿ ಇಂಪಾಗಿ ಮಾರ್ದನಿಸಿತು.

    ಉಳಿದಂತೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಪೊಲೀಸ್ ಬ್ಯಾಂಡ್ ನೊಂದಿಗೆ 5000 ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು, ಮಣಿಪಾಲ ಗ್ರೀನ್ಸ್ ನಲ್ಲಿ 5000 ಮಂದಿ ಡಾಕ್ಟರ್‌ಗಳು ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಬಿಳಿ ಕೋಟ್ ಹಾಗೂ ಸ್ಟೆತೋಸ್ಕೋಪ್ ಧರಿಸಿ ಭಾಗವಹಿಸಿದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss