ಕೇರಳ: ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆಯನ್ನು ಸೃಷ್ಠಿಸಿ, ಕೆಜಿಎಫ್-2 ದಾಖಲೆಯನ್ನು ಉಡೀಸ್ ಮಾಡಿದ್ದಂತ ಕಾಂತಾರ ಚಿತ್ರದಲ್ಲಿನ ವರಾಹ ರೂಪಂ ಹಾಡಿಗೆ ಕೇರಳ ಹೈಕೋರ್ಟ್ ತಡೆ ನೀಡಿತ್ತು.
ಇದೀಗ ಮತ್ತೆ ವರಾಹ ರೂಪಂ ಹಾಡನ್ನು ಚಿತ್ರದಲ್ಲಿ ಬಳಕೆ ಮಾಡುವುದಕ್ಕೆ ಅನುಮತಿಸಿ ಹೊಸದಾಗಿ ಆದೇಶಿಸಿದೆ.
ಕೇರಳದ ತೆಕ್ಕುಡಂ ಬ್ರಿಡ್ಜ್ ಬ್ಯಾಂಡ್ ನ ನವರಸಂ ಹಾಡಿನ ಟ್ಯೂನ್ ಅನ್ನು ಕನ್ನಡದ ಕಾಂತಾರ ಚಿತ್ರದಲ್ಲಿನ ವರಾಹ ರೂಪಂ ನಲ್ಲಿ ಬಳಕೆ ಮಾಡಲಾಗಿದೆ ಎಂಬುದಾಗಿ ತೈಕ್ಕುಡಂ ಬ್ರಿಡ್ಜ್ ಕೇರಳ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದಂತ ನ್ಯಾಯಪೀಠವು ಒಪ್ಪಿಗೆ ಇಲ್ಲದೇ ಟ್ಯೂನ್ ಬಳಕೆ ಮಾಡಿದ್ದಕ್ಕೆ ತಡೆಯಾಜ್ಞೆ ಹೊರಡಿಸಿತ್ತು.
ಆದ್ರೇ ಹೊಂಬಾಳೆ ಫಿಲ್ಮ್ ನಿಂದ ಕೇರಳ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ, ಪ್ರೇಕ್ಷಕರು ನೀಡಿದಂತ ಅಭಿಪ್ರಾಯವನ್ನು ಪರಿಗಣಿಸಬಾರದು. ನಾವು ತೆಕ್ಕುಡಂ ಬ್ರಿಡ್ಜ್ ಅವರ ಟ್ಯೂನ್ ಕದ್ದು ಬಳಕೆ ಮಾಡಿಲ್ಲ ಎಂಬುದಾಗಿ ಹೇಳಿತ್ತು. ಈ ಮನವಿ ಪುರಸ್ಕರಿಸಿದಂತ ಕೋರ್ಟ್, ಇದೀಗ ಹೊಸ ಆದೇಶದಲ್ಲಿ ಕಾಂತಾರ ಚಿತ್ರದ ವರಾಹ ರೂಪಂ ಹಾಡಿಗೆ ನೀಡಿದ್ದಂತ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಈ ಮೂಲಕ ಕಾಂತಾರ ಚಿತ್ರ ತಂಡಕ್ಕಿ ಬಿಗ್ ರಿಲೀಫ್ ನೀಡಿದೆ.