Monday, June 27, 2022

ಮಾಬುಕಳ:ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ – ಕಾರು ಚಾಲಕ ಗಂಭೀರ

ಉಡುಪಿ: ಕಾರು ಮತ್ತು ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಬ್ರಹ್ಮಾವರ ಮಾಬುಕಳ ಸೇತುವೆಯ ಸಮೀಪ ನಡೆದಿದೆ.
More

    Latest Posts

    ಮಂಗಳೂರು: ಗುದನಾಳದಲ್ಲಿ ಅಡಗಿಸಿ ಚಿನ್ನ ಕಳ್ಳ ಸಾಗಾಣಿಕೆ – 60. 24 ಲಕ್ಷ ರೂ. ಮೌಲ್ಯದ ಚಿನ್ನ ವಶ

    ಮಂಗಳೂರು: ಚಿನ್ನವನ್ನು ಗುದನಾಳದಲ್ಲಿ ಅಡಗಿಸಿ ಕಳ್ಳಸಾಗಾಣಿಕೆ ಮಾಡಲು ಯತ್ನಿಸಿ ವ್ಯಕ್ತಿಯನ್ನು ಭಾನುವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜೂ. 26 ರ ಭಾನುವಾರ ದುಬೈನಿಂದ...

    ಮಂಗಳೂರು: ಡಿಸಿಪಿ ಹರಿರಾಂ ಶಂಕರ್‌ ವರ್ಗಾವಣೆ

    ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ  ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಹರಿರಾಂ ಶಂಕರ್‌ ಅವರನ್ನು ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ...

    ಉಡುಪಿ: ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೋಕ್ಸೋ ಕಾಯ್ದೆ ಕುರಿತು ಮಾಹಿತಿ ಕಾರ್ಯಾಗಾರ

    ಉಡುಪಿ: ಪೋಕ್ಸೋ ಕಾಯ್ದೆ ಕುರಿತು ಉಡುಪಿ ಜಿಲ್ಲಾ ಪೋಲೀಸ್ ಅಧಿಕಾರಿಗಳಿಗೆ ತರಬೇತಿ ಮತ್ತು ಮಾಹಿತಿ ಕಾರ್ಯಾಗಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿತು.

    ವಾಹನ ಸವಾರರಿಗೆ ಗುಡ್‌ ನ್ಯೂಸ್:‌ ಇನ್ಮುಂದೆ ಸುಖಾಸುಮ್ಮನೆ ವಾಹನ ನಿಲ್ಲಿಸಿ ದಾಖಲೆ ಪರಿಶೀಲಿಸುವಂತಿಲ್ಲ

    ರಸ್ತೆಯಲ್ಲಿ ಹೋಗುವ ವೇಳೆ ಟ್ರಾಫಿಕ್‌ ಪೊಲೀಸರು ಏಕಾಏಕಿ ಕೈ ಅಡ್ಡ ಹಾಕಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದರು. ಇದರಿಂದ ಟ್ರಾಫಿಕ್‌ ಜಾಮ್‌ ಆಗುತ್ತಿತ್ತಲ್ಲದೇ ಸವಾರರೂ ಸಹ ಕಿರಿಕಿರಿ ಅನುಭವಿಸುವಂತಾಗಿತ್ತು. ತುರ್ತಾಗಿ ಎಲ್ಲದರೂ ಹೋಗಬೇಕಿದ್ದವರು...

    ಕಿನ್ನಿಗೋಳಿ: ಓವರ್‌ಟೇಕ್‌ ಮಾಡುವಾಗ ಬೈಕ್‌ ಸ್ಕಿಡ್‌ -ಕಾರಿನಡಿಗೆ ಬಿದ್ದ ಬೈಕ್ ಸವಾರ ಸಾವು

    ಕಿನ್ನಿಗೋಳಿ: ಓವರ್‌ಟೇಕ್‌ ಮಾಡುವ ವೇಳೆ ಬೈಕ್‌ ಸ್ಕಿಡ್‌ ಆಗಿ ಸವಾರ ಕಾರಿನಡಿಗೆ ಬಿದ್ದು ಮೃತಪಟ್ಟ ಘಟನೆ ಗಂಜಿಮಠ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗುರುಪುರ ಕೈಕಂಬದ ಸಮೀಪ ಸಂಭವಿಸಿದೆ.

    ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಮೂಡು ಬಿದಿರೆಯಿಂದ ಕೈಕಂಬದ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದ ಕೆರೆಕಾಡಿನ ಪ್ರವೀಣ್‌ (36) ಬೆೈಕ್‌ ಅನ್ನು ಗಂಜಿಮಠ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗುರುಪುರ ಕೈಕಂಬದ ಸಮೀಪ ಓವರ್‌ಟೇಕ್‌ ಮಾಡುವ ವೇಳೆ ಬೈಕ್‌ ಸ್ಕಿಡ್‌ ಆಗಿದೆ.

