Tuesday, March 19, 2024
spot_img
More

    Latest Posts

    ಬೈಕ್‌ ರೈಡರ್‌ ಸಚಿನ್‌ ಶೆಟ್ಟಿ ಪ್ರಯಾಣಕ್ಕೆ ಶುಭಹಾರೈಸಿದ ತುಳುನಾಡ ರಕ್ಷಣಾ ವೇದಿಕೆ

    ಮಂಗಳೂರು: ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ದಾಖಲಿಸಿರುವ ಹಾಗೂ ʼಶಟರ್‌ ಬಾಕ್ಸ್‌ ಫಿಲಂʼ ಎಂಬ ಯೂಟ್ಯೂಬ್‌ ಚಾನಲ್‌ ನಲ್ಲಿ ಪ್ರಸಿದ್ಧಿಯನ್ನು ಪಡೆದ ಮಂಗಳೂರು ಹೊರವಲಯದ ಕಾಪು ಮೂಲದ ಸಚಿನ್ ಶೆಟ್ಟಿ ಅವರು ಸಿಕ್ಕಿಂ,ಹಿಮಾಚಲಪ್ರಧೇಶ,ಉತ್ತರಖಾಂಡ್‌ ಮತ್ತು ನೇಪಾಲ್‌ ಗೆ ತನ್ನ ಮೋಟಾರುಬೈಕ್‌ ನಲ್ಲಿ ಸವಾರಿ ಮಾಡುವ ಮೂಲಕ ಪ್ರಯಾಣ ಬೆಳೆಸಿದ್ದಾರೆ.

    ತುಳುನಾಡಿನ ಬಗ್ಗೆ ಹೆಚ್ಚು ಆಶಕ್ತಿಯನ್ನು ಹೊಂದಿರುವ ಇವರು ತುಳುನಾಡಿನ,ಆಚಾರ- ವಿಚಾರ ಮತ್ತು ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಹಾಗೂ ತುಳು ಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರಿಸುವ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರು.
    ಸಚಿನ್‌ ಶೆಟ್ಟಿ ಅವರು ತಮ್ಮ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ (ಬುಲೆಟ್) ಮೋಟಾರ್‌ಬೈಕ್‌ನಲ್ಲಿ ನಾಲ್ಕು ಕ್ಯಾಮೆರಾಗಳನ್ನು ಅಳವಡಿಸಿಕೊಂಡು 16 ರಾಜ್ಯಗಳನ್ನು ಸುತ್ತಿದವರು, ಅಲ್ಲಿ ಅವರ ಪ್ರಯಾಣದ ಸಮಯದಲ್ಲಿ ಅವರು ಹಾದುಹೋಗುವ ಸ್ಥಳಗಳ ಜೀವನ, ಸಂಸ್ಕೃತಿ ಮತ್ತು ಪರಂಪರೆಯನ್ನು ನಿರೂಪಣೆಯೊಂದಿಗೆ ದಾಖಸಿದ್ದಾರೆ.
    ಅದೇ ರೀತಿ ಅವರು ಫೆಬ್ರವರಿ .26.2022 ರಂದು ತನ್ನ ಮೋಟಾರು ಬೈಕ್‌ ಸವಾರಿಯನ್ನು ಸಿಕ್ಕಿಂ,ಹಿಮಾಚಲಪ್ರಧೇಶ,ಉತ್ತರಖಾಂಡ್‌ ಮತ್ತು ನೇಪಾಲ್‌ ಗೆ ಪ್ರಯಾಣ ಬೆಳೆಸಿದ್ದು ಸುಮಾರು 7500 ಕಿ.ಮೀಗಳನ್ನು 50 ದಿನಗಳಲ್ಲಿ ಪೂರ್ಣಗೊಳಿಸುವಂತೆ ಬೈಕ್‌ ಸವಾರಿ ಹೊರಟಿದ್ದಾರೆ. ಇವರ ಈ ಪ್ರಯಾಣ ಯಶಸ್ವಿಯಾಗಲಿ ಎಂದು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಾಕಾಧ್ಯಕ್ಷ ಯೋಗಿಶ್‌ ಶೆಟ್ಟಿ ಜೆಪ್ಪು ಹಾಗೂ ತುಳುನಾಡ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಶುಭಹಾರೈಸಿದ್ದಾರೆ.

    ತುಳುನಾಡ ರಕ್ಷಣಾ ವೇದಿಕೆ ಈ ಹಿಂದೆಯೂ ಸಚಿನ್‌ ಶೆಟ್ಟಿಯವರ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಸನ್ಮಾನಿಸಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss