ಬೆಂಗಳೂರು : ಕರ್ನಾಟಕದಲ್ಲಿ ಬೈಕ್ ಆ‍್ಯಂಬುಲೆನ್ಸ್ ಸೇವೆ ಸ್ಥಗಿತಗೊಳಿಸಿ ರಾಜ್ಯ ಆರೋಗ್ಯ ಇಲಾಖೆ ಆದೇಶಿಸಿದೆ.
ರಾಜ್ಯದಲ್ಲಿ 108 ಆಯಂಬುಲೆನ್ಸ್ ಸೇವೆ ಹೆಚ್ಚಿರುವುದರಿಂದ ರಾಜ್ಯದಲ್ಲಿ ಬೈಕ್ ಆ‍್ಯಂಬುಲೆನ್ಸ್ ಸೇವೆ ಅಗತ್ಯವಿಲ್ಲ ಎಂದು ನಿರ್ಧರಿಸಿ ಬೈಕ್ ಆಂಬುಲೆನ್ಸ್ ಸೇವೆ ನಿಷೇಧಗೊಳಿಸಿದೆ.
ಕರೆ ಮಾಡಿದ ಕೂಡಲೇ 108 ಆ‍್ಯಂಬುಲೆನ್ಸ್ ಸೇವೆ ಸಿಗುತ್ತದೆ, ಹಾಗಿದ್ದಾಗ ಬೈಕ್ ಆಂಬುಲೆನ್ಸ್ ಸೇವೆಯ ಅಗತ್ಯವಿಲ್ಲ ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತ ಡಿ ರಂದೀಪ್ ತಿಳಿಸಿದ್ದಾರೆ.
ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದ್ದ 108 ಆಯಂಬುಲೆನ್ಸ್ ಸೇವೆ ಸಹಾಯವಾಣಿಯ ತಾಂತ್ರಿಕ ದೋಷ ನಿವಾರಣೆಯಾಗಿದ್ದು, ನಿನ್ನೆಯಿಂದ ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿದೆ.
108 ಆಯಂಬುಲೆನ್ಸ್ ಸೇವೆ ನಿರ್ವಹಿಸುತ್ತಿರುವ ಜಿವಿಕೆ ಸಂಸ್ಥೆಯ ತಂತ್ರಾಂಶದಲ್ಲಿ ಶನಿವಾರ ಸಂಜೆಯಿಂದ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಕರೆಗಳನ್ನು ಸ್ವೀಕರಿಸಲಾಗದೇ ಸಾಧ್ಯವಾಗದೇ ಆಯಂಬುಲೆನ್ಸ್ ಗಳು ಲಭ್ಯವಾಗದೆ ರೋಗಿಗಳು ಪರದಾಡುವಂತಾಗಿತ್ತು. ಸೋಮವಾರ 108 ಆಯಂಬುಲೆನ್ಸ್ ಸಹಾಯವಾಣಿಯಲ್ಲಿ ತಾಂತ್ರಿಕ ದೋಷ ಸರಿಪಡಿಸಲಾಗಿದ್ದು, ಸಹಜ ಸ್ಥಿತಿಗೆ 108 ಆಯಂಬುಲೆನ್ಸ್ ಸೇವೆ ಮರಳಿದೆ.