    ಈ ಸಂದರ್ಭ ಕಾರಿನಡಿಗೆ ಬಿದ್ದ ಬೈಕ್‌ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಘಟನೆ ರವಿವಾರ ಮಧ್ಯಾಹ್ನ ಸಂಭವಿಸಿದೆ.

    ಮಳೆ ಬಂದ ಕಾರಣ ಹೆದ್ದಾರಿ ಜಾರುತ್ತಿದ್ದು ಪ್ರವೀಣ್‌ ಅವರು ಹೆಲ್ಮೆಟ್‌ ಹಾಕದೇ ಇರುವುದು ಸಾವಿಗೆ ಕಾರಣವಾಗಿದೆ. ಅಪಘಾತದ ವೀಡಿಯೋ ವೆೈರಲ್‌ ಆಗಿದೆ.

    ಕಳೆದ ವಾರ ಇದೇ ಜಾಗದಲ್ಲಿ ಓವರ್‌ಟೇಕ್‌ ಮಾಡುವ ವೇಳೆ ಅಪಘಾತವಾಗಿದ್ದು ಅದರಲ್ಲಿ ಬೆೈಕ್‌ ಕಾರಿಗೆ ಢಿಕ್ಕಿ ಹೊಡೆದಿತ್ತು. ಬೈಕ್‌ ಸವಾರ ಹೆಲ್ಮೆಟ್‌ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದ.

    ಕೆರೆಕಾಡು ನಿವಾಸಿ ಸುಂದರಿ ಅವರ ಇಬ್ಬರು ಪುತ್ರರಲ್ಲಿ ಪ್ರವೀಣ್‌ ಕಿರಿಯವ. ಅವರು ತಾಯಿ, ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಪ್ರವೀಣ್‌ ಅವರು ಕೂಲಿ ಕೆಲಸ ಮಾಡುತ್ತಿದ್ದು, ಹಲವಾರು ವರ್ಷಗಳಿಂದ ಮಂಗಳೂರು, ಮೂಡುಬಿದಿರೆಯ ಹಲವಾರು ಕೀಲು ಕುದುರೆ ತಂಡದಲ್ಲಿ ವೇಷ ಹಾಕುತ್ತಿದ್ದರು. ನವರಾತ್ರಿಯ ಹುಲಿ ವೇಷಧಾರಿಯಾಗಿದ್ದು ಪುನರೂರು ಮೊಸರು ಕುಡಿಕೆಯ ಸಂದರ್ಭ ಹುಲಿ ವೇಷ ಹಾಕುತ್ತಿದ್ದು ಉತ್ತಮ ಕ್ರಿಕೆಟ್‌ ಪಟುವಾಗಿದ್ದರು.

    Latest Posts

    ಮಂಗಳೂರು: ಗುದನಾಳದಲ್ಲಿ ಅಡಗಿಸಿ ಚಿನ್ನ ಕಳ್ಳ ಸಾಗಾಣಿಕೆ – 60. 24 ಲಕ್ಷ ರೂ. ಮೌಲ್ಯದ ಚಿನ್ನ ವಶ

    ಮಂಗಳೂರು: ಚಿನ್ನವನ್ನು ಗುದನಾಳದಲ್ಲಿ ಅಡಗಿಸಿ ಕಳ್ಳಸಾಗಾಣಿಕೆ ಮಾಡಲು ಯತ್ನಿಸಿ ವ್ಯಕ್ತಿಯನ್ನು ಭಾನುವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜೂ. 26 ರ ಭಾನುವಾರ ದುಬೈನಿಂದ...

    ಮಂಗಳೂರು: ಡಿಸಿಪಿ ಹರಿರಾಂ ಶಂಕರ್‌ ವರ್ಗಾವಣೆ

    ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ  ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಹರಿರಾಂ ಶಂಕರ್‌ ಅವರನ್ನು ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ...

    ಉಡುಪಿ: ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೋಕ್ಸೋ ಕಾಯ್ದೆ ಕುರಿತು ಮಾಹಿತಿ ಕಾರ್ಯಾಗಾರ

    ಉಡುಪಿ: ಪೋಕ್ಸೋ ಕಾಯ್ದೆ ಕುರಿತು ಉಡುಪಿ ಜಿಲ್ಲಾ ಪೋಲೀಸ್ ಅಧಿಕಾರಿಗಳಿಗೆ ತರಬೇತಿ ಮತ್ತು ಮಾಹಿತಿ ಕಾರ್ಯಾಗಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿತು.

