Friday, March 29, 2024
spot_img
More

    Latest Posts

    ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಹೊದಿಕೆ ವಿತರಣೆ ಅಭಿಯಾನ ಸಮಾರೋಪ ಕಾರ್ಯಕ್ರಮ

    ಮಂಗಳೂರು: ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಹೊದಿಕೆ ವಿತರಣೆ ಅಭಿಯಾನ ಸಮಾರೋಪ ಕಾರ್ಯಕ್ರಮ ಮಾ.6ರಂದು ತುಳುನಾಡ ರಕ್ಷಣಾ ವೇದಿಕೆ ಗೌರವ ಸಲಹೆಗಾರ ಫ್ರಾನ್ಸಿಸ್ ರಸ್ಕಿನ್ ರವರ ಮುಖ್ಯ ಪ್ರಾಯೋಜಕತ್ವದಲ್ಲಿ ನಡೆಯಿತು.

    ಬೀದಿ ಬೀದಿಗಳಲ್ಲಿ ಜೀವನ ಸಾಗಿಸಿ ರಾತ್ರಿ ಹೊತ್ತು ರಸ್ತೆ ಬದಿಯಲ್ಲಿ ಮಲಗುವ ನಿರ್ಗತಿಕರು ಹಾಗೂ ಬಡ ವರ್ಗದವರಿಗೆ ಚಳಿಗಾಲ ಹಾಗೂ ವಿಪರಿತ ತಂಡೀಗಾಳಿ ವಾತಾವರಣದ ಪರಿಣಾಮ ಆರೋಗ್ಯ ಸಮಸ್ಯೆ ಬರದಂತೆ ಹೊದಿಕೆ ವಿತರಣಾ ಅಭಿಯಾನ ಮಂಗಳೂರು ನಗರದ ವಿವಿಧ ಬಡಾವಣೆಗಳಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ಹಾಗೂ ಇತರ ಪದಾಧಿಕಾರಿಗಳು ನಿರಾಶ್ರಿತರಿಗೆ ಹೊದಿಕೆ ನೀಡುವ ಕಾರ್ಯಕ್ರಮ ಜ.23ರಿಂದ ನಡೆಸಿಕೊಂಡು ಬರುತ್ತಿದ್ದು ಇದುವರಿಗೆ 2 ತಿಂಗಳಿಂದ ಸುಮಾರು ಒಂದು ಸಾವಿರ ಹೊದಿಕೆ ಹಂಚಲಾಗಿದೆ.
    ಅದೇ ರೀತಿ ಮಾ.6 ರಂದು 5 ಗಂಟೆಗೆ ಮಂಗಳೂರು ನಗರಪಾಲಿಕೆ ವಸತಿ ರಹಿತರ ಕೇಂದ್ರದಲ್ಲಿ ಸಮಾರೋಪ ಕಾರ್ಯಕ್ರಮ ಉದ್ಘಾಟನೆಯನ್ನು ಅಂತಾರಾಷ್ಟ್ರೀಯ ಗೌರವ ಅಧ್ಯಕ್ಷ ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ಹಾಗೂ ಶ್ರೀ ದುರ್ಗಾನಂದ ಸ್ವಾಮೀಜಿ,ಶಿವಗಿರಿ ಮಠ ಮಡ್ಯಾರ್ ರವರು ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಶುಭಹಾರೈಸಿದರು.

    ಸಭೆಯಲ್ಲಿ ನಿರಾಶ್ರಿತರಿಗೆ ಹಾಗೂ ಬಡವರಿಗೆ ಹೊದಿಕೆ ವಿತರಿಸಿ ಮಾತನಾಡಿದ ಡಾ. ಡೇವಿಡ್ ಫ್ರಾಂಕ್ ಫೆರ್ನಾಂಡಿಸ್,ರವರು ಬಡವರಿಗೆ ಸೇವೆ ಸಲ್ಲಿಸಿದರೆ ದೇವರಿಗೆ ಸಲ್ಲುತ್ತದೆ. ಮಾನವೀಯತೆ ಮೈಗೂಡಿಸಿಕೊಂಡು ಜೀವನ ಸಾಗಿಸಿ ಎಂದು ಕರೆ ನೀಡಿದರು.

    ಕಾರ್ಯಕ್ರಮ ದಲ್ಲಿ ,ತುಳುನಾಡ ರಕ್ಷಣಾ ವೇದಿಕೆ ಮುಖಂಡರುಗಳಾದ ಜೆ ಇಬ್ರಾಹಿಂ , ಜ್ಯೋತಿ ಜೈನ್ , ಕ್ಲಿಟಸ್ ಲೋಬೊ, ಹರೀಶ್ ಶೆಟ್ಟಿ, ಜೋಸೆಫ್ ಲೋಬೊ , ರೋಶನ್ ,ಗೈಟನ್ , ಉಪಸ್ಥಿತರಿದ್ದರು.
    ಕೇಂದ್ರೀಯ ಕಚೇರಿ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಕಾರ್ಯಕ್ರಮ ನಿರೂಪಿಸಿದರು . ವಸತಿ ಕೇಂದ್ರದ ಪ್ರಮುಖರಾದ ಎಂ. ಪಿ. ಶೆಣೈ ದನ್ಯವಾದ ಅರ್ಪಣೆ ಮಾಡಿದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss