ಮಡಂತ್ಯಾರು ಘಟಕದ 2022 ಸಾಲಿನ ಅಧ್ಯಕ್ಷರಾಗಿ ಜೆಸಿ ಭರತ್ ಶೆಟ್ಟಿ ಹಾರಬೆ ಇವರು ಆಯ್ಕೆ ಆಗಿರುತ್ತಾರೆ.ಜನವರಿ 1ರಂದು ಜೆಸಿ ಪ್ರಸನ್ನ ಶೆಟ್ಟಿ ಯವರ ಅದ್ಯಕ್ಷತೆಯಲ್ಲಿ ಕ್ಷಿರಾಂಬುದಿ ಸಬಾಭವನ ಮಡಂತ್ಯಾರುನಲ್ಲಿ ಘಟಕ ಸಭೆ ನಡೆಯಿತು.ಜೆಸಿ ಕಾರ್ಯದರ್ಶಿ ಚಿತರಂಜನ್ ವರದಿ ವಾದಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ಸದಸ್ಯರು ವರ್ಷದ ಕಾರ್ಯಕ್ರಮಗಳ ಬಗ್ಗೆ ಮೆಲುಕು ಮತ್ತು ಮುಂದಿನ ಕಾರ್ಯಕ್ರಮಗಳ ಬಗ್ಗೆ ಅವಲೋಕನ ಮಾಡಲಾಯಿತು.ಜೆಸಿ ನಿಯಮದಂತೆ ನಿಕಟ ಪೂರ್ವ ಅಧ್ಯಕ್ಷರಾದ ಪ್ರಶಾಂತ ಕಂಡೆತ್ಯಾರ್ ಮುಂದಿನ ಅಧ್ಯಕ್ಷರ ಆಯ್ಕೆ ಕಾರ್ಯಕ್ರಮ ನೆರವೇರಿಸಿದರು.ಗೌರವನ್ವಿತಾ ಪೂರ್ವಧ್ಯಕ್ಷರಾದ ಜೆಸಿ ಪ್ರಭಾಕರ್ ಶೆಟ್ಟಿ, ಜೆಸಿ ಪ್ರಶಾಂತ್ ಬಾಳಿಗ,ಜೆಸಿ ಮೇಧಾವಿ ಎಂ, ಜೆಸಿ ಜಯೇಶ್ ಬರೆಟ್ಟೋ, ಜೆಸಿ ನವೀನ್ ಕೊಡ್ಲಕ್ಕೆ ಉಪಸ್ಥಿತರಿದ್ದು ನೂತನ ಅಧ್ಯಕ್ಷರಿಗೆ ಮತ್ತು ಸಂಸ್ಥೆಗೆ ಶುಭಹಾರೈಸಿದರು.ಮುಂದಿನ ಕಾರ್ಯದರ್ಶಿಯಾಗಿ ಅಜಯ್ ಶೆಟ್ಟಿ ಶೆಟ್ಟಿ ಯವರನ್ನು ಆಯ್ಕೆ ಮಾಡಲಾಯಿತು,ಜೆಜೆಸಿ ಅಧ್ಯಕ್ಷರಾದ ಗಣೇಶ್ ಕೋಟೆ ಸಹಕರಿಸಿದರು.ಕೊನೆಗೆ ಕಾರ್ಯದರ್ಶಿಯವರು ಧನ್ಯವಾದ ನೀಡಿದರು.