    ವಾಹನ ಸವಾರರಿಗೆ ಗುಡ್‌ ನ್ಯೂಸ್:‌ ಇನ್ಮುಂದೆ ಸುಖಾಸುಮ್ಮನೆ ವಾಹನ ನಿಲ್ಲಿಸಿ ದಾಖಲೆ ಪರಿಶೀಲಿಸುವಂತಿಲ್ಲ

    ರಸ್ತೆಯಲ್ಲಿ ಹೋಗುವ ವೇಳೆ ಟ್ರಾಫಿಕ್‌ ಪೊಲೀಸರು ಏಕಾಏಕಿ ಕೈ ಅಡ್ಡ ಹಾಕಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದರು. ಇದರಿಂದ ಟ್ರಾಫಿಕ್‌ ಜಾಮ್‌ ಆಗುತ್ತಿತ್ತಲ್ಲದೇ ಸವಾರರೂ ಸಹ ಕಿರಿಕಿರಿ ಅನುಭವಿಸುವಂತಾಗಿತ್ತು. ತುರ್ತಾಗಿ ಎಲ್ಲದರೂ ಹೋಗಬೇಕಿದ್ದವರು...

    Don't Miss

    ಮಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಹಾವಿನ ಮೊಟ್ಟೆ ಪತ್ತೆ-ಕಾವು ಕೊಟ್ಟು ಕಾಡಿಗೆ ಬಿಟ್ಟ ಉರಗ ತಜ್ಞ

    ಮಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಹಾವಿನ ಮೊಟ್ಟೆ ಪತ್ತೆಯಾಗಿದ್ದು, ಇದನ್ನು ಕಂಡ ಕಟ್ಟಡದ ಮಾಲಕರು ಮೊಟ್ಟೆಗಳನ್ನು ಉರಗ ತಜ್ಞರಿಗೆ ಹಸ್ತಾಂತರಿಸಿ ಅವುಗಳಿಗೆ ಕೃತಕ ಕಾವು ಕೊಟ್ಟು ಮರಿಗಳನ್ನು ಬಂಟ್ವಾಳದ ಕಾಡಿಗೆ...

    ಕಾಪು : ಲಾರಿ ಢಿಕ್ಕಿ-ಡಿವೈಡರ್‌ ಮೇಲೆ ಪಲ್ಟಿಯಾದ ಓಮ್ನಿ ಕಾರು – ಪ್ರಯಾಣಿಕರು ಪಾರು

    ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಮಾರುತಿ ಓಮ್ನಿ ಕಾರಿಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ನಡುವಿನ ಡಿವೈಡರ್‌ ಮೇಲೆ...

    ಮಂಗಳೂರು: ಗಾಂಜಾ ಪ್ರಕರಣ – 5 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

    ಮಂಗಳೂರು: ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಂಟ್ವಾಳ ಸಜೀಪ ಮುನ್ನೂರು ಗ್ರಾಮದ ನಿವಾಸಿ ಜಾಕೀರ್ ಹುಸೈನ್ (29) ಎಂದು ಗುರುತಿಸಲಾಗಿದೆ.

    ರಾಜ್ಯದಲ್ಲಿ ಇಂದಿನಿಂದ ನಾಲ್ಕು ದಿನ ಭಾರೀ ಮಳೆ : ಹವಾಮಾನ ಇಲಾಖೆ

    ಬೆಂಗಳೂರು : ರಾಜ್ಯಾದ್ಯಂತ ಮುಂದಿನ 4 ದಿನಗಳ ಕಾಲ ಅಂದ್ರೆ ಜೂನ್ 26ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ಕೊಟ್ಟಿದೆ. ಈ ಹಿನ್ನೆಲೆ...

    ಚಿಟ್​ಫಂಡ್​ ವ್ಯವಹಾರ ನಡೆಸಿ ಲಕ್ಷಾಂತರ ರೂ. ಪಂಗನಾಮ- ವರ್ಷದ ಬಳಿಕ ವಂಚಕಿ ಸೆರೆ!

    ಬೆಂಗಳೂರು: ಅಲ್ಪ ಅವಧಿಯಲ್ಲಿ ಹೆಚ್ಚಿನ ದುಡ್ಡು ಮಾಡಬಹುದು ಎಂಬ ಆಮಿಷ ಒಡ್ಡಿ ಜನರನ್ನು ಅದರಲ್ಲಿಯೂ ಹೆಚ್ಚಾಗಿ ವೃದ್ಧರನ್ನು ವಂಚಿಸುತ್ತಿದ್ದ ಮಹಾವಂಚಕಿ ಬೆಂಗಳೂರಿನ ಲಕ್ಷ್ಮೀವಾಣಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಿಟ್...