ಉಳ್ಳಾಲ: ಒಂಟಿಯಾಗಿ ದೇಶ-ವಿದೇಶವನ್ನು ಸುತ್ತಾಟ ಮಾಡಿದ ಉಳ್ಳಾಲ ಅಳೇಕಲದ ನಿವಾಸಿ ಸೈಯದ್ ಮುಹಮ್ಮದ್ ಸಲೀಂ ತಂಙಳ್ (31) ನಿಧನರಾಗಿದ್ದಾರೆ. ಇಂದು ಮಧ್ಯಾಹ್ನ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯಲ್ಲಿ ಸಲೀಂ ತಂಙಳ್ ನಿಧನರಾಗಿದ್ದಾರೆ. ಅವಿವಾಹಿತರಾಗಿದ್ದ ಸಲೀಂ ಕೆಲವು ತಿಂಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದು ಅವರನ್ನ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಬುಲೆಟ್ ರೈಡರ್ ಆಗಿದ್ದ ಸಲೀಂ ಕುವೈಟ್ ನಲ್ಲಿ ಉದ್ಯೋಗದಲ್ಲಿದ್ದರು.39 ದಿವಸಗಳಲ್ಲಿ ಬುಲೆಟ್‌ನಲ್ಲೇ 12,635 ಕಿ.ಮೀ ಏಕಾಂಗಿಯಾಗಿ ಸಂಚರಿಸಿ ಅವರು ಗಮನ ಸೆಳೆದಿದ್ದರು.

