Tuesday, July 16, 2024
spot_img
More

  Latest Posts

  ಉಳ್ಳಾಲ: ಮುನ್ನೂರು ಗ್ರಾಮ ಪಂಚಾಯತ್‌ ಸದಸ್ಯ ಭುಜಂಗ ರೈ ನಿಧನ..!

  ಉಳ್ಳಾಲ: ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮ ಪಂಚಾಯತ್‌ ಸದಸ್ಯ, ಸಿಪಿಐಎಂ ಮುಖಂಡ ಅಸೌಖ್ಯದಿಂದ ಜು.19ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

  ಕುತ್ತಾರು ಮದಕ ನಿವಾಸಿ ಭುಜಂಗ ರೈ (74) ಮೃತರು.

  ಮೂಲತ: ಕಾಸರಗೋಡು ನಿವಾಸಿಯಾಗಿದ್ದ ಅವರು ಕುತ್ತಾರು ಮದಕಕ್ಕೆ 30 ವರ್ಷಗಳ ಹಿಂದೆ ಬಂದಿದ್ದರು.

  ರಿಕ್ಷಾ ಚಾಲಕರಾಗಿ ವೃತ್ತಿ ನಿರ್ವಹಿಸುತ್ತಿದ್ದರು. ಸಿಪಿಐಎಂ ಪಕ್ಷದ ಚಟುವಟಿಕೆಗಳು ಹಾಗೂ ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿದ್ದರು.

  ಯಕ್ಷಗಾನ ಕಲಾವಿದರೂ ಆಗಿದ್ದ ಅವರು ಆಂಗ್ಲ ಭಾಷೆಯಲ್ಲಿ ಪರಿಣತರಾಗಿದ್ದರು.

  1999 ರಲ್ಲಿ ಮುನ್ನೂರು ಗ್ರಾಮ ಪಂಚಾಯತಿನ ಸಂತೋಷನಗರ ವಾರ್ಡಿನಿಂದ ಸ್ಪರ್ಧಿಸಿ ಸದಸ್ಯರಾಗಿದ್ದರು.

  ಬಳಿಕ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿ 4 ನೇ ವಾರ್ಡಿನಿಂದ ಆಯ್ಕೆಯಾಗಿದ್ದರು.

  ಕಾಂಗ್ರೆಸ್ ಅಭ್ಯರ್ಥಿಗಳೇ ತಾಲೂಕು ಪಂಚಾಯತ್‌ ಸದಸ್ಯರಾಗುತ್ತಿದ್ದ ಸಂದರ್ಭ ಅಂಬ್ಲಮೊಗರು- ಮುನ್ನೂರು ಗ್ರಾಮದಿಂದ 1995ರ ಅವಧಿಯಲ್ಲಿ ಪ್ರಥಮವಾಗಿ ಸ್ಪರ್ಧಿಸಿ ಎದುರಾಳಿ ಅಭ್ಯರ್ಥಿಯಿಂದ ಕೇವಲ 7 ಮತಗಳ ಅಂತರದಲ್ಲಿ ಪರಾಜಿತರಾಗಿದ್ದರು.

  ಕಳೆದ ಐದು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

  ಜ್ಯೋತಿಷ್ಯ ಶಾಸ್ತ್ರವನ್ನು ಮನೆಯಲ್ಲಿ ನಡೆಸುತ್ತಿದ್ದರು. ಪುತ್ರ 1ರ ಹರೆಯದವನಾಗಿದ್ದ ಸಂದರ್ಭದಲ್ಲಿ ಪತ್ನಿಯನ್ನು ಅಗಲಿದ್ದ ಅವರು ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

  ಇಂದು ನಡೆಯ ಬೇಕಾಗಿದ್ದ ಮುನ್ನೂರು ಗ್ರಾಮ ಪಂಚಾಯತ್‌ ನ ಮಾಸಿಕ ಸಾಮಾನ್ಯ ಸಭೆಯನ್ನು ಮೃತರ ಗೌರವಾರ್ಥ ರದ್ದು ಪಡಿಸಲಾಗಿದೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss